Sumalatha Ambareesh: ‘ಕಮಲ’ ಬೆಂಬಲಿಸಿರೋ ‘ಸುಮಲತಾ’ ಅಧಿಕೃತವಾಗಿ ಬಿಜೆಪಿ ಸೇರುವಂತಿಲ್ಲ! ಯಾಕೆ ಗೊತ್ತಾ? ಈ ಕುರಿತ ಕಾನೂನು ಏನನ್ನುತ್ತೆ?

Sumalatha : ಮಂಡ್ಯ(Mandya) ದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಅವರು ಬಿಜೆಪಿ(BJP) ಸೇರುತ್ತಾರೆ ಎಂಬ ಸುದ್ದಿ ಬಹಳ ಹಿಂದಿನಿಂದಲೂ ಚರ್ಚೆ ಆಗುತ್ತಿತ್ತು. ತೆರೆ ಮರೆಯಲ್ಲಿ ಈ ಕುರಿತು ಬಹಳ ಚರ್ಚೆಗಳು ನಡೆದಿದ್ದವು. ಆದರೆ ಇಂದು ಈ ವಿಚಾರವಾಗಿ ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ (Sumalatha) ಅವರು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸೋದಾಗಿ ಬಹಿರಂಗಗೊಳಿಸಿದ್ದಾರೆ. ಇದೆಲ್ಲದರ ನಡುವೆ ಇನ್ನೊಂದು ವಿಚಾರ ಏನೆಂದರೆ ಸದ್ಯ ಸುಮಲತಾ ಅವರು ಬಿಜೆಪಿಗೆ ಬೆಂಬಲ ಸೂಚಿಸಬಹುದೇ ಹೊರತು, ಅಧಿಕೃತವಾಗಿ ಪಕ್ಷ ಸೇರುವಂತಿಲ್ಲ! ಯಾಕೆ ಗೊತ್ತಾ? ಈ ಕುರಿತು ಭಾರತದ ಕಾನೂನು ಏನು ಹೇಳುತ್ತದೆ?

ಅಂದಹಾಗೆ 2019ರ ಲೋಕಸಭೆ ಚುನಾವಣೆಯಲ್ಲಿ(Parliment election) ಮಂಡ್ಯಾ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಗೆದ್ದ ಸುಮಲತಾ, ಬಿಜೆಪಿ ಸೇರುತ್ತಾರೆ ಎನ್ನಲಾಗಿತ್ತು. ಆದರೆ ಅವರು ಬಿಜೆಪಿಗೆ ಸೇರ್ಪಡೆಯಾಗಿರಲಿಲ್ಲ. ಈಗ ವಿಧಾನಸಭಾ ಚುನಾವಣೆ (Vidhan Sabha Election) ಹತ್ತಿರ ಬರುತ್ತಿದ್ದಂತೆ ಸುಮಲತಾ ಅಧಿಕೃತವಾಗಿ ಬಿಜೆಪಿಯನ್ನು ಸೇರುವ ಪ್ರಯತ್ನ ಮಾಡಿದ್ದರೂ, ಕಾನೂನಿನ ತೊಡಕಿನಿಂದ ಅದು ಸಾಧ್ಯವಾಗದೆ ಕೇವಲ ಪಕ್ಷವನ್ನು ಬೆಂಬಲಿಸೋದಾಗಿ ಘೋಷಣೆ ಮಾಡಿದ್ದಾರೆ. ಅವರು ಸಂವಿಧಾನದ 10ನೇ ಶೆಡ್ಯೂಲ್‌ನಲ್ಲಿರುವ (Schedule 10 of Indian Constitution) ಈ ಒಂದು ನಿಯಮದಿಂದಾಗಿ ಸದ್ಯ ಪಕ್ಷವನ್ನು ಸೇರಲು ಸಾಧ್ಯವಿಲ್ಲ.

