Hero Bike : ಎಪ್ರಿಲ್ ನಿಂದ ಹೆಚ್ಚಾಗಲಿದೆ ಈ ದ್ವಿಚಕ್ರ ವಾಹನದ ಬೆಲೆ!

Hero Bike : ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ.  ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್(Electric Scooters) ಹಾಗೂ ಬೈಕ್ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಜನರ ನಿರೀಕ್ಷೆ ತಕ್ಕಂತೆ ವಿಭಿನ್ನ ವಿಶೇಷತೆ ಮೂಲಕ ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿವೆ. ಈ ನಡುವೆ ವಾಹನ ಪ್ರಿಯರಿಗೆ ಯುಗಾದಿ ಹಬ್ಬದ ಸಂಭ್ರಮದ ನಡುವೆ ಕಹಿಸುದ್ದಿಯೊಂದು ಹೊರ ಬಿದ್ದಿದೆ.

ಹೊಸ ವರ್ಷದ ಆರಂಭದಲ್ಲೇ ಹಲವು ಆಟೋಮೊಬೈಲ್(Auto Mobile) ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡಿದ್ದು, ಹೀರೋ ಮೋಟೋಕಾರ್ಪ್ ಇಂದು ಮಹತ್ವದ ಘೋಷಣೆ ಮಾಡಿದೆ. ಏಪ್ರಿಲ್ 1 ರಿಂದ ಹೀರೋ ಮೋಟೋಕಾರ್ಪ್(Hero MotoCorp) ಆಯ್ದ ಬೈಕ್ ಗಳ ಬೆಲೆ ಏರಿಕೆಯಾಗಲಿದೆ. ಹೀರೋ ಕಂಪನಿ( Hero Honda)ಎರಡನೇ ಹಂತದ ಬಿಎಸ್6 ಎಮಿಶನ್ ವಾಹನ ಉತ್ಪಾದನೆಯಲ್ಲಿ (Production) ತೊಡಗಿದ್ದು, ಹೀಗಾಗಿ ಉತ್ಪದನಾ ವೆಚ್ಚ ಹೆಚ್ಚಾಗಿದೆ. ಭಾರತದಲ್ಲಿ ಎಮಿಶನ್ ನಿಯಮವನ್ನು ಕಡ್ಡಾಯ ಮಾಡಲಾಗಿದೆ. ಇದರಿಂದಾಗಿ, ಗ್ರಾಹಕರಿಗೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಎರಡನೇ ಹಂತದ ಬಿಎಸ್6 ಎಂಜಿನ್ ಉತ್ಪಾದನೆ ಮಾಡುವಲ್ಲಿ ನಿರತವಾಗಿದೆ.

ಏಪ್ರಿಲ್ 1 , 2023ರಿಂದ ಹೀರೋ ಬೈಕ್(Hero Bike) ಬೆಲೆ(ಎಕ್ಸ್ ಶೋ ರೂಂ) ಏರಿಕೆಯಾಗಲಿದೆ. ಹೀರೋ ಮೋಟೋಕಾರ್ಪ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಇತ್ತೀಚೆಗೆ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಈ ನಡುವೆ ವಾಹನ ಕೊಳ್ಳುವ ಯೋಜನೆ ಹಾಕಿದವರಿಗೆ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್. ಇತ್ತೀಚೆಗೆ ಕಚ್ಚಾವಸ್ತುಗಳ ಬೆಲೆ ಏರಿಕೆ, ಆಮದು ಸುಂಕ, ಉತ್ಪಾದನಾ ವೆಚ್ಚ ಏರಿಕೆಯಿಂದ ಬೈಕ್ ಬೆಲೆ ಏರಿಕೆ ಆಗಲಿದ್ದು, ಆದರೆ ಗ್ರಾಹಕರಿಗೆ ಆರ್ಥಿಕ ಸಹಾಯ ನೀಡಲು ಕಂಪನಿ ಬದ್ಧವಾಗಿದೆ.ಏಪ್ರಿಲ್ 1 ರಿಂದ ಹೀರೋ ಬೈಕ್ ಅಥವಾ ಸ್ಕೂಟರ್ ಬುಕ್ ಮಾಡುವ ಗ್ರಾಹಕರು ಪರಿಷ್ಕತ ಬೆಲೆಗೆ ಅನುಗುಣವಾಗಿ ಪಾವತಿ ಮಾಡಬೇಕಾಗುತ್ತದೆ.ಈಗಾಗಲೇ ದ್ವಿಚಕ್ರ ವಾಹನ ಬುಕ್ ಮಾಡಿ, ಡೆಲವರಿಗಾಗಿ ಕಾಯುತ್ತಿರುವ ಗ್ರಾಹಕರ ಪಾವತಿ ಹಾಗೂ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದು.

