Home Breaking Entertainment News Kannada Durex condoms : ಆಸ್ಕರ್ ಜಯಿಸಿದ ತಂಡಗಳನ್ನು ಅಭಿನಂದಿಸಿದ ಕಾಂಡೋಮ್ ಕಂಪೆನಿ ‘ಡ್ಯುರೆಕ್ಸ್’ ಹೇಳಿದ್ದೇನು ಗೊತ್ತಾ?...

Durex condoms : ಆಸ್ಕರ್ ಜಯಿಸಿದ ತಂಡಗಳನ್ನು ಅಭಿನಂದಿಸಿದ ಕಾಂಡೋಮ್ ಕಂಪೆನಿ ‘ಡ್ಯುರೆಕ್ಸ್’ ಹೇಳಿದ್ದೇನು ಗೊತ್ತಾ? ಯಪ್ಪಾ! ಹೀಗೂ ವಿಶ್ ಮಾಡ್ಬೋದಾ?

Durex Condoms

Hindu neighbor gifts plot of land

Hindu neighbour gifts land to Muslim journalist

Durex condoms :2023ನೇ ಸಾಲಿನಲ್ಲಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿದ್ದು, ಭಾರತ ಚಿತ್ರರಂಗದ ಅನೇಕ ವರ್ಷಗಳ ಕನಸು ನನಸಾದಂತಾಗಿದೆ ಸಾಮಾಜಿಕ ಜಾಲತಾಣದ ತುಂಬಾ ಆಸ್ಕರ್ ಪ್ರಶಸ್ತಿ ಸ್ವೀಕಾರ ಸಮಾರಂಭದ ವಿಡಿಯೋಗಳು ಹಾಗೂ ಫೋಟೋಗಳು ತುಂಬಿ ಹೋಗಿವೆ. ಆಸ್ಕರ್ ಪ್ರಶಸ್ತಿ ಗಳಿಸಿದ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಕೆಲವು ಬ್ರ್ಯಾಂಡ್ ಗಳು ಆಸ್ಕರ್ ಪ್ರಶಸ್ತಿ ಗಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ ತಮ್ಮ ಬ್ರ್ಯಾಂಡ್ ಪ್ರಚಾರ ಕೂಡ ಮಾಡುತ್ತಿವೆ. ಅದರಲ್ಲೂ ಕಾಂಡೋಮ್ ಕಂಪನಿಯಾದ ‘ಡುರೆಕ್ಸ್ ಇಂಡಿಯಾ’ (Durex condoms) ಆಸ್ಕರ್ ಪ್ರಶಸ್ತಿ ಗಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ‘ದಿ ಎಲಿಫೆಂಟ್ ವಿಸ್ಪರ್’ ಹಾಗೂ ‘ಆರ್ ಆರ್ ಆರ್’ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಡುರೆಕ್ಸ್ ಇಂಡಿಯಾ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಚಿತ್ರವೊಂದನ್ನು ಶೇರ್ ಮಾಡಿದೆ. ಈ ಚಿತ್ರಕ್ಕೆ ‘ಮಂಡೇ ಬ್ಲೂಸ್……ಯಾರದು?’ ಎಂದು ಪ್ರಶ್ನಿಸುವಂತಹ ಶೀರ್ಷಿಕೆಯೊಂದನ್ನು ನೀಡಲಾಗಿದೆ. ಅದಕ್ಕೆ ‘WHISPERing… to winning screams! Indeed a gRRReat night’ ಎಂಬ ಉತ್ತರವನ್ನೂ ನೀಡಲಾಗಿದೆ. ಇನ್ ಸ್ಟಾಗ್ರಾಮ್ ನಲ್ಲಿ ಡ್ಯುರೆಕ್ಸ್ ಇಂಡಿಯಾದ ಈ ಪೋಸ್ಟ್ ಗೆ ಅನೇಕ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಕ್ರಿಯಾಶೀಲ ಸಂದೇಶವನ್ನು ಸೃಷ್ಟಿಸಿದ ಕಂಪನಿಯ ಮಾರ್ಕೆಟಿಂಗ್ ತಂಡಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.