ಹೌದು, ಸಂವಿಧಾನದ 10ನೇ ಷೆಡ್ಯೂಲ್​ನಡಿ ಪಕ್ಷ ಸೇರಲು ಅವಕಾಶವಿಲ್ಲ. ಈ ನಿಯಮದ ಪ್ರಕಾರ, ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದ ಆರು ತಿಂಗಳೊಳಗೆ, ಚುನಾಯಿತ ಪ್ರತಿನಿಧಿಗಳು ಯಾವುದಾದರೊಂದು ರಾಜಕೀಯ ಪಕ್ಷವನ್ನು ಮುಕ್ತವಾಗಿ ಸೇರ್ಪಡೆಯಾಗಬಹುದು. ಮೊದಲ ಆರು ತಿಂಗಳ ಅವಧಿ ಅಂತ್ಯವಾದ ಬಳಿಕ ರಾಜಕೀಯ ಪಕ್ಷವೊಂದನ್ನು ಅಧಿಕೃತವಾಗಿ ಸೇರಲು ಅವಕಾಶಗಳಿಲ್ಲ. ಲೋಕಸಭೆ ಅಥವಾ ರಾಜ್ಯಸಭೆ ಪೈಕಿ ಒಂದು ಸದನಕ್ಕೆ ನಾಮನಿರ್ದೇಶಿತವಾದ ಸದಸ್ಯರು ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸದಸ್ಯರು, ಹೀಗೆ ಆಯ್ಕೆಯಾದ 6 ತಿಂಗಳ ನಂತರ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರು ಅನರ್ಹಗೊಳ್ಳುತ್ತಾರೆ. ಅನರ್ಹಗೊಂಡ ಬಳಿಕ 6 ವರ್ಷದವರೆಗೆ ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ.

ಸಂಸದೆ ಸುಮಲತಾ ವಿಚಾರದಲ್ಲಿ ಆಗಿರುವುದೂ ಇದೇ. ಸಂಸದೆಯಾಗಿ ಆಯ್ಕೆಯಾದ 6 ತಿಂಗಳೊಳಗೆ ಸುಮಲತಾ ಬಿಜೆಪಿ ಸೇರಿಲ್ಲ. ಆದರೆ ಈಗ ಅಧಿಕೃತವಾಗಿ ಬಿಜೆಪಿ ಸೇರಿದರೆ ಅವರು ತಮ್ಮ ಸಂಸದೆ ಸ್ಥಾನದಿಂದ ಅನರ್ಹಗೊಳ್ಳುವ ಭೀತಿ ಎದುರಿಸಬೇಕಾಗುತ್ತದೆ. ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿ ಸೇರಲು ಅಡ್ಡಿಯಿರುವುದಿಲ್ಲ. ಆದರೆ ಸ್ವತಂತ್ರ ಸಂಸದೆಯಾಗಿದ್ದುಕೊಂಡು ರಾಜಕೀಯ ಪಕ್ಷದ ಸದಸ್ಯೆಯಾಗುವುದು ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ ಪಕ್ಷಾಂತರ ನಿಷೇಧ ನಿಯಮಾವಳಿಯಂತೆ ಅನರ್ಹಗೊಳ್ಳುತ್ತಾರೆ. ಲೋಕಸಭೆಯ ಸ್ಪೀಕರ್(Parliment Speakr) ಅನರ್ಹತೆ ಬಗ್ಗೆ ತೀರ್ಮಾನಿಸುತ್ತಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ಪಕ್ಷಾಂತರ ಮಾಡುವುದನ್ನು ತಪ್ಪಿಸಲು 1985ರಲ್ಲಿ ಸಂವಿಧಾನಕ್ಕೆ 52ನೇ ತಿದ್ದುಪಡಿ ಮಾಡಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗದಲ್ಲಿ ಪಕ್ಷಾಂತರವನ್ನು ನಿಷೇಧಿಸಿತು. ರಾಜೀವ್‌ ಗಾಂಧಿ (Rajiv Gandhi) ಅವರು ಪ್ರಧಾನಿಯಾಗಿದ್ದಾಗ ಈ ಪಕ್ಷಾಂತರ ನಿಷೇಧ ಕಾನೂನು (Anti-Defection Law) ಜಾರಿಗೆ ತರಲಾಯಿತು. 2003ರಲ್ಲಿ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ (Atal Bihari Vajpayee) ಪ್ರಧಾನಿಯಾಗಿದ್ದಾಗ ಈ ಕಾಯ್ದೆಗೆ ಮತ್ತಷ್ಟು ಬಲ ತುಂಬಲಾಯಿತು. ಇದರ ಅಡಿಯಲ್ಲಿ ಪಕ್ಷಾಂತರ ಮಾಡುವವರನ್ನು ಅನರ್ಹರೆಂದು ಘೋಷಿಸಲಾಗಿದೆ.