ಇತ್ತೀಚೆಗೆ ಹೀರೋ( Hero Honda)ಹೀರೋ ಮೋಟೋಕಾಪ್ ಸೂಪರ್ ಸ್ಪ್ಲೆಂಡರ್ XTEC( Hero Honda Splendor) ಬಿಡುಗಡೆ ಮಾಡಿದ್ದು, ಕಂಪನಿಯ ಮಾಹಿತಿಯ ಅನುಸಾರ , ಶೇಕಡಾ 2 ರಷ್ಟು ಬೆಲೆ ಹೆಚ್ಚಳ ಮಾಡುವ ಅವಶ್ಯಕತೆಯಿದ್ದು, ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆ , ಬೈಕ್ ಬೆಲೆಯೂ ಹಚ್ಚಳ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೀರೋ ಮೋಟೋಕಾರ್ಪ್ ಮಾಹಿತಿ ನೀಡಿದೆ. ಹೀಗಾಗಿ, ಫ್ಯಾಮಿಲಿ ಬೈಕ್ ಎಂದೇ ಖ್ಯಾತಿ ಪಡೆದಿರುವ ಸ್ಪೆಂಡರ್ ಹೊಸ ರೂಪ, ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿ ಮಾಡಿತ್ತು. ಇದೀಗ, ಇದರ ಎಕ್ಸ್ ಶೋ ರೂಮ್ (Ex- Showroom) ಬೆಲೆ : 83,368 ರು. (ಡ್ರಮ್ ವೇರಿಯೆಂಟ್), 87,268 ರು. (ಡಿಸ್ಕ್ ವೇರಿಯೆಂಟ್)ಆಗಿದ್ದು, ಈ ಬೆಲೆಯೂ ಹೆಚ್ಚಳವಾಗಲಿದೆ. 125 ಸಿಸಿ ಸಾಮರ್ಥ್ಯದ ಸೂಪರ್ ಸ್ಪ್ಲೆಂಡರ್ XTEC ಬೈಕ್ನ )ಮೈಲೇಜ್ ಲೀಟರ್ಗೆ 68 ಕಿ. ಮೀ ನೀಡಲಿದ್ದು,ಇದು ಎರಡು ಮಾದರಿಗಳಲ್ಲಿ ಈ ಬೈಕ್ ದೊರೆಯಲಿದೆ.

ಸದ್ಯ ಹೀರೋ ಮೋಟೋಕಾರ್ಪ್ ಯಾವೆಲ್ಲಾ ಬೈಕ್ ಹಾಗೂ ಸ್ಕೂಟರ್ ಬೆಲೆ ಹೆಚ್ಚಳ ಮಾಡಲಿದೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಆದರೆ, ಹೀರೋ ಕಂಪನಿ ಅತೀ ಶೀಘ್ರದಲ್ಲೇ ಬೆಲೆ ಹೆಚ್ಚಳವಾಗಲಿರುವ ಬೈಕ್ ಮಾಹಿತಿಯನ್ನು ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆ ದ್ವಿಚಕ್ರವಾಹನಗಳ ಬೆಲೆ ಏರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Leave A Reply

Your email address will not be published.