Airtel prepaid offers : ತಿಂಗಳಿಗೆ ಕೇವಲ 250 ರೂ ರಿಚಾರ್ಜ್ ಮಾಡುವ ಮೂಲಕ ಆನಂದಿಸಬಹುದು ವಾರ್ಷಿಕ ಮಾನ್ಯತೆಯೊಂದಿಗೆ ಕರೆ, ಡೇಟಾ!

Airtel prepaid offers : ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿ ಬರುತ್ತಿರುವ ಪಡವೆಂದರೆ ಏರ್ಟೆಲ್. ಅತೀ ವೇಗ ಓಡುತ್ತಿರುವ ಈ ನೆಟ್ವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಹೊಸ ಹೊಸ ಯೋಜನೆಗಳನ್ನ ಪರಿಚಯಿಸುತ್ತ ಗ್ರಾಹಕರಿಗೆ ಹತ್ತಿರವಾಗುತ್ತಲೇ ಬಂದಿದೆ. ಅದರಂತೆ ಇದೀಗ ಏರ್ಟೆಲ್ ಹೊಸ ಪ್ರಿಪೇಯ್ಡ್ ರೀಚಾರ್ಜ್ (Airtel prepaid offers)ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

 

ಹೌದು. ಏರ್ಟೆಲ್ ವಾರ್ಷಿಕ ರೀಚಾರ್ಜ್ ಯೋಜನೆ 2999 ರೂ. ಬಿಡುಗಡೆ ಮಾಡಿದ್ದು, ಈ ಯೋಜನೆಯು 365 ದಿನಗಳ ವಾರ್ಷಿಕ ಮಾನ್ಯತೆಯೊಂದಿಗೆ ಕರೆ, ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಈ ವಾರ್ಷಿಕ ಯೋಜನೆಯನ್ನು l ಜಿಯೋ ಮತ್ತು ಏರ್ಟೆಲ್ ಎರಡೂ ನೀಡುತ್ತವೆ. ಜಿಯೋ ಮತ್ತು ಏರ್ಟೆಲ್ ನೀಡುವ ರೂ 2999 ಪ್ರಿಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿಯಾಗಿ ಉಚಿತ ಕರೆ ಮತ್ತು SMS ಆಯ್ಕೆಯು ಇದೆ. ಖುಷಿಯ ವಿಷಯ ಅಂದ್ರೆ ಈ ಯೋಜನೆಯ ತಿಂಗಳ ವೆಚ್ಚ ಕೇವಲ 250 ರೂ ಆಗಿದೆ.

ಈ ಯೋಜನೆಯಲ್ಲಿ ಒಂದು ವರ್ಷಕ್ಕೆ ಅಂದರೆ 365 ದಿನಗಳವರೆಗೆ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಅಲ್ಲದೆ ಅನ್ಲಿಮಿಟೆಡ್ 5G ಡೇಟಾ ಸಹ ಲಭ್ಯವಿರುತ್ತದೆ. ಏರ್ಟೆಲ್ 5G ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸುವ ಬಳಕೆದಾರರು ಅನ್ಲಿಮಿಟೆಡ್ 5G ಡೇಟಾ ಪಡೆಯುತ್ತಾರೆ. ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಸಹ ಲಭ್ಯವಿದ್ದು ಹೆಚ್ಚುವರಿಯಾಗಿ ಈ ಯೋಜನೆಯ ಬಳಕೆದಾರರು ಪ್ರತಿ ದಿನ 100 ಉಚಿತ SMS ಪಡೆಯುತ್ತಾರೆ. FASTag ರೀಚಾರ್ಜ್ಗಳಲ್ಲಿ 100 ರೂಪಾಯಿಗಳ ರಿಯಾಯಿತಿ, ಉಚಿತ Hellotune ಮತ್ತು ಉಚಿತ Wynk Music ಚಂದಾದಾರಿಕೆಯನ್ನು ಪಡೆಯುತ್ತಾರೆ.

ಏರ್ಟೆಲ್ ರೂ 265 ಯೋಜನೆಯನ್ನ ನೋಡುವುದಾದರೆ, ಅನ್ಲಿಮಿಟೆಡ್ 5G ಡೇಟಾವನ್ನು ಸಹ ನೀಡಲಾಗುತ್ತದೆ. ಈ  ಯೋಜನೆಯಲ್ಲಿ ರೂ 250 ರ ತಿಂಗಳ ವೆಚ್ಚವನ್ನು ಹೋಲಿಕೆ ಮಾಡಿದರೆ ರೂ 265 ರ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಮತ್ತು 28 ದಿನಗಳವರೆಗೆ ಪ್ರತಿದಿನ 100 SMS ಸೌಲಭ್ಯವನ್ನು ಒದಗಿಸಲಾಗುತ್ತಿದೆ. ರೂ 2999 ರ ಯೋಜನೆಯು ತಿಂಗಳ ವೆಚ್ಚದ ವಿಷಯದಲ್ಲಿ ಉತ್ತಮವಾಗಿದ್ದು, ಇದು ಹೆಚ್ಚುವರಿ ಡೇಟಾ ಮತ್ತು ಕಡಿಮೆ ದಿನಗಳ ವ್ಯಾಲಿಡಿಟಿಯೊಂದಿಗೆ ಅನೇಕ ಉಚಿತ ಫೀಚರ್ ಗಳನ್ನು ನೀಡುತ್ತದೆ.

Leave A Reply

Your email address will not be published.