ಡ್ಯುರೆಕ್ಸ್ ಕಂಪನಿಯ ಮಾರ್ಕೆಟಿಂಗ್ ಹಾಗೂ ಪಿಆರ್ ತಂಡಗಳ ಸೃಜನಶೀಲತೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದ್ದು ‘ಉತ್ತಮ ಪಿಆರ್ ಗಾಗಿ ಡುರೆಕ್ಸ್ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ’ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು ‘ಈಗ ಡ್ಯುರೆಕ್ಸ್ ಮಾರ್ಕೇಟಿಂಗ್ ತಂಡ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ’ ಎಂದು ಬರೆದಿದ್ದಾರೆ.ಮತ್ತೊಬ್ಬರು ‘ಇವರು ಸೆಕ್ಸ್ ಜೊತೆಗೆ ಯಾವುದನ್ನು ಬೇಕಿದ್ರೂ ಲಿಂಕ್ ಮಾಡಬಲ್ಲರು’ ಎಂದು ಕಾಮೆಂಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಕೂಡ ಡ್ಯುರೆಕ್ಸ್ ಈ ಪೋಸ್ಟ್ ಹಾಕಿದೆ.

ಡುರೆಕ್ಸ್ ಕಾಂಡೋಮ್ ಕಂಪನಿ ಇಂಥ ಹಾಸ್ಯಭರಿತ ಕ್ರಿಯಾತ್ಮಕ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಕೆಲವು ಸಂದರ್ಭಗಳಲ್ಲಿ ಕೂಡ ಡುರೆಕ್ಸ್ ಇದೇ ಮಾದರಿಯ ಹಾಸ್ಯಭರಿತ ಸಂದೇಶಗಳ ಮೂಲಕ ತನ್ನ ಬ್ರ್ಯಾಂಡ್ ಪ್ರಚಾರ ಮಾಡಿತ್ತು. ಬಾಲಿವುಡ್ ನಟಿ ಆಲಿಯಾ ಭಟ್ ಮದುವೆಯಾದ ಎರಡು ತಿಂಗಳಿಗೆ ಗರ್ಭಿಣಿಯಾದ ಸಮಯದಲ್ಲಿ ಕೂಡ ಅವರಿಗೆ ಶುಭಾಶಯ ಕೋರಿ ಡುರೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಭಾರಿ ವೈರಲ್ ಆಗಿತ್ತು.

ರಣಬೀರ್ ನಟನೆಯ ಏ ದಿಲ್ ಹೇ ಮುಷ್ಕಿಲ್ ಚಿತ್ರದ ಚನ್ನ ಮೆರೆಯಾ ಹಾಡಿನ ಸಾಲನ್ನು ಬಳಿಸಿಕೊಂಡ ಡ್ಯುರೆಕ್ಸ್ ಕಾಂಡೋಮ ಕಂಪನಿ ‘ಮೆಹಫಿಲ್ ಮೇ ತೇರಿ, ಹಮ್ ತೋ ಕ್ಲೀಯರ್ಲಿ ನಹಿ ಥೆ’ ಎಂದು ಪೋಸ್ಟ್ ಹಾಕಿತ್ತು. ಅಂದರೆ ‘ನಿಮ್ಮ ಖುಷಿಯ ಕ್ಷಣದಲ್ಲಿ ಖಂಡಿತ ನಾವು ಇರಲಿಲ್ಲ’ ಎಂದು. ಈ ಪೋಸ್ಟ್ ನೋಡಿ ಕೂಡ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಒಟ್ಟಾರೆ ನಾನಾ ಸಂದರ್ಭ ಹಾಗೂ ಸನ್ನಿವೇಶವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲರ ಗಮನ ಸೆಳೆಯುವಂತಹ ಕ್ರಿಯಾತ್ಮಕ ಪೋಸ್ಟ್ ಗಳನ್ನು ಸೃಷ್ಟಿಸುವ ಡ್ಯುರೆಕ್ಸ್ ಇಂಡಿಯಾದ ಮಾರ್ಕೆಟಿಂಗ್ ಹಾಗೂ ಪಿಆರ್ ತಂಡದ ಸೃಜನಶೀಲತೆಗೆ ಮೆಚ್ಚುಗೆ ಸೂಚಿಸಲೇಬೇಕು ಬಿಡಿ.

 

 

ಇದನ್ನೂ ಓದಿ:Sonali Kulkarni : ಪುರುಷರ ಪರವಾಗಿ ಹೇಳಿಕೆ ನೀಡಿದ ನಟಿ ! ಇದನ್ನು ಕೇಳಿ ಗರಂ ಆದ ಮಹಿಳಾಮಣಿಗಳು!