Surprise Holiday: ಅಬ್ಬಾ! ಈ ಕಂಪೆನಿಯ ಉದ್ಯೋಗಿಗಳು ಎಷ್ಟು ಅದೃಷ್ಟವಂತರು! ಇವರಿಗೆ ನಿದ್ದೆ ಮಾಡೋಕಾಗಿಯೇ ರಜೆ ಘೋಷಿಸಲಾಗಿದೆ!

Surprise Holiday :ಕಂಪೆನಿಗಳಲ್ಲಿ, ಕಛೇರಿಗಳಲ್ಲಿ ಕೆಲಸ ಮಾಡುವವರು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ರಜೆ ಹಾಕುತ್ತಾರೆ. ಇನ್ನು ಕೆಲವೊಮ್ಮೆ ಏನಾದರೂ ಕಾರಣ ನಿಮಿತ್ತ ಕಂಪೆನಿಯೇ ತನ್ನ ಉದ್ಯೋಗಿಗಳಿಗೆ ರಜೆ ನೀಡುತ್ತದೆ. ಆದರೆ ಬೆಂಗಳೂರಿನ ಕಂಪನಿಯೊಂದು ತನ್ನ ಉದ್ಯೋಗಿಗಳ ಆರೋಗ್ಯ ಕ್ಷೇಮಕ್ಕಾಗಿ ಇಂದು ಆಫೀಸಿಗೆ ಬರಬೇಡಿ, ಮಲಗಿ ವಿಶ್ರಾಂತಿಸಿ ಎಂದು ರಜೆ(holiday)ಯನ್ನು ಘೋಷಿಸಿದೆ.

ಹೌದು, ಮಾರ್ಚ್ 17, ವಿಶ್ವ ನಿದ್ರಾ ದಿನ (World sleep day). ಹೀಗಾಗಿ ಬೆಂಗಳೂರು ಮೂಲದ ಕಂಪನಿಯೊಂದು ವಿಶ್ವ ನಿದ್ರಾ ದಿನವನ್ನು ಆಚರಿಸಲು ತನ್ನ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿದೆ. ಕಂಪೆನಿಯ ಸಿಬ್ಬಂದಿಗಳಿಗೆ ಹೆಚ್​​ಆರ್​​​​ ಡಿಪಾರ್ಟ್​ಮೆಂಟ್​​ನಿಂದ ಮೇಲ್​​ ಬಂದಿದ್ದು, ಸರ್ಪ್ರೈಸ್ ಹಾಲಿಡೇ,(Surprise Holiday) ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್ ಎಂದು ಸಂದೇಶವನ್ನು ಕಳುಹಿಸಲಾಗಿದೆ.

ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಲಾಗಿರುವ ಸ್ಕ್ರೀನ್‌ಶಾಟ್‌ನಲ್ಲಿ ‘ವಿಶ್ವ ನಿದ್ರಾ ಆಚರಣೆಯ ದಿನವಾದ ಮಾರ್ಚ್ 17, 2023 ರಂದು, ಎಲ್ಲಾ ವೇಕ್‌ಫಿಟ್ ಉದ್ಯೋಗಿಗಳಿಗೆ ರಜೆಯೆಂದು ಘೋಷಿಸಲಾಗಿದೆ. ಮತ್ತು ದೀರ್ಘ ವಾರಾಂತ್ಯವನ್ನು ಅನುಸರಿಸಲು, ಹೆಚ್ಚು ಅಗತ್ಯವಿರುವ ವಿಶ್ರಾಂತಿ ಪಡೆಯಲು ಇದು ಪರಿಪೂರ್ಣ ಅವಕಾಶವಾಗಿದೆ’ ಎಂದು ತಿಳಿಸಲಾಗಿದೆ.

ಕಂಪನಿಯು ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಪೋಸ್ಟ್ ಮಾಡಿದೆ. ಇಮೇಲ್‌ನ ವಿಷಯವು, ‘ಸರ್ಪ್ರೈಸ್ ಹಾಲಿಡೇ: ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್’ ಎಂಬ ಶೀರ್ಷಿಕೆಯನ್ನು ಒಳಗೊಂಡಿದೆ. ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್‌ನ 6ನೇ ಆವೃತ್ತಿಯ ಪ್ರಕಾರ 2022ರಲ್ಲಿ 21% ನಷ್ಟು ಜನರು ಕೆಲಸದ ಸಮಯದಲ್ಲಿ ನಿದ್ರೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. 21% ನಷ್ಟು ಮಂದಿ ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ ಬೆಳಗ್ಗೆ ಸುಸ್ತಾಗಿ ಏಳುತ್ತಾರೆ ಎಂದು ತಿಳಿದುಬಂದಿದೆ.

ಈ ಕಂಪೆನಿಯೂ ಸರ್ಪ್ರೈಸ್ ನೀಡಿದ್ದು, ಇದೇ ಮೊದಲಲ್ಲ. ಕಳೆದ ವರ್ಷ ವಿಶ್ರಾಂತಿಸುವ ಹಕ್ಕು (Right to Nap policy) ನೀಡಿದ್ದು, ಅದು ಎಲ್ಲಾ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಮಯದಲ್ಲಿ 30 ನಿಮಿಷಗಳ ಕಿರು ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿತು.

Leave A Reply

Your email address will not be published.