ಸಣ್ಣ ಡೀಸೆಲ್‌ ಕಾರು ಖರೀದಿ ಯೋಚನೆಯಲ್ಲಿದ್ದೀರಾ? ಇದೊಂದೇ ಮಾದರಿ ಖರೀದಿಗೆ ಇದೆ!

Tata Altroz : ಇತ್ತೀಚೆಗೆ ಕಾರು ತಯಾರಕರು ಡೀಸೆಲ್ ಕಾರುಗಳ ಮಾರಾಟವನ್ನು ವಿರಳಗೊಳಿಸಿದ್ದಾರೆ. ಆದರೆ ಭಾರತದಲ್ಲಿ (india )ಪೆಟ್ರೋಲ್‌ಗಿಂತ (petrol )ಡೀಸೆಲ್ ಕಾರುಗಳಿಗೆ ಹೆಚ್ಚು ಬೇಡಿಕೆ ಇದೆ ಯಾಕೆಂದರೆ ಡೀಸೆಲ್ ಬೆಲೆ ಪೆಟ್ರೋಲ್‌ಗಿಂತ ಕಡಿಮೆ ಮತ್ತು ಪೆಟ್ರೋಲ್ ವಾಹನಗಳಿಗಿಂತ ಡಿಸೇಲ್ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ. ಇದೀಗ ಅತ್ಯಂತ ಅಗ್ಗದ ಬೆಲೆಯ ಡಿಸೇಲ್ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.

ಮುಖ್ಯವಾಗಿ ಭಾರತವು ಡೀಸೆಲ್ ಕಾರುಗಳ(car )ಅತ್ಯಂತ ಜನಪ್ರಿಯ ಆಟೋ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆದರೆ ಹೊಸ ಎಮಿಷನ್ ನಿಯಮಗಳು ಡೀಸೆಲ್ ಕಾರುಗಳನ್ನು ನಿಯಂತ್ರಣದಲ್ಲಿ ಇರಿಸಿದೆ. ಪ್ರಸ್ತುತ, ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳು ಮತ್ತು ಸ್ಟ್ರಾಂಗ್ ಹೈಬ್ರಿಡ್ ಮಾದರಿಗಳಿಗೆ ಒತ್ತು ನೀಡುತ್ತಿರುವ ಕಾರಣ, ಆಟೋಮೊಬೈಲ್ ಉತ್ಪಾದನಾ ಕಂಪನಿಗಳು ಕ್ರಮೇಣ ಇವುಗಳನ್ನು ಕೈಬಿಟ್ಟು ಇವಿಗಳತ್ತ ಸಾಗಲು ಪ್ರಾರಂಭಿಸಿವೆ.

ಆದರೆ ಇಂದು ಕಡಿಮೆ ಬೆಲೆಯಲ್ಲಿ ಡೀಸೆಲ್ ಕಾರು ಬಿಡುಗಡೆಯಾದರೆ ಹಿಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂದು ಹ್ಯಾಚ್‌ಬ್ಯಾಕ್‌ನೊಂದಿಗೆ ಡೀಸೆಲ್ ಎಂಜಿನ್‌ಗಾಗಿ ಹುಡುಕುತ್ತಿರುವವರಿಗೆ ಕೇವಲ ಒಂದು ಮಾದರಿ ಮಾತ್ರ ಲಭ್ಯವಿದೆ. ಅದೂ ನಮ್ಮದೇ ಆದ Tata ಆಲ್ಟ್ರೋಜ್(tata altroz )ಆಗಿದೆ . ಬನ್ನಿ ಟಾಟಾ ಆಲ್ಟ್ರೋಜ್ ಬಗ್ಗೆ ತಿಳಿಯೋಣ.

Tata ಆಲ್ಟ್ರೋಜ್ ವಿಶೇಷತೆ :

• ಟಾಟಾದ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ದೇಶದ ಅತ್ಯಂತ ಅಗ್ಗದ ಡೀಸೆಲ್ ಕಾರು. ಇದರಲ್ಲಿ ಪೆಟ್ರೋಲ್ ಜೊತೆಗೆ 1.5 ಲೀಟರ್ ಡೀಸೆಲ್ ಎಂಜಿನ್ ಕೂಡಾ ಇದೆ.
• ಈ ಆಯ್ಕೆಯಲ್ಲಿ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಾಗಿದೆ. ಡೀಸೆಲ್ ಎಂಜಿನ್ ಮೈಲೇಜ್ 25.11kpl ಆಗಿದೆ.

• Altroz ​​1.5 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 89 bhp ಪವರ್ ಮತ್ತು 200 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

• 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ವಾಹನವನ್ನು ಮನೆಗೆ ತರಬಹುದು.
• ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸುವ ಮೂಲಕ ಆಲ್ಟ್ರೊಜ್ ಭಾರತದಲ್ಲಿ ಸುರಕ್ಷಿತ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ.
• ವಾಯಿಸ್ ಕಮಾಂಡ್, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, iTPMS, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಪ್ರೀಮಿಯಂ ಆಡಿಯೊ ಸಿಸ್ಟಮ್‌ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಕಾರು ಒಳಗೊಂಡಿದೆ.

ಇನ್ನು ಟಾಟಾ ಆಲ್ಟ್ರೊಜ್ ಡೀಸೆಲ್‌ನ ಎಕ್ಸ್ ಶೋರೂಂ ಬೆಲೆ ಸುಮಾರು 9.50 ಲಕ್ಷ ರೂ. ಇದೆ. ಟಾಪ್ ಎಂಡ್ ವೇರಿಯಂಟ್ ಆಗಿರುವ XZ ಪ್ಲಸ್ 12.50 ಲಕ್ಷ ರೂ. ಇದ್ದು, ಆನ್ ರೋಡ್ ಬೆಲೆಯು ಅದಕ್ಕಿಂತ ಹೆಚ್ಚಾಗುತ್ತದೆ. ಈ ವಾಹನವು 23.03 ಕಿ.ಮೀ ಮೈಲೇಜ್ ನೀಡುತ್ತದೆ ಮತ್ತು ಎಂಜಿನ್ ಅನ್ನು ಪರಿಷ್ಕರಣೆ ಮತ್ತು ಹಿಂದಿನಂತೆಯೇ ಹೊಸ ಹೊರಸೂಸುವಿಕೆ ಮಾನದಂಡಗಳಿಗೆ ಒಳಪಡಿಸಲಾಗಿದೆ.

ಒಟ್ಟಿನಲ್ಲಿ ಉತ್ತಮ ಇಂಧನ ದಕ್ಷತೆ ಮತ್ತು ಡೀಸೆಲ್ ಕಡಿಮೆ ಬೆಲೆ ಇದ್ದು, ಡೀಸೆಲ್ ಕಾರುಗಳು ಹೆಚ್ಚು ಜನಪ್ರಿಯವಾಗಲು ಪ್ರಮುಖ ಕಾರಣಗಳಾಗಿದೆ. ಅಲ್ಲದೆ ಕಡಿಮೆ ಬಜೆಟ್‌ನಲ್ಲಿ ಸಣ್ಣ ಡೀಸೆಲ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಖಂಡಿತವಾಗಿಯೂ ಟಾಟಾ ಆಲ್ಟ್ರೋಜ್‌ ನ್ನು ಆಯ್ಕೆ ಮಾಡಬಹುದಾಗಿದೆ.

Leave A Reply

Your email address will not be published.