Advertisement: ಹೂಸು ಬಿಡದ, ತೇಗು ಹಾಕದ ವರ ಬೇಕಾಗಿದ್ದಾನೆ ; ಸ್ತ್ರೀವಾದಿ ಹುಡುಗಿ ಕೇಳುತ್ತಿರುವ ಈ ಅರ್ಹತೆ ನಿಮ್ಮಲ್ಲಿ ಯಾರಲ್ಲಾದರೂ ಇದೆಯಾ ?!
Viral Advertisement : ‘ ನನಗೆ ತೇಗು ಹಾಕದ, ಹೂಸು ಬಿಡದ ವರ ಬೇಕಾಗಿದೆ ‘
ಆಕೆ ಹೀಗಂತ ಒಂದು ಜಾಹೀರಾತು ನೀಡಿದ್ದಾಳೆ.
ಆಕೆಯ ಆಕೆ ಕೊಟ್ಟ ಜಾಹೀರಾತನ್ನು ಇನ್ನಷ್ಟು ವಿವರವಾಗಿ ನೋಡಬೇಕೆಂದರೆ, ಅದು ಯಥಾವತ್ ಈ ರೀತಿ ಇದೆ.
ಇಂಗ್ಲಿಷ್ ಸುದ್ದಿಪತ್ರಿಕೆಯಲ್ಲಿ ವರ ಬೇಕಾಗಿದ್ದಾರೆ ಎಂಬ ಈ ಜಾಹೀರಾತು(Viral Advertisement )ಪ್ರಕಟವಾಗಿದ್ದು ಒಂದು ಕಡೆ ತಮಾಷೆಯ ವಸ್ತುವಾಗಿ ಈ ಜಾಹೀರಾತು ಗೋಚರಿಸಿದರೆ, ಮತ್ತೊಂದು ಕಡೆ ಸಮಾಜ ಸೇವೆಯಲ್ಲಿ ತೊಡಗಿರುವ ಅಥವಾ ತೊಡಗಿದ್ದೇವೆ ಎಂದುಕೊಳ್ಳುವ ಕೆಲವು ವ್ಯಕ್ತಿತ್ವಗಳ ಮನಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಈ ಒಂದು ಜಾಹೀರಾತು ಒಳ್ಳೆಯ ಸಾಂಪಲ್ ನಂತಿದೆ.
ಸ್ವಂತ ಅಭಿಪ್ರಾಯವನ್ನು ಹೊಂದಿರುವ, 30 ಪ್ಲಸ್ ವರ್ಷ ಪ್ರಾಯದ ಸ್ತೀವಾದಿ, ಗಿಡ್ಡ ಕೂದಲಿನ, ದೇಹಕ್ಕೆ ಪಿಯರ್ಸ್ ಮಾಡಿರುವ, ಬಂಡವಾಳಶಾಹಿಯ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ವರ ಬೇಕಾಗಿದ್ದಾನೆ.
ಆತ ಸುಂದರವಾಗಿದ್ದು, 25 -28 ವರ್ಷ ಒಳಗೆ ಮಾತ್ರ ಇರಬೇಕು. ( ಗಮನಿಸಿ: ಆಕೆಗೆ 30 +). ದೃಢ ಕಾಯ, ಸೆಟ್ಲ್ ಆಗಿರುವ, ಒಬ್ಬನೇ ಮಗನಾಗಿರುವ, ಒಳ್ಳೆಯ ಸ್ಥಿರ ಉದ್ದಿಮೆಯಿರುವ, ಬಂಗ್ಲೋ ಅಥವಾ ಕನಿಷ್ಠ ಪಕ್ಷ 20 ಎಕರೆ ಜಾಗ ಇರುವ ಎಸ್ಟೇಟ್ ಹೊಂದಿರುವ ವರ ಬೇಕಾಗಿದ್ದಾನೆ. ಅಡುಗೆ ಮಾಡಲು ಬರುತ್ತಿರಬೇಕು. ಹೂಸು ಮತ್ತು ತೇಗು ನಿಷಿದ್ಧ. ಇಂತಹ ವರನ ಹುಡುಕಾಟದಲ್ಲಿ ಆ ಮಹಾನ್ ಮಹಿಳೆ ಇದ್ದಾಳೆ.
