Easy Yogasana: ಹತ್ತಾರು ಲಾಭವಿರುವ ಸುಲಭವಾದ ಈ ಯೋಗಾಸನವನ್ನು ಯಾರು ಬೇಕಾದ್ರೂ ಮಾಡಬಹುದು

Easy Yogasana: ಯೋಗಾಸನವನ್ನು ಮಾಡಲು ಕೆಲವೊಂದಿಷ್ಟು ನಿಯಮಗಳಿವೆ. ಗುರುವಿನ ಮೂಲಕವೇ ಕಲಿತು ಅಭ್ಯಾಸ ಮಾಡಬೇಕು, ಸಡಿಲವಾದ ಬಟ್ಟೆ ಧರಿಸಬೇಕು ಎಂಬ ನಿಯಮವಿದೆ. ಅಂತೆಯೇ ಯೋಗಾಸನ (Yogasana) ಮಾಡಲು ಸೂಕ್ತವಾದ ಸಮಯದ ಅವಶ್ಯಕತೆಯೂ ಇದೆ. ಆದರೆ ಈ ಒಂದು ಆಸನ ಮಾಡಲು ಯಾವ ಸೂಕ್ತ ಸಮಯದ ಅವಶ್ಯಕತೆಯೂ ಇಲ್ಲ. ಹಾಗೆಯೇ ಹತ್ತಾರು ಲಾಭದಾಯಕ ಅಂಶಗಳನ್ನು ಈ ಆಸನ ಹೊಂದಿದೆ, ಹಾಗಾದರೆ ಈ ಆಸನ ಯಾವುದು ಅಂತ ಕೇಳ್ತೀರಾ?

ಅದುವೇ ವಜ್ರಾಸನ. ಯೋಗಾಸನದ ಕನಿಷ್ಠ ತಿಳುವಳಿಕೆ ಇರುವಂತಹ ವ್ಯಕ್ತಿಗೂ ಕೂಡಾ ವಜ್ರಾಸನದ ಪರಿಚಯ ಇದ್ದೇ ಇರುತ್ತದೆ. ಈ ಆಸನವನ್ನು ಮಾಡಲು ಇಂತಹದ್ದೇ ಸಮಯ ಬೇಕು ಎಂಬ ಕಟ್ಟುಪಾಡಿಲ್ಲ. ಬೇರೆಲ್ಲ ಆಸನಗಳನ್ನು ಊಟದ ನಂತರ ಮಾಡಬಾರದು ಎಂಬ ನಿಯಮವಿದೆ. ಆದರೆ ವಜ್ರಾಸನಕ್ಕೆ ಈ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ.

ಜಗತ್ತಿನಲ್ಲಿ ಅತ್ಯಂತ ಗಟ್ಟಿ ವಸ್ತು ಯಾವುದೆಂದರೆ ಅದು ವಜ್ರ. ಈ ಆಸನದ ಹೆಸರು ಕೂಡ ‘ವಜ್ರ’ ಆಸನ. ವಜ್ರ ಎಂದರೆ ಗಟ್ಟಿ ಎನ್ನುವಂತಹ ಅರ್ಥವಿದೆ. ಅಂದರೆ ಈ ಆಸನ ಮಾಡಿದವರಿಗೆ ಗಟ್ಟಿತನದ ಲಾಭ ದೊರೆಯುತ್ತದೆ. ವಜ್ರಾಸನವು ಕಾಲಿನ ಸ್ನಾಯುಗಳನ್ನು ಬಲಿಷ್ಠ ಗೊಳಿಸುತ್ತದೆ. ಯೋಗಾಸನದಲ್ಲಿ ಮಾಡುವ ಕೆಲವೊಂದಿಷ್ಟು ಆಸನಗಳು ಕೂಡ ವಜ್ರಾಸನದಿಂದಲೇ ಪ್ರಾರಂಭವಾಗುತ್ತದೆ.

