Viral News: ಗಿನ್ನೆಸ್ ರೆಕಾರ್ಡ್ ಮಾಡಿದೆ ಅಮೆರಿಕಾದ ಈ ಕೋಳಿ! ಜಗತ್ತಲ್ಲಿ ಎಲ್ಲಿಯೂ ಸಿಗಲ್ವಂತೆ ಇಂತಹ ಕುಕ್ಕುಟ!
Oldest chicken :ಸಾಕು ಪ್ರಾಣಿ ಹಾಗೂ ಪಕ್ಷಿಗಳ ಪೈಕಿ ಕೋಳಿ(Hen) ಕೂಡ ಒಂದು. ಅಲ್ಲದೆ ಪಕ್ಷಿಗಳಲ್ಲಿ ಎಲ್ಲರೂ ಹೆಚ್ಚಾಗಿ ಸಾಕುವುದು ಕೋಳಿಯನ್ನೆ. ಹಳ್ಳಿ ಹಾಗೂ ಮಲೆನಾಡು ಭಾಗದ ಮನೆಗಳಲೆಲ್ಲ ಪ್ರತಿಯೊಬ್ಬರ ಮನೆಯಲ್ಲೂ ಕೋಳಿಗಳು ಇದ್ದೇ ಇರುತ್ತವೆ. ಸಾಮಾನ್ಯವಾಗಿ ಈ ಕೋಳಿಗಳು ಎಷ್ಟು ವರ್ಷ ಬದುಕುತ್ತವೆ ಹೇಳಿ. ಹೆಚ್ಚೆಂದರೆ 5 ರಿಂದ ಒಂದು 8-10 ವರ್ಷ ಬದುಕಬೋದೇನೋ. ಆದ್ರೆ ಇಲ್ಲೊಂದು ಕೋಳಿ ಮಾತ್ರ ಇದೂವರೆಗೂ ಭೂಮಿಮೇಲಿನ ಎಲ್ಲಾ ಕೋಳಿಗಳಿಗಿಂತ ಹೆಚ್ಚು ವರ್ಷ ಜೀವಿಸಿ (oldest chicken) ಗಿನ್ನೆಸ್ ದಾಖಲೆ(Guinness Record) ಬರೆದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ಧು ಮಾಡ್ತಿದೆ.
ಹೌದು, ಅಮೆರಿಕದ(America) ಮಿಚಿಗನ್(Michigan) ಮೂಲದ ಈ ಕೋಳಿಯು ಅಂತಿತ ಕೋಳಿಯಲ್ಲ. ಕಡಲೆಕಾಯಿ ಎಂದು ಇದರ ಹೆಸರಂತೆ. ಇದು ಬಾಂಟಮ್ ಚಿಕನ್. ಇದರ ಗಾತ್ರ ಸಾಮಾನ್ಯ ಕೋಳಿಗಳಿಗಿಂತಲೂ ಚಿಕ್ಕದಾಗಿದೆ. ಇದಕ್ಕೀಗ ಬರೋಬ್ಬರಿ 20 ವರ್ಷಗಳಂದ್ರೆ ನೀವು ನಂಬ್ತೀರಾ! ನಂಬಲೇ ಬೇಕು ಬಿಡಿ. ಯಾಕಂದ್ರೆ ಈ ಕಡಲೆಕಾಯಿ ಹೆಸರಿನ ಕೋಳಿ ಸದ್ಯ ತನ್ನ ವಯಸ್ಸಿನ ಮೂಲಕವೇ ಗಿನ್ನೆಸ್ ರೆಕಾರ್ಡ್ ಮಾಡಿ ಭಾರೀ ಫೆಮಸ್ಸಾಗಿದೆ.