ಆಕೆಯ ಈ ಜಾಹೀರಾತನ್ನು ನೋಡಿ ಸಾವಿರಾರು ಮಂದಿ ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆಕೆಯ ಈ ಒಂದು ಜಾಹೀರಾತು ಒಂದು ಕಡೆ ಆಕ್ರೋಶಕ್ಕೆ, ಮತ್ತೊಂದೆಡೆ ತಮಾಷೆಯ ವಸ್ತುವಾಗಿ ಕಾಣಿಸಿದೆ. ವಿಚಿತ್ರವೆಂದರೆ ಬಂಡವಾಳಶಾಹಿಯನ್ನು ವಿರೋಧಿಸುವ ಈ ಮಹಿಳೆಯನ್ನು ಮದುವೆಯಾಗುವ ಗಂಡ ಒಳ್ಳೆಯ ಉದ್ಯಮಿಯಾಗಿರಬೇಕೆಂದು ಆಕೆ ಬಯಸುತ್ತಿದ್ದಾಳೆ. ಅಂದರೆ ಆಕೆಗೆ ಬಂಡವಾಳಶಾಹಿಯೇ ಗಂಡನಾಗಿ ಬೇಕಂತೆ !!
ಸಹಜವಾಗಿ ಈಗಿನ ಮಹಿಳೆಯರು ಬದುಕಿನಲ್ಲಿ ಸೆಟ್ಟಿಂಗ್ ಹಾಗಿರುವ ಸ್ಥಿತಿವಂತರಲ್ಲೇ ಮದುವೆಯಾಗಲು ಬಯಸುವುದು ಸಹಜ. ಇಷ್ಟೇ ಆಗಿದ್ದರೆ, ಅಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆಕೆ ಮದುವೆಯಾಗುವ ಹುಡುಗ, ದೇಹದ ಸಹಜ ಕ್ರಿಯೆಗಳಾದ ಹೂಸುು ಬಿಡುವುದು ಮತ್ತು ತೇಗುವುದು ಕೂಡಾ ಮಾಡಬಾರದಂತೆ ! ಅಂದ್ರೆ ದೇಹವೆಂಬ ಮಶೀನ್ ಸರಿ ಇಲ್ಲದ ಹುಡುಗನನ್ನು ಆಕೆ ಬಯಸುತ್ತಿದ್ದಾಳೆಯಾ ? ಎನ್ನುವುದು ಹಲವರ ಅನುಮಾನ. ಮಶೀನ್ ಮತ್ತು ‘ಮಶೀನ್ ಗನ್ ‘ ಸರಿ ಇಲ್ಲದೆ ಹೋದರೆ ಮದ್ವೆ ಬರ್ಕತ್ ಆಗತ್ತಾ ಎನ್ನುವುದು ಅದರ ಮಹತ್ವ ಬಲ್ಲವರ ಪ್ರಾಕ್ಟಿಕಲ್ ಪ್ರಶ್ನೆ.
ಈ ಎಲ್ಲಾ ಕಂಡಿಷನ್ಸ್ ಗಳಿಗೆ ಓಕೆ ಆದರೆ ಇಮೇಲ್ ವಿಳಾಸಕ್ಕೆ ಸಂಪರ್ಕಿಸಲು ಮದುವೆಯಾಗ ಬಯಸಿರುವ ಮಹಿಳೆ ಕೋರಿಕೊಂಡಿದ್ದಾರೆ. ಈ ಜಾಹೀರಾತಿಗಾಗಿ ಆಕೆ 13,000 ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಕೊನೆಗೆ ಆಕೆಯನ್ನು ಸಂಪರ್ಕಿಸಲು ಒಂದು email-id ಆಕೆ ಕೊಟ್ಟಿದ್ದಾಳೆ. ಆ ಮೇಲ್ ಐಡಿ ಕೂಡ ವಿಚಿತ್ರವಾಗಿದ್ದು, ಆಕೆಯ ಮನೋಸ್ಥಿತಿಯನ್ನು ಸ್ಥಿರವಾಗಿ ಚಿತ್ರಿಸುತ್ತದೆ. curbyourpatriarchy@gmail.com ಅಂದ್ರೆ ನಮಗೆ ತಿಳಿದಿರುವ ಇಂಗ್ಲಿಷಿನಲ್ಲಿ ಅದರ ಅರ್ಥ : ಪುರುಷಪ್ರಧಾನ ಸಮಾಜವನ್ನು ನಿಯಂತ್ರಿಸು, ಅಥವಾ ಹತ್ತಿಕ್ಕು ಎಂದು !
ಇಷ್ಟೆಲ್ಲಾ ಆದರೂ ಕೊನೆಗೆ ಆಕೆಯ ಜಾಹೀರಾತು ನೋಡಿದ ಓದುಗರಲ್ಲಿ ಉಳಿದ ಪ್ರಶ್ನೆ ಒಂದೇ : ” ಆಕೆ ಹೂಸು ಬಿಟ್ಟೇ ಇಲ್ವಾ, ಲೈಫಲ್ಲಿ ಎಂದೂ ತೇಗೇ ಇಲ್ವಾ ?! ” ಉತ್ತರ ಸಿಗದ ಪ್ರಶ್ನೆಗಳನ್ನು ಮರೆತುಬಿಡುವವನೆ ಜಾಣ !