ವಜ್ರಾಸನವನ್ನು ಮಾಡಲು ಅಷ್ಟೇನೂ ನಿಯಮಗಳಿಲ್ಲದಿದ್ದರೂ ಆಸನ ಮಾಡುವಾಗ ಸೂಕ್ತ ಕ್ರಮಗಳನ್ನು ಅನುಸರಿಸಬೇಕು.
·        ಸಮತಟ್ಟಾದ ನೆಲದ ಮೇಲೆ ಯೋಗ ಮ್ಯಾಟ್ ಅಥವಾ ಮೆದುವಾದ ಬಟ್ಟೆಯನ್ನು ಹಾಸಿ ಕಾಲುಗಳನ್ನ ಮಡಚಿ ಬೆರಳುಗಳು ಹಿಮ್ಮುಖವಾಗಿರುವಂತೆ ಮಂಡಿಯೂರಿ ಕೂರಬೇಕು.
·        ಎರಡು ಮೊಣಕಾಲುಗಳ ನಡುವೆ ನಾಲ್ಕು ಬೆರಳುಗಳ ಅಂತರವಿರಬೇಕು.
·        ಹಿಮ್ಮುಖವಾಗಿರುವ ಕಾಲು ವಕ್ರವಾಗಿರದಂತೆ ನೋಡಿಕೊಳ್ಳಬೇಕು
·        ಆಸನದಲ್ಲಿ ಕುಳಿತಿರುವಾಗ ಬೆನ್ನು ಮೂಳೆ ನೆರವಾಗಿರಬೇಕು.

ಈ ಆಸನವು ಎಷ್ಟೇ ಸರಳವಾಗಿದ್ದರೂ, ಆದ್ದರಿಂದ ಹತ್ತಾರು ಲಾಭದಾಯಕ ಅನುಕೂಲಗಳು ಇವೆ.
·        ಕಾಲಿನ ಸ್ನಾಯುಗಳು ಬಲಿಷ್ಠವಾಗುತ್ತದೆ. – ವಜ್ರಾಸನ ಮಾಡುವುದರಿಂದ ಕಾಲಿನ ಸ್ನಾಯುಗಳಲ್ಲಿ ವಿಶೇಷವಾದ ಶಕ್ತಿ ಉತ್ಪತ್ತಿಯಾಗಿ ಇದು ಕಾಲಿನ ಸ್ನಾಯುಗಳ ವೃದ್ಧಿಗೆ ಲಾಭದಾಯಕವಾಗಿದೆ.
·        ಮೊಳಕಾಲಿನ ನೋವು ನಿವಾರಣೆ. – ವಜ್ರಾಸನ ಮಾಡುವಾಗ ಮೊಣಕಾಲಿನ ಚಿಪ್ಪುಗಳು ಸಡಿಲಗೊಂಡು ಮೊಣಕಾಲಿನ ನೋವು ನಿವಾರಣೆಯಾಗುತ್ತದೆ.
·        ಜೀರ್ಣಕ್ರಿಯೆಗೆ ಸಹಕಾರಿ. – ಸೇವಿಸಿದ ಆಹಾರ ಬೇಗ ಜೀರ್ಣವಾಗಲು ವಜ್ರಾಸನ ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನ ಉತ್ತಮವಾಗಿರಿಸುತ್ತದೆ.
·        ಮುಟ್ಟಿನ ನೋವಿಗೆ ಪರಿಹಾರ – ಮಹಿಳೆಯರು ಮುಟ್ಟಿನ ಸಮಯದಲ್ಲಿ ವಜ್ರಾಸನ ಮಾಡುವುದರಿಂದ ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಬಹುದು.
·        ದೇಹ ಭಂಗಿಯನ್ನು ಉತ್ತಮಗೊಳಿಸುತ್ತದೆ – ವಜ್ರಾಸನದಿಂದ ಬೆನ್ನು ಮೂಳೆ ನೇರವಾಗುತ್ತದೆ. ಇದು ಉತ್ತಮ ದೇಹಭಂಗಿಗೆ ಸಹಕಾರಿಯಾಗಿದೆ.

ಹೀಗೆ ಇನ್ನು ಹತ್ತು ಹಲವಾರು ಪ್ರಯೋಜನಗಳು ವಜ್ರಾಸನದಿಂದ ಇದೆ. ಅತಿಯಾದ ಕಾಲು ನೋವು ಇರುವಾಗ, ಮೂಳೆಮುರಿತವಾದಾಗ ವಜ್ರಾಸನವನ್ನು ಮಾಡಬಾರದು. ಅತ್ಯಂತ ಸುಲಭವಾಗಿ ವಜ್ರಾಸನವನ್ನು ಮಾಡಲು ಸಾಧ್ಯವಾದುದರಿಂದ ಯಾವ ವಯಸ್ಸಿನವರಾದರು ಅಭ್ಯಾಸ ಮಾಡಬಹುದು, ಅದರ ವಜ್ರಾಸನದ ಲಾಭ ಪಡೆದುಕೊಳ್ಳಬಹುದು.

ಇದನ್ನೂ ಓದಿ: Women Health : ನೋಡಿ ಈ ಕಾರಣಕ್ಕೆ ನಿಮಗೆ ಮಹಿಳೆಯರೇ, ಆ ಸಮಸ್ಯೆ ಕಾಡುತ್ತೆ!

Leave A Reply

Your email address will not be published.