Marriage : ಮದುವೆ ಮುಗಿಸಿ ಅತ್ತೆ ಮನೆಗೆ ಹೋಗಲು ನಿರಾಕರಿಸಿದ ವಧು ; ಕಾರಣ ಏನು ಗೊತ್ತಾ?

Uttar Pradesh: ಮದುವೆಯಾದ ಮೇಲೆ ವಧು (bride) ಗಂಡನ ಮನೆಗೆ ಹೋಗಲೇ ಬೇಕು. ಇದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ, ಇಲ್ಲೊಬ್ಬಳು ವಧು ತಾನು ಗಂಡನ ಮನೆಗೆ ಹೋಗಲಾರೆ ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಯಾಕೆ ಗೊತ್ತಾ? ನೀವು ಕಾರಣ ಕೇಳಿದ್ರೆ ಶಾಕ್ ಆಗೋದು ಖಂಡಿತ!!.

ಮದುವೆ (marriage) ಮುಗಿಸಿ ವಧು ಗಂಡನ (husband) ಮನೆಗೆ ತೆರಳುವ ವೇಳೆ ಮಾರ್ಗ ಮಧ್ಯೆ ವರ, ಆತನ ಕುಟುಂಬಸ್ಥರಿಗೆ ಶಾಕ್ ಕೊಟ್ಟಿದ್ದಾಳೆ. ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾಳೆ. ಸದ್ಯ ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಉತ್ತರ ಪ್ರದೇಶದ ಬನಾರಸ್ ನಿವಾಸಿ ವೈಷ್ಣವಿ ಎಂಬಾಕೆಯ ಮದುವೆ ರಾಜಸ್ಥಾನದ (Rajastan) ಬಿಕಾನೇರ್ ಗ್ರಾಮದ ರವಿ ಎಂಬಾತನೊಂದಿಗೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯ ಎಲ್ಲಾ ಮುಗಿದು ವಧುವಿನ ಹಸ್ತಾಂತರ ಸಮಾರಂಭದ ನಂತರ, ತನ್ನ ಮನೆ, ಮನೆಯವರನ್ನು ತೊರೆದು ವಧು ತನ್ನ ಅತ್ತೆ ಮನೆಗೆ ತೆರಳಿದಳು. ನವದಂಪತಿಗಳು ಹಾಗೂ ವರನ ಕುಟುಂಬಸ್ಥರು ಕಾರಿನಲ್ಲಿ ಊರಿನ ಕಡೆ‌ ತೆರಳಿದರು. ಆದರೆ, ಎಷ್ಟು ದೂರ ಸಾಗಿದರೂ ಆತನ ಊರು ಇನ್ನೂ ತಲುಪಿರಲಿಲ್ಲ.

ಸುಮಾರು ಏಳು ಗಂಟೆಗಳ ಪ್ರಯಾಣದ ನಂತರ ಕಾನ್ಪುರದ ಸರ್ಸಲ್ ಪ್ರದೇಶವನ್ನು ಕಾರು ತಲುಪಿತು. ಅಷ್ಟೊತ್ತಿಗೆ 400 ಕಿಲೋಮೀಟರ್ ಪ್ರಯಾಣ ಪೂರ್ಣಗೊಂಡಿತ್ತು. ಈ ವೇಳೆ ವಧುವಿಗೆ ತುಂಬಾ ದೂರ ಅನಿಸಿಬಿಟ್ಟಿತ್ತು. ಅಷ್ಟು ದೂರ ಪ್ರಯಾಣಿಸಿ ಸಾಕಾಗಿತ್ತು. ಕೊನೆಗೆ ಹೇಗೋ ವಧು ವರನ ಕುಟುಂಬಸ್ಥರನ್ನು ಇನ್ನು ಎಷ್ಟು ಕಿಲೋಮೀಟರ್ ಪ್ರಯಾಣಿಸಬೇಕು ಎಂದು ಕೇಳೇಬಿಟ್ಟಳು. ಮೊದಲೇ ತುಂಬಾ ದೂರ ಎಂದುಕೊಂಡಿದ್ದವಳಿಗೆ ಅವರು ಉತ್ತರ ಆಘಾತ ಉಂಟುಮಾಡಿದೆ. ಯಾಕೆ ಅಂತೀರಾ?

