Amit Shah: ಅಮಿತ್ ಶಾ ಅವರೇ ಎಚ್ಚರದಿಂದಿರಿ! ನಮ್ಮನ್ನು ತಡೆದರೆ ಇಂದಿರಾ ಗಾಂಧಿಗೆ ಆದ ಗತಿಯೇ ನಿಮಗೂ ಆಗಬಹುದು: ಅಮೃತ್ಪಾಲ್ ಸಿಂಗ್
‘Amit shah : ಖಲಿಸ್ತಾನ ಚಳವಳಿಯನ್ನು ಮೇಲೇಳಲು ಬಿಡುವುದಿಲ್ಲಎಂದು ಅಮಿತ್ ಶಾ(Amit shah) ಹೇಳಿದ್ದಾರೆ. ಇದೇ ಮಾತನ್ನು ಇಂದಿರಾ ಗಾಂಧಿ(Indhira Ghandi) ಕೂಡ ಹೇಳಿದ್ದರು. ಅವರಿಗೆ ಆದ ಗತಿಯೇ ನಿಮಗೂ ಆಗಲಿದೆ. ಅಂಥದ್ದೇ ಕ್ಲಿಷ್ಟತೆಯನ್ನು ಎದುರಿಸುತ್ತೀರಿ,” ಎಂದು ಖಲಿಸ್ತಾನಿ(Khalistan) ಮುಖಂಡ ಹಾಗೂ ‘ವಾರಿಸ್ ಪಂಜಾಬ್ ಕೇ’ ತೀವ್ರಗಾಮಿ ಸಂಘಟನೆ ಮುಖ್ಯಸ್ಥ ಅಮೃತ್ಪಾಲ್ ಸಿಂಗ್(Amruth Paal Sing) ಕೇಂದ್ರ ಸಚಿವ ಅಮಿತ್ ಶಾ ಅವರಿಖೆ ಬೆದರಿಕೆ ಹಾಕಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ಹೌದು, ಖಲಿಸ್ತಾನ ಚಳವಳಿಯನ್ನು ತಡೆಯಲು ಬಂದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆದ ಗತಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಆಗಲಿದೆ ಎಂದು ಖಲಿಸ್ತಾನ ಚಳವಳಿಯ ಬೆಂಬಲಿಗ ಅಮೃತ್ಪಾಲ್ ಸಿಂಗ್ ಬಹಿರಂಗ ಬೆದರಿಕೆ ಹಾಕಿದ್ದಾರೆ. ಖಲಿಸ್ತಾನ ಚಳವಳಿಯನ್ನು ಮೇಲೇಳಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಇಂದಿರಾ ಗಾಂಧಿ ಅವರು ಖಲಿಸ್ತಾನ ಚಳವಳಿಯನ್ನು ನಿಲ್ಲಿಸಲು ಪ್ರಯತ್ನಿಸಿದರು. ಫಲಿತಾಂಶ ಏನಾಯಿತು ಗೊತ್ತಲ್ಲ. ನೀವು ಅದನ್ನೇ ಮಾಡಲು ಪ್ರಯತ್ನಿಸಿ, ಅವರಿಗಾದಂತೆ ನಿಮಗೂ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
‘ನಾವು ಯಾವುದೇ ಬಂಧನಗಳಿಗೆ ಹೆದರುವುದಿಲ್ಲ. ನಮ್ಮ ಸಭೆ, ನಮ್ಮ ಪ್ರಯಾಣವನ್ನು ನಿಲ್ಲಿಸಲು ಸರ್ಕಾರಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಆದರೆ, ಯಾರಿಂದಲೂ ಸಿಖ್ಖರನ್ನು ತಡೆಯಲಾಗದು. ನಾವು ಹುಟ್ಟು