Finance Bill 2023: ಪ್ರತಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ 2023ರ ಹಣಕಾಸು ಮಸೂದೆ ಅಂಗೀಕಾರ! ಪ್ರಮುಖ ತಿದ್ದುಪಡಿಗಳೇನು?

Finance Bill 2023 :ಲೋಕಸಭೆ(Parliment) ಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೇ 2023ರ ಹಣಕಾಸು ಮಸೂದೆ(Finance Bill 2023) ಶುಕ್ರವಾರ ಮಂಡನೆಯಾಗಿದ್ದು, ಅನುಮೋದನೆಯನ್ನೂ ಪಡೆದುಕೊಂಡಿದೆ. ಈ ಮಸೂದೆಗೆ ಹಲವಾರು ಅಧಿಕೃತ ತಿದ್ದುಪಡಿ(Ammendment) ಗಳನ್ನು ಮಾಡಲಾಗಿದ್ದು, ಈ ಹಣಕಾಸು ಮಸೂದೆಯಲ್ಲಿನ ಅಂಶಗಳು 2023-24ನೇ ಸಾಲಿಗೆ ಅನ್ವಯಿಸಲಿವೆ.

ಹೌದು, ಅದಾನಿ ಗ್ರೂಪ್ ಆಫ್ ಕಂಪನಿಗಳ ಮೇಲಿನ ಆರೋಪಗಳ ಕುರಿತು ಜೆಪಿಸಿ(JPC) ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ಚರ್ಚೆಯಿಲ್ಲದೆ ಮಹತ್ವದ ‘ಹಣಕಾಸು ಮಸೂದೆ 2023’ ಅನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿತು. .1ರಂದು ಕೇಂದ್ರ ಬಜೆಟ್ ಜೊತೆಗೆ ಮಂಡನೆಯಾದ ಈ ಹಣಕಾಸು ಮಸೂದೆಗೆ ಹಣಕಾಸು ಸಚಿವೆ 64 ಅಧಿಕೃತ ತಿದ್ದುಪಡಿಗಳನ್ನು ಮಾಡಿದ್ದಾರೆ.ಈ ಹಣಕಾಸು ಮಸೂದೆಯಲ್ಲಿನ ಅಂಶಗಳು 2023-24ನೇ ಸಾಲಿಗೆ ಅನ್ವಯಿಸಲಿವೆ.

ಸದನವು ವಿಧೇಯಕವನ್ನು ಕೈಗೆತ್ತಿಕೊಳ್ಳುತ್ತಿರುವಾಗ, ಹಲವಾರು ವಿರೋಧ ಪಕ್ಷದ ಸದಸ್ಯರು ಜೋರಾಗಿ ಘೋಷಣೆಗಳನ್ನು ಕೂಗಿದರು ಮತ್ತು ಅಮೆರಿಕ ಮೂಲದ ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಸಮೂಹದ ಕಂಪನಿಗಳ ಮೇಲಿನ ಆರೋಪಗಳನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒತ್ತಾಯಿಸುವ ಫಲಕಗಳನ್ನು ಪ್ರದರ್ಶಸಿದರು. ಜೊತೆಗೆ ರಾಹುಲ್ ಗಾಂಧಿಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಿ’ ಮತ್ತು ‘ನಾವು ಬ್ರಿಟಿಷರ ವಿರುದ್ಧ ಹೋರಾಡಿದ್ದೇವೆ, ನಾವು ಮೋದಿ ಮತ್ತು ಆರೆಸ್ಸೆಸ್ ವಿರುದ್ಧವೂ ಹೋರಾಡುತ್ತೇವೆ’ ಎಂಬ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿ ಪ್ರತಿಭಟಿಸಿದರು.

ಈ ನಡುವೆ ಸರ್ಕಾರಿ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವಂತೆ ಸರ್ಕಾರಕ್ಕೆ ಬಂದಿರುವ ಮನವಿಗಳನ್ನು ಸ್ವೀಕರಿಸಲಾಗಿದೆ. ಪಿಂಚಣಿ ವ್ಯವಸ್ಥೆಯ ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಉದ್ಯೋಗಿಗಳ ಬೇಡಿಕೆಗಳನ್ನು ಪರಿಹರಿಸಲು ಹಾಗೂ ಸಾಮಾನ್ಯ ನಾಗರಿಕರ ಆರ್ಥಿಕ ಸಂರಕ್ಷಣೆಗೆ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetaraman) ತಿಳಿಸಿದ್ದಾರೆ.

