Watermelon : ಕಲ್ಲಂಗಡಿ ಹಣ್ಣು ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಈ ಆರೋಗ್ಯ ಸಮಸ್ಯೆ ಇರೋರಿಗೆ ಕಾಡುತ್ತೆ ಸಮಸ್ಯೆ!

Health Care : ಕಲ್ಲಂಗಡಿ (Watermelon) ನಿರೋಧಕಗಳು ಮತ್ತು ವಿಟಮಿನ್ ಎ ಮತ್ತು ಸಿ ಸೇರಿದಂತೆ ಪೋಷಕಾಂಶಗಳಿಂದ ಕೂಡಿದೆ. ದೇಹದ ಉಷ್ಣತೆಯ ನಿಯಂತ್ರಣ, ಸಾಮಾನ್ಯ ಅಂಗ ಕಾರ್ಯ, ಜೀವಕೋಶಗಳಿಗೆ ಪೋಷಕಾಂಶಗಳ ವಿತರಣೆ ಮಾಡುತ್ತದೆ. ಕೆಲವು ದೈಹಿಕ ಪ್ರಕ್ರಿಯೆಗಳು ಹೆಚ್ಚಿನ ನೀರಿನ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನೀರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಆದರೆ ಅಧಿಕ ಸೇವನೆಯಿಂದ ಆರೋಗ್ಯಕ್ಕೂ ಉಂಟಾಗಬಹುದು ಅಡ್ಡ ಪರಿಣಾಮ. ಹೌದು. ಅಧಿಕಾಂಶ ನೀರಿನಿಂದ ಕೂಡಿದ್ದರೂ ಕಲ್ಲಂಗಡಿ ಹಣ್ಣು ಉಷ್ಣವನ್ನು ಉಂಟುಮಾಡುವಂಥ ಗುಣ ಹೊಂದಿದೆ. ಇದೇ ಗುಣದಿಂದ ಕೆಲವು ಆರೋಗ್ಯ ಸಮಸ್ಯೆ ಉಳ್ಳವರಿಗೆ ಇದು ಹಾನಿಕಾರಿ ಆಗಬಲ್ಲದು. ಹಾಗಿದ್ರೆ ಬನ್ನಿ ಯಾವ ಆರೋಗ್ಯ ( Health Care) ಸಮಸ್ಯೆ ಇರುವವರಿಗೆ ಇದರಿಂದ ತೊಂದರೆ ಉಂಟಾಗಬಹುದು ಎಂಬುದನ್ನು ತಿಳಿಯೋಣ.

ರಕ್ತದಲ್ಲಿಸಕ್ಕರೆಮಟ್ಟ:
ಕಲ್ಲಂಗಡಿ ಹಣ್ಣು ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಇರುವ ಆಹಾರವಾಗಿದೆ. ಅಂದರೆ, ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಬಹಳ ವೇಗವಾಗಿ ಹೆಚ್ಚಾಗುತ್ತದೆ. ನಿಮಗೆ ಮಧುಮೇಹವಿದ್ದರೆಕಲ್ಲಂಗಡಿ ಹಣ್ಣನ್ನು ಸೇವಿಸುವುದು ಉತ್ತಮವಲ್ಲ. ತಿಂದರೂ ಅತಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ.

ತೂಕದಲ್ಲಿ ಹೆಚ್ಚಳ :
ಕಲ್ಲಂಗಡಿಹಣ್ಣು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ, ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ತಜ್ಞರ ಪ್ರಕಾರ, ಹೆಚ್ಚು ಸಕ್ಕರೆಯುಕ್ತ ಆಹಾರ ಸೇವನೆಯಿಂದ ತೂಕದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ, ರಾತ್ರಿ ಸಮಯದಲ್ಲಿ ಕಲ್ಲಂಗಡಿ ಸೇವನೆ ಮಾಡದಂತೆ ಸಲಹೆ ನೀಡಲಾಗುತ್ತದೆ. ದಿನದ ವೇಳೆಯಲ್ಲಿ ಅಲ್ಪ ಪ್ರಮಾಣದ ಸೇವನೆ ಮಾಡಿದರೆ ಯಾವುದೇ ಹಾನಿಯಿಲ್ಲ.

ಚರ್ಮದಲ್ಲಿ ಬದಲಾವಣೆ :
ಕಲ್ಲಂಗಡಿ ಹಣ್ಣನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನುವುದರಿಂದ ಚರ್ಮ ಹಳದಿ-ಕಿತ್ತಳೆ ಬಣ್ಣಕ್ಕೆ ತಿರುಗುವ ಸಮಸ್ಯೆಗೆ ಕಾರಣವಾಗಬಲ್ಲದು. ಇದನ್ನು ಲೈಕೋಪೆನೀಮಿಯಾ ಎಂದೂ ಕರೆಯಲಾಗುತ್ತದೆ. ಇದು ಕೆರೊಟೆನೀಮಿಯಾದ ಒಂದು ಪ್ರಕಾರವಾಗಿದೆ. ಲೈಕೋಪೀನ್ ಒಂದು ಆಂಟಿಆಕ್ಸಿಡಂಟ್ ಹಾಗೂ ಪಿಗ್ನೆಂಟ್ ಆಗಿದ್ದು ಹಣ್ಣಿಗೆ ಕೆಂಪು ಬಣ್ಣ ಬರಲು ಇದು ಕಾರಣವಾಗಿದೆ. ಸೂಕ್ಷ್ಮದೇಹಿಗಳು ಈ ಹಣ್ಣನ್ನು ಸೇವನೆ ಮಾಡಿದರೆ ಚರ್ಮದ ಬಣ್ಣದಲ್ಲಿ ಬದಲಾವಣೆಯಾಗಬಹುದು.

ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆ:
ಜೀರ್ಣಾಂಗ ವ್ಯವಸ್ಥೆ ಗೆ ಸಂಬಂಧಿಸಿದ ಸಮಸ್ಯೆ ಉಳ್ಳವರಿಗೆ ಕಲ್ಲಂಗಡಿ ಉತ್ತಮವಲ್ಲ. ಹೆಚ್ಚು ಹಣ್ಣು ತಿಂದರೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಆಗಬಹುದು, ಡಯೇರಿಯಾ ಹಾಗೂ ಊತ ಕೂಡ ಉಂಟಾಗಬಹುದು. ಸಣ್ಣ ಕರುಳಿನ ಆರೋಗ್ಯಕ್ಕೆ ಇದು ಪೂರಕವಲ್ಲ. ಇಂತಹ ಆಹಾರ ಸೇವನೆ ಮಾಡುವುದರಿಂದ ಅನೇಕರಿಗೆ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ ಅಥವಾ ಹೆಚ್ಚಾಗುತ್ತದೆ. ಇದರಲ್ಲಿರುವ ಫ್ರಕ್ಟೋಸ್ ಒಂದು ಮೊನೊಸ್ಯಾಕರೈಡ್ ಆಗಿದ್ದು, ಹೊಟ್ಟೆಗೆ ತೊಂದರೆ ನೀಡಬಲ್ಲದು. ಹೀಗಾಗಿ, ಕಲ್ಲಂಗಡಿಯನ್ನು ರಾತ್ರಿ ಸಮಯದಲ್ಲಿ ಸೇವನೆ ಮಾಡಬಾರದು.

ಇದನ್ನೂ ಓದಿ : Gold-Silver Price today : ಏರಿತು ಚಿನ್ನದ ದರ! ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ!!!

Leave A Reply

Your email address will not be published.