Gold coated Dosa & Sweets: ಈ ರೆಸ್ಟೋರೆಂಟ್, ಬೇಕರಿಗಳಲ್ಲಿ ಸಿಗುತ್ತೆ ಮಿರಿಮಿರಿ ಮಿನುಗೋ ಚಿನ್ನದ ದೋಸೆ ಮತ್ತು ಸ್ವೀಟ್ಸ್! ಆದ್ರೆ ಇವುಗಳ ಬೆಲೆ ಕೇಳಿದ್ರೆ ಮಾತ್ರ ದಂಗಾಗ್ತೀರ!

Gold coated Dosa & Sweets: ಇಂದಿನ ಕಾಲದಲ್ಲಂತೂ ಜನ ವೆರೈಟಿ ವೆರೈಟಿ ಫುಡ್ ಗಳನ್ನು ಸವಿಯಲು ದುಂಬಾಲು ಬೀಳುತ್ತಾರೆ. ಅಂತೆಯೇ ಹೋಟೆಲ್ ಗಳು ಕೂಡ ಹೊಸ ಹೊಸ ರೀತಿಯ ಪ್ರಯೋಗಗಳನ್ನು ಮಾಡಿ, ವಿವಿಧ ರೀತಿಯ ಭಕ್ಷ ಭೋಜನಗಳನ್ನು ತಯಾರಿ ಮಾಡುತ್ತವೆ. ಅಲ್ಲದೆ ಕೆಲವೊಂದು ತಿಂಡಿಗಳ ರೇಟುಗಳು ಕೂಡ ಕೈ ಸುಡುವಂತಿರುತ್ತದೆ. ಅಂತೆಯೆ ನೀವು ದೋಸೆಗಳ ರುಚಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕಡಿಮೆ ದರದಲ್ಲಿ, ರುಚಿ ರುಚಿಯಾಗಿ ಕೈಗೆಟುಕುವ, ಹಲವರ ಪ್ರಿಯವಾದ ತಿಂಡಿ ಇದು. ಇದರಲ್ಲೂ ವಿವಿಧ ಬಗೆಗಳಿವೆ. ಈ ದೋಸೆಗಳಿಗೆ ಅಮ್ಮಮ್ಮ ಎಂದರೆ ಎಷ್ಟು ಹಣವನ್ನು ನೀವು ನೀಡಿರಬಹುದು. 50,100 ಹೋಗಲಿ 200ರೂ ಗಳನ್ನು ಪಾವತಿಸಿರಬಹುದು. ಆದರೆ ಇಲ್ಲೊಂದು ದೋಸೆ ರೇಟ್ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ. ಇದರ ಬೆಲೆ ಬರೋಬ್ಬರಿ 1000ರೂ! ಯಾಕಂದ್ರೆ ಇದು ಗೋಲ್ಡನ್ ದೋಸೆ! ಇದ್ಯಾವುದಪ್ಪಾ ಹೊಸ ದೋಸೆ ಅನ್ಕೊಳ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ಹೌದು, ಮನುಷ್ಯನಿಗೂ ಹಳದಿ ಲೋಹಕ್ಕೂ ಇರುವ ನಂಟು ಅವಿನಾಭಾವವಾದುದು. ಆದ್ರೆ ತಿನ್ನೋ ಆಹಾರಕ್ಕೂ (Food) ಚಿನ್ನ ಸೇರಿಸೋದು ಅಂದ್ರೆ ಎಷ್ಟು ವಿಚಿತ್ರ ಅಲ್ವಾ? ವಿಚಿತ್ರವಾದರೂ ಇದು ಸತ್ಯ. ಸದ್ಯ ತೆಲಂಗಾಣದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಹೌಸ್ ಆಫ್ ದೋಸಾಸ್ ಹೆಸರಿನ ರೆಸ್ಟೋರೆಂಟ್ ಒಂದು ಅತ್ಯಂತ ದುಬಾರಿ (Costly) ದೋಸೆಯನ್ನು ನೀಡುತ್ತಿದೆ. ಯಾಕಂದ್ರೆ ಇಲ್ಲಿ ದೋಸೆಯನ್ನು 24 ಕ್ಯಾರೆಟ್ ಚಿನ್ನದಿಂದ ಲೇಪಿಸಲಾಗಿದೆ (Gold coated Dosa & Sweets). ಕೇವಲ 30ರಿಂದ 150 ರೂಪಾಯಿ ಬೆಲೆಯ ದೋಸೆ ಬೆಲೆ ಇಲ್ಲಿ ಮಾತ್ರ 1000ರೂ. ಯಾಕೆಂದರೆ ಇದು ಗೋಲ್ಡನ್ ದೋಸೆ!