ಈ ಕಡಲೆಕಾಯಿ ಕೋಳಿ ಹುಟ್ಟಿದ್ದು 2002ರಲ್ಲಿ. ಅಂದ್ರೆ ಸುಮಾರು 20 ವರ್ಷಗಳಷ್ಟು ಹಿಂದೆ. ಇನ್ನು ಈ ಕೋಳಿ ಹುಟ್ಟಿದ್ದು, ಬದುಕುಳಿದಿದ್ದು ಎಲ್ಲವೂ ಒಂದು ವಿಚಿತ್ರ ಗೊತ್ತಾ? 2002ರ ವೇಳೆ ಮರ್ಸಿ ಡಾರ್ವಿನ್(Mersi Darvin) ಎಂಬ ಮಹಿಳೆ ಸಾಕಿದ್ದ ಒಂದು ಕೋಳಿ, ಅಂದ್ರೆ ಈ ಕಡಲೆಕಾಯಿಯ ತಾಯಿ ಕಾವು ಕೂರಲು ಮೊಟ್ಟೆಗಳನ್ನು ಇಡುತ್ತದೆ. ಅದು ಮೊಟ್ಟೆ ಇಟ್ಟು ಕಾವು ಕೂತ ನಂತರ ಅದರ ಆರೈಕೆಯನ್ನು ಮರ್ಸಿಯೇ ನೋಡಿಕೊಳ್ಳುತ್ತಾಳೆ. ಆದರೆ ಅದರಲ್ಲೊಂದು ಮೊಟ್ಟೆ ತಣ್ಣಗಿದೆ ಎಂದು, ಅದರಲ್ಲಿರುವ ಮರಿ ಬದುಕಲು ಸಾಧ್ಯವೇ ಇಲ್ಲ, ಹಾಗಾಗಿ ಆ ಮೊಟ್ಟೆಯನ್ನು ಹೊರಗೆ ಎಸೆಯಬೇಕೆಂದು ಅಂದುಕೊಳ್ಳುತ್ತಾಳೆ.
ಇನ್ನೇನು ಮೊಟ್ಟೆಯನ್ನು ಎಸೆಯಬೇಕು ಅಂದುಕೊಳ್ಳುವಾಗ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಮೊಟ್ಟೆಯಿಂದ ಶಬ್ದ ಬರುತ್ತದೆ. ಆಗ ಮರ್ಸಿ ತನ್ನ ನಿರ್ಧಾರವನ್ನು ಬದಲಾಯಿಸಿದಳು. ನಂತರ ಮರ್ಸಿ ಅವರೇ ಮೊಟ್ಟೆ ಒಡೆದು ನೋಡಿದಾಗ ಮುದ್ದಾದ ಕೋಳಿ ಮರಿ ಹೊರಬಂದಿತು. ಅದವೇ ಇದೀಗ ಗಿನ್ನೆಸ್ ದಾಖಲೆ ಬರೆದ ‘ಕಡಲೆಕಾಯಿ’. ಮರ್ಸಿಯೇ ಮೊಟ್ಟೆಯೊಡೆದ ಕಾರಣ ಕಡಲೆಕಾಯಿಯನ್ನು ಇತರ ಮಕ್ಕಳೊಂದಿಗೆ ಬೆಳೆಯಲು ಅದರ ತಾಯಿ ಅನುಮತಿ ಕೊಡಲಿಲ್ಲ. ಹೀಗಾಗಿ ಆ ಕೋಳಿಮರಿಯನ್ನು ಮರ್ಸಿ ಗಿಳಿ ಪಂಜರದಲ್ಲಿಟ್ಟು ಬೆಳೆಸಿದರು ನಂತರ, ಇತರ ಪ್ರಾಣಿಗಳೊಂದಿಗೂ ಅದಕ್ಕೆ ಸ್ನೇಹ ಬೆಳೆಸಿದಳು.
ಅಂತೆಯೇ ಈ ಕಡಲೆಕಾಯಿ ಕೋಳಿ ಇದೀಗ ತನ್ನ ಇಪ್ಪತ್ತು ಸಂವತ್ಸರಗಳನ್ನು ಪೂರೈಸಿದ್ದು, ಇಂದಿಗೂ ಆರೋಗ್ಯಕರವಾಗಿದೆ. ಮಾರ್ಚ್ 1, 2023 ಕ್ಕೆ ಈ ಕಡಲೆಕಾಯಿ 20 ವರ್ಷ 304 ದಿನಗಳನ್ನು ಪೂರೈಸಿದೆ. ಇದು ಇಡೀ ಜಗತ್ತಲ್ಲೇ ಅತಿ ಹೆಚ್ಚು ಕಾಲ ಬದುಕಿರುವ ಕೋಳಿ ಎಂಬ ದಾಖಲೆ ಸೃಷ್ಟಿಸಿದೆ. ಎರಡು ದಶಕಗಳ ಕಾಲ ಬದುಕಿರುವ ಕಡಲೆಕಾಯಿ ಗಿನ್ನಿಸ್ ಪುಸ್ತಕ ಸೇರಿದೆ.