ಮಸೂದೆಯಲ್ಲಿ ಏನಿದೆ?
*ಸರ್ಕಾರಿ ಬಾಂಡ್, ಸಾಲಪತ್ರ ಇತ್ಯಾದಿಗೆ ಇನ್ಮುಂದೆ ತೆರಿಗೆ ವಿನಾಯಿತಿ ಭಾಗ್ಯವಿಲ್ಲ. ಒಂದು ಮ್ಯೂಚುವಲ್ ಫಂಡ್ ಸಂಸ್ಥೆ ತನ್ನ ಹೂಡಿಕೆದಾರರ ಹಣದಲ್ಲಿ ಶೇ.35ಕ್ಕಿಂತ ಹೆಚ್ಚಿನ ಮೊತ್ತವನ್ನು ದೇಶೀಯ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದಲ್ಲಿ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ.
*ಮ್ಯೂಚುವಲ್ ಫಂಡ್ ಗಳು ದೇಶೀಯ ಈಕ್ವಿಟಿಯಲ್ಲಿ ಶೇ.35ಕ್ಕಿಂತ ಕಡಿಮೆ ಮೊತ್ತ ಹೊಂದಿದ್ರೆ ಅವುಗಳಿಗೆ ಇಂಡೆಕ್ಸೇಷನ್ ಸೌಲಭ್ಯಗಳು ಸಿಗೋದಿಲ್ಲ. ಇವುಗಳನ್ನು ಅಲ್ಪಾವಧಿಯ ಕ್ಯಾಪಿಟಲ್ ಗೇನ್ಸ್ ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುವುದು.
*GIFT ನಗರದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕಿಂಗ್ ಶಾಖೆಗಳ ಆದಾಯದ ಮೇಲೆ 10 ವರ್ಷಗಳ ತನಕ ಶೇ.100ರಷ್ಟು ತೆರಿಗೆ ಕಡಿತದ ಪ್ರಯೋಜನ ನೀಡಲಾಗಿದೆ.
*ವಿದೇಶಿ ಕಂಪನಿಗಳು ಗಳಿಸುವ ರಾಯಲ್ಟಿ ಅಥವಾ ತಾಂತ್ರಿಕ ಶುಲ್ಕದ ಮೇಲಿನ ತೆರಿಗೆಯನ್ನು ಶೇ.10ರಿಂದ ಶೇ.20ಕ್ಕೆ ಏರಿಕೆ ಮಾಡಲಾಗಿದೆ.
*ಷೇರು ವಹಿವಾಟುಗಳ ಮೇಲಿನ ಎಸ್ ಟಿಟಿ ತೆರಿಗೆಯನ್ನು ಶೇ.25ಕ್ಕೆ ಹೆಚ್ಚಳ ಮಾಡಲಾಗಿದೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿರುವ ಕಂಪನಿಗಳ ಷೇರುಗಳ ಮಾರಾಟ ಮತ್ತು ಖರೀದಿಗೆ ವಿಧಿಸುವ ನೇರ ತೆರಿಗೆಯೇ ಎಸ್ ಟಿಟಿ. ಯಾವುದೇ ಹೂಡಿಕೆದಾರ ಷೇರು ಖರೀದಿಸಿದಾಗ ಅಥವಾ ಮಾರಾಟ ಮಾಡಿದಾಗ ಎಸ್ ಟಿಟಿ ಆವತಿಸಬೇಕು.

*ಉಳಿತಾಯದ ಹೊರತಾದ ವಿಮಾ ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
*ಏಂಜೆಲ್ ತೆರಿಗೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸ್ಟಾರ್ಟ್ ಅಪ್ ಗಳಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ.
*ಪ್ರಸ್ತುತ ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆದಾರ ವಾರ್ಷಿಕ 7ಲಕ್ಷ ರೂ. ತನಕ ಆದಾಯ ಹೊಂದಿದ್ರೆ ಆತ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ, ಆತ ಅಥವಾ ಆಕೆ ಆದಾಯ 7,00,100 ಲಕ್ಷ ರೂ. ಇದ್ರೆ 25,010ರೂ. ತೆರಿಗೆ ಪಾವತಿಸಬೇಕು. ಅಂದ್ರೆ 100ರೂ. ಹೆಚ್ಚುವರಿ ಆದಾಯ 25,010ರೂ. ತೆರಿಗೆಗೆ ಕಾರಣವಾಗಲಿದೆ. ಇದಕ್ಕೆ ಸಂಬಂಧಿಸಿ ಯಾವುದೇ ಬದಲಾವಣೆ ಮಾಡಿಲ್ಲ.

ಈ ವಿಧಾನವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗುವುದು ಎಂದು ಅವರು ಸದನಕ್ಕೆ ತಿಳಿಸಿದರು. ಹಣಕಾಸು ಮಸೂದೆ ಅಂಗೀಕಾರವಾದ ಕೂಡಲೇ ಕೆಳಮನೆಯನ್ನು ಮಾರ್ಚ್ 27ಕ್ಕೆ ಮುಂದೂಡಲಾಯಿತು. ಸದನ ಮುಂದೂಡಿದ ಬಳಿಕ ಪ್ರತಿಪಕ್ಷಗಳ ಸದಸ್ಯರು ತಮ್ಮ ಭಿತ್ತಿಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠಕ್ಕೆ ಎಸೆದ ದೃಶ್ಯ ಕಂಡು ಬಂತು.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ 2 ಕ್ಷೇತ್ರಗಳಿಂದ ಕಣಕ್ಕಿಳಿಯೋದು ಖಚಿತ : ಯತೀಂದ್ರ ಸಿದ್ದರಾಮಯ್ಯ! ಹಾಗಿದ್ರೆ ಆ ಎರಡು ಕ್ಷೇತ್ರಗಳು ಯಾವುವು?

Leave A Reply

Your email address will not be published.