Honda : ಹೋಂಡಾ ಕಂಪನಿಯಿಂದ ಬಿಗ್‌ ಅಪ್ಡೇಟ್‌! ಭಾರತದಲ್ಲಿ ಬರಲಿದೆ ಈ ಸ್ಕೂಟರ್!‌

Honda EV : ಇತ್ತೀಚೆಗೆ ಇವಿ ವಾಹನವನ್ನು ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಇವಿ ವಾಹನಗಳು (Honda EV) ಜನರ ಮನಸು ಗೆದ್ದಿದೆ ಎಂದರೆ ತಪ್ಪಾಗಲಾರದು. ಹಾಗೆಯೇ ಇದೀಗ ಹೋಂಡಾ ಕಂಪನಿ ತನ್ನ ಹವಾ ತೋರಿಸಲಿದೆ.

ಕಂಪನಿಯು ಹೋಂಡಾ ಆಕ್ಟಿವಾದ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದರೆ, ಅದು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದೆ. ಏಕೆಂದರೆ ಹೋಂಡಾ ಆಕ್ಟಿವಾ ಈಗಾಗಲೇ ಜನರಲ್ಲಿ ಬ್ರಾಂಡ್ ಆಗಿ ಮಾರ್ಪಟ್ಟಿದೆ ಮತ್ತು ಜನರು ಅದನ್ನು ಹೆಚ್ಚು ನಂಬುತ್ತಾರೆ. ಇದೇ ಕಾರಣದಿಂದ ಆಕ್ಟಿವಾ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಮಾರಾಟದ ವಿಷಯದಲ್ಲಿ ಬೇರೆ ಯಾವುದೇ ಸ್ಕೂಟರ್‌ಗಳು ಇದಕ್ಕೆ ಹತ್ತಿರವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅದರ ಎಲೆಕ್ಟ್ರಿಕ್ ಆವೃತ್ತಿ ಬಂದರೆ, ಅದು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತದೆ

ಈಗಾಗಲೇ ಶೈನ್ 100 ಸಿಸಿ ಬೈಕ್ ಬಿಡುಗಡೆ ಸಮಾರಂಭದಲ್ಲಿ, ಹೋಂಡಾ ಕಂಪನಿ ಮಾರ್ಚ್ 29ರಂದು ಭಾರತೀಯ ಮಾರುಕಟ್ಟೆಗೆ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಕುರಿತು ಮಾಹಿತಿ ಬಹಿರಂಗ ಪಡಿಸುವುದಾಗಿ ತಿಳಿಸಿದೆ. ಇದೇ ವೇಳೆಗೆ ತನ್ನ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನ ಆಕ್ಟಿವಾ 6ಜಿಗೆ ಆಧುನಿಕ ಸ್ಪರ್ಶ ನೀಡುವ ಯೋಜನೆ ಮಾಡುತ್ತಿದೆ.

ಈಗಾಗಲೇ ಗುಜರಾತ್‌ನ ವಿಠ್ಠಲಪುರದಲ್ಲಿರುವ ತನ್ನ ಉತ್ಪಾದನಾ ಸೌಲಭ್ಯದಲ್ಲಿ ಇವಿ ಉತ್ಪಾದನಾ ವ್ಯವಸ್ಥೆ ಅಳವಡಿಸಲು ಹೋಂಡಾ ಭರದ ಸಿದ್ಧತೆಯಲ್ಲಿದೆ.

ಹೋಂಡಾ ತನ್ನ ಇವಿ ವಾಹನಗಳ ಕಾರ್ಯಾಚರಣೆಯ ಜಾಲವಾಗಿ ಹೋಂಡಾ ಕರ್ನಾಟಕದ ನರಸಾಪುರದಲ್ಲಿರುವ ತನ್ನ ಮತ್ತೊಂದು ಘಟಕವನ್ನು ರೂಪಿಸಲಾಗಿದೆ.

ಹೋಂಡಾ ತರುವ ಈ ಆಕ್ಟಿವಾಗಳು ಬದಲಿಸಿಕೊಳ್ಳಬಹುದಾದ ಬ್ಯಾಟರಿಗಳೊಂದಿಗೆ ಬರುವ ನಿರೀಕ್ಷೆ ಇದ್ದು, ಮಾರುಕಟ್ಟೆಯಲ್ಲಿ TVS iQube Electric, Ather450X, Hero Vida V1, Simple One, Ola S1 ಇವಿಗಳೊಂದಿಗೆ ಪೈಪೋಟಿ ನಡೆಸಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ : NMPT Recruitment 2023: ಮಂಗಳೂರಿನಲ್ಲಿ ಉದ್ಯೋಗವಕಾಶ!!

Leave A Reply

Your email address will not be published.