ರಾಜಸ್ಥಾನಕ್ಕೆ ಒಟ್ಟು 1300 ಕಿ.ಮೀ ದೂರವಿದೆ. ಇನ್ನೂ 900 ಕಿ.ಮೀ ಪ್ರಯಾಣಿಸಲು ಬಾಕಿ ಇದೆ ಎಂದು ಅವರು ಹೇಳಿದ್ದಾರೆ. ಅವರ ಮಾತು ಕೇಳಿ ವಧು ಹೌಹಾರಿದ್ದಾಳೆ. ಇನ್ನೂ ಅಷ್ಟು ದೂರ ಇದ್ಯಾ? ತಾನು ಅಲ್ಲಿಗೆ ತಲುಪುವಾಗ ಹೇಗಾಗುತ್ತೇನೋ ಎಂದು ವಧು ಪೂರ್ತಿ ಹೆದರಿಬಿಟ್ಟಳು. ಅಲ್ಲದೆ, ಕಾರು ನಿಲ್ಲಿಸಿ, ತಾನು ಅತ್ತೆ ಮನೆಗೆ ಹೋಗುವುದಿಲ್ಲ ಅಂತ ಅಳೋದಿಕ್ಕೆ ಶುರುಮಾಡಿದಳು. ಇದರಿಂದ ಕುಟುಂಬಸ್ಥರೆಲ್ಲಾ ಈಕೆಗೇನಾಯಿತು ಎಂದು ಗಾಬರಿಯಿಂದ ಅವಳನ್ನು ಸುತ್ತುವರಿದರು. ಈ ವೇಳೆ ಅಲ್ಲೇ ಇದ್ದ ಪೊಲೀಸ್ ಸ್ಪಂದನಾ ವಾಹನ ಸಿಬ್ಬಂದಿ ವಧು ಅಳುತ್ತಿರುವುದನ್ನು ಕಂಡು ಆಕೆಯ ಬಳಿ ಹೋಗಿದ್ದಾರೆ. ವಿಷಯ ತಿಳಿದ ನಂತರ ಮಹಾರಾಜಪುರ ಪೊಲೀಸರಿಗೆ ಮಾಹಿತಿ ನೀಡಿದರು.

ಮಹಾರಾಜಪುರ ಪೊಲೀಸರು ಸ್ಥಳಕ್ಕಾಗಮಿಸಿ ವಧುವಿನ ಬಳಿ ಏನಾಯಿತು? ಎಂದು ಕೇಳಿದ್ದಾರೆ. ವಧು ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಮದುವೆಯಾಗಿದ್ದು, ಗಂಡನ ಮನೆಗೆ ತೆರಳುತ್ತಿದ್ದೇನೆ. ಆದರೆ ಆತನ ಮನೆ ತುಂಬಾ ದೂರ ಇದೆ ಎಂದು ಮತ್ತೆ ಅಳಲಾರಂಭಿಸಿದಳು. ಅಲ್ಲದೆ, ಜೋರಾಗಿ ಅಳುತ್ತಾ ಮದುವೆಯನ್ನು ರದ್ದು ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದಳು. ಇದರಿಂದ ವರನ ಕುಟುಂಬಸ್ಥರಿಗೆ ಆಘಾತವಾದಂತಾಯಿತು.

ಆದರೆ, ಈ ವೇಳೆ ಯುವತಿಯ ತಾಯಿಗೆ ಫೋನ್ (phone) ಮೂಲಕ ವಿಷಯ ತಿಳಿಸಿದ್ದು, ಅವರು ಕೂಡ ಮಗಳ ಬೆಂಬಲಕ್ಕೆ ನಿಂತರು. ಮದುವೆಯನ್ನು ರದ್ದು ಮಾಡಿ ಮಗಳನ್ನು ವಾಪಸ್​ ಕಳುಹಿಸುವಂತೆ ತಿಳಿಸಿದರು. ಇದರಿಂದ ವರನ ಕಡೆಯವರು ಏನೂ ಮಾಡಲಾಗಲಿಲ್ಲ. ನಂತರ ಪೊಲೀಸರು ವಧುವನ್ನು ಉತ್ತರ ಪ್ರದೇಶದ ಆಕೆಯ ಮನೆಗೆ ಕಳುಹಿಸಿದ್ದಾರೆ. ಇಲ್ಲಿ ವರ ಹಾಗೂ ಆತನ ಕುಟುಂಬಸ್ಥರು ಬಂದು ದಾರಿಗೆ ಸುಂಕ ಇಲ್ಲ ಎಂದು ವಧುವಿಲ್ಲದೆ, ಹಾಗೇ ಊರಿಗೆ ಹೋರಟು ಹೋದರು.

ಇದನ್ನೂ ಓದಿ : ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವವರೇ ಇತ್ತ ಗಮನಿಸಿ!

 

Leave A Reply

Your email address will not be published.