ಇನ್ನು ಈ ಬಗ್ಗೆ ಸಂವಿಧಾನ ತಜ್ಞರು ಹಾಗೂ ಹಿರಿಯ ವಕೀಲರಾದ ಶಶಿಕಿರಣ್ ಶೆಟ್ಟಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಸ್ವತಂತ್ರ ಅಭ್ಯರ್ಥಿ ಎಂದೇ ಜನರು ಸಂಸದರನ್ನು ಆಯ್ಕೆ ಮಾಡಿರುತ್ತಾರೆ. ಹೀಗೆ ಸ್ವತಂತ್ರ ಅಭ್ಯರ್ಥಿಯಾಗಿ ಜನರಿಂದ ಆಯ್ಕೆಯಾಗಿ ನಂತರ ಅವರು ರಾಜಕೀಯ ಪಕ್ಷ ಸೇರಿದರೆ ಅನರ್ಹಗೊಳ್ಳುತ್ತಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದವರು ರಾಜಕೀಯ ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ಭಾಗಿಯಾಗುವಂತಿಲ್ಲ. ಪಕ್ಷದ ಸದಸ್ಯತ್ವ ಪಡೆಯದೇ ಬಾಹ್ಯವಾಗಿ ಬೆಂಬಲ ನೀಡಬಹುದು. ಪಕ್ಷಕ್ಕೆ ಸೇರುವುದಕ್ಕೂ ಬಾಹ್ಯವಾಗಿ ಬೆಂಬಲ ನೀಡುವುದಕ್ಕೂ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ರಾಜಕೀಯ ಪಕ್ಷಗಳು ಬೆಂಬಲಿಸುವಂತೆ ಸ್ವತಂತ್ರ ಅಭ್ಯರ್ಥಿ ಬೆಂಬಲ ಘೋಷಿಸಬಹುದು. ಆದರೆ ಯಾವುದೇ ಪಕ್ಷವನ್ನು ಮೊದಲ 6 ತಿಂಗಳ ಅವಧಿ ಮುಕ್ತಾಯವಾದ ಬಳಿಕ ಸೇರಲು ಸಾಧ್ಯವಿಲ್ಲ. ಸದ್ಯ ಹೊಸಕೋಟೆಯಿಂದ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶರತ್ ಬಚ್ಚೇಗೌಡ(Sharath Bacchegowda)ಕಾಂಗ್ರೆಸ್ ನ ಅಧಿಕೃತ ಸದಸ್ಯರಲ್ಲ. ಕಾಂಗ್ರೆಸ್ ಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರಾಗಿದ್ದಾರೆಂದು ಅವರ ವಿರುದ್ಧ ಯಾರೂ ದೂರು ನೀಡಿಲ್ಲ. ಹೀಗಾಗಿ ಅವರು ಅನರ್ಹಗೊಂಡಿಲ್ಲ.

ಇದನ್ನೂ ಓದಿ : ಸಲಿಂಗಿಗಳಿಂದ ಜನಿಸುತ್ತವೆ ಈ ಇಲಿಗಳು!

 

Leave A Reply

Your email address will not be published.