ಹೋರಾಟಗಾರರು, ಸರ್ಕಾರಗಳು ನಮ್ಮನ್ನು ಬಂಧಿಸುವ ಬಗ್ಗೆ ಮಾತನಾಡುತ್ತಿವೆ. ಆದರೆ, ನಾವು ಒಂದು ಗುಂಪಿನೊಂದಿಗೆ ಇದ್ದೇವೆ ಎಂಬುದನ್ನು ಅವರು ತಿಳಿದಿರಬೇಕು ಎಂದು ಅಮಿತ್ ಶಾಗೆ ಅಮೃತ್ ಪಾಲ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಅಲ್ಲದೆ ಅಪಹರಣ ಕೇಸ್ವೊಂದಕ್ಕೆ ಸಂಬಂಧಿಸಿದಂತೆ ಅಮೃತ್ಪಾಲ್ನ ಆಪ್ತ ಲವ್ಪ್ರೀತ್ ತೂಫಾನ್ ಸಿಂಗ್ನನ್ನು ಪಂಜಾಬ್ನ ಅಮೃತಸರ ಪೊಲೀಸರು ಬಂಧಿಸಿದ್ದರು. ಇದನ್ನು ಖಂಡಿಸಿ, ಅಮೃತ್ಪಾಲ್ ಬೆಂಬಲಿಗರು ಹಾಗೂ ಖಲಿಸ್ತಾನ ಹೋರಾಟಗಾರರು ಸಾವಿರಾರು ಸಂಖ್ಯೆಯಲ್ಲಿ ಒಟ್ಟಾಗಿ ಬ್ಯಾರಿಕೇಡ್ಗಳನ್ನು ಪುಡಿಪುಡಿ ಮಾಡಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಇವರೆಲ್ಲರೂ ಕೈಗಳಲ್ಲಿ ಬಂದೂಕು, ಖಡ್ಗ ಹಾಗೂ ಇತರ ಆಯುಧಗಳನ್ನು ಹಿಡಿದು ಪೊಲೀಸರನ್ನು ಹಿಮ್ಮೆಟ್ಟಿಸಲು ಯತ್ನಿಸಿ ಸಮರ ಸದೃಶ ಘಟನೆ ಗುರುವಾರ ಸಂಭವಿಸಿತು.
ಅಮೃತಸರ ಪಟ್ಟಣ ಹಾಗೂ ಸುತ್ತಲಿನ ಪಟ್ಟಣಗಳಲ್ಲಿ ಕಾನೂನು ವ್ಯವಸ್ಥೆ ಹದಗೆಡುವ ಭಯದಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಗುರುವಾರ ಸಂಜೆ ವೇಳೆ ಲವ್ಪ್ರೀತ್ ತೂಫಾನ್ ಸಿಂಗ್ನನ್ನು ಬಿಡುಗಡೆ ಮಾಡಲು ತೀರ್ಮಾನಿಸಿದರು. ಇದರ ಘೋಷಣೆ ಆಗುತ್ತಿದ್ದಂತೆ ಖಲಿಸ್ತಾನಿ ಹೋರಾಟಗಾರರು ಶಾಂತರಾದರು. ಗಲಭೆ-ದಾಳಿ ಪ್ರಕರಣದ ತನಿಖೆ ಎಸ್ಐಟಿ ರಚನೆ ಮಾಡಲಾಗಿದೆ.
ಖಲಿಸ್ತಾನ್ ಚಳುವಳಿಯು ಸಿಖ್ ಪ್ರತ್ಯೇಕತಾವಾದಿ ಚಳುವಳಿಯಾಗಿದ್ದು , ಪಂಜಾಬ್ ಪ್ರದೇಶದಲ್ಲಿ ಖಲಿಸ್ತಾನ್ ಎಂಬ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸುವ ಮೂಲಕ ಸಿಖ್ಖರಿಗೆ ತಾಯ್ನಾಡನ್ನು ರಚಿಸಲು ಪ್ರಯತ್ನಿಸುತ್ತಿದೆ . ಪ್ರಸ್ತಾವಿತ ರಾಜ್ಯವು ಪ್ರಸ್ತುತ ಭಾರತದ ಪಂಜಾಬ್ ಅನ್ನು ರೂಪಿಸುವ ಭೂಮಿಯನ್ನು ಒಳಗೊಂಡಿರುತ್ತದೆ . ಪ್ರಸ್ತಾವಿತ ರಾಜ್ಯದ