ಇನ್ನು ಈ ದೋಸೆಯನ್ನು ತಯಾರಿಸುವ ರೀತಿಯೂ ತುಂಬಾ ವಿಶಿಷ್ಟವಾಗಿದೆ. ದೋಸೆಯ ಮೇಲೆ ತುಪ್ಪದಂತೆ ಶುದ್ಧ ಚಿನ್ನವನ್ನು ಲೇಪಿಸಲಾಗುತ್ತದೆ. ಚಿನ್ನದ ಲೇಪಿತ ದೋಸೆಯನ್ನು ಹುರಿದ ಗೋಡಂಬಿ, ಬಾದಾಮಿ, ಶುದ್ಧ ತುಪ್ಪ, ಹುರಿದ ಕಡಲೆಕಾಯಿ ಮತ್ತು ಹುರಿದ ಚನ್ನಾ ದಾಲ್‌ನಿಂದ ಮಾಡಿದ ಚಟ್ನಿಗಳ ಜೊತೆ ಸರ್ವ್ ಮಾಡಲಾಗುತ್ತದೆ. ದೋಸೆ ದುಬಾರಿಯಾಗಿದ್ದರೂ, ಗ್ರಾಹಕರು (Customers) ಚಿನ್ನದ ಲೇಪಿತ ವಿಶಿಷ್ಟ ದೋಸೆಯನ್ನು ಟ್ರೈ ಮಾಡಲು ಉತ್ಸುಕರಾಗಿದ್ದಾರೆ. ಈ ರೆಸ್ಟೋರೆಂಟ್ ದಿನಕ್ಕೆ ಕನಿಷ್ಠ ಆರರಿಂದ ಎಂಟು ದೋಸೆಗಳನ್ನು ಮಾರಾಟ (Sale) ಮಾಡುತ್ತದೆ ಎಂದು ತಿಳಿದುಬಂದಿದೆ.

ಅಲ್ಲದೆ ಈ ಹಿಂದೆ, ನ್ಯೂಯಾರ್ಕ್‌ನ ರೆಸ್ಟೋರೆಂಟ್ ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಗಳೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿತ್ತು. ಡೊಮ್ ಪೆರಿಗ್ನಾನ್ ಶಾಂಪೇನ್, ಫ್ರಾನ್ಸ್‌ನ ಶುದ್ಧ ಕೇಜ್-ಫ್ರೀ ಗೂಸ್ ಕೊಬ್ಬು ಮತ್ತು ಜೆ. ಲೆಬ್ಲಾಂಕ್ ಫ್ರೆಂಚ್ ಶಾಂಪೇನ್ ಆರ್ಡೆನ್ನೆ ವಿನೆಗರ್‌ನಂತಹ ದುಬಾರಿ ಪದಾರ್ಥಗಳನ್ನು ಬಳಸಿ ಭಕ್ಷ್ಯವನ್ನು ತಯಾರಿಸಲಾಗಿತ್ತು. ಇದನ್ನು ಚಿನ್ನದ ಧೂಳಿನಿಂದ ಅಲಂಕರಿಸಿದ್ದು, ಖಾದ್ಯದ ಬೆಲೆ ಬರೋಬ್ಬರಿ 16 ಸಾವಿರ ಆಗಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿತ್ತು.

ಇದೀಗ ದೋಸೆ ಆಯ್ತು, ಇನ್ನು ಚಿನ್ನ ಲೇಪಿತ ಸ್ವೀಟ್ಸ್ ಬಗ್ಗೆ ಕೇಳಿದ್ದೀರಾ? ಸಾಮಾನ್ಯವಾಗಿ ಸ್ವೀಟ್ಸ್ ಗೆ ಕೆಜಿಗೆ ಹೆಚ್ಚೆಂದರೆ 500 ರೂ, 1000 ರೂ. ಇರುತ್ತೆ. ಆದ್ರೆ ದೆಹಲಿಯಲ್ಲಿ ಸಿಗ್ತಿರೋ ಈ ಸ್ಪೆಷಲ್ ಸ್ವೀಟ್ಸ್ ಬೆಲೆ ಕೆಜಿಗೆ ಭರ್ತಿ 16,000 ರೂ. ನಂಬೋಕೆ ಕಷ್ಟ ಆದ್ರೂ ಇದು ನಿಜ. ದೆಹಲಿಯ ಮೌಜ್‌ಪುರದ ಶಗುನ್ ಸ್ವೀಟ್ಸ್ ಸ್ಟಾಲ್‌ನಲ್ಲಿ ಈ ಸಿಹಿ ಮಿಠಾಯಿಗಳು ಸಿಗುತ್ತವೆ. ಈ ಶಗುನ್ ಸ್ವೀಟ್ಸ್ ಸ್ಟಾಲ್‌ನಲ್ಲಿ ಚಿನ್ನದ ಲೇಪಿತ ಮಿಠಾಯಿಯನ್ನು ಕೆಜಿಗೆ 16000 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಫುಡ್ ಬ್ಲಾಗರ್ (Food Blogger) ಅರ್ಜುನ್ ಚೌಹಾಣ್ ಇನ್ ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೆಲೆಬಾಳುವ ಸ್ವೀಟ್ಸ್ ವೀಡಿಯೋ ಫುಲ್ ವೈರಲ್ ಆಗುತ್ತಿದೆ.
ಕಾಸ್ಟ್ಲೀ ಸ್ವೀಟ್ಸ್ ವೀಡಿಯೋಗೆ 11 ಮಿಲಿಯನ್ ವೀಕ್ಷಣೆಗಳು, 5 ಲಕ್ಷ ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಬಂದಿದೆ.

Leave A Reply

Your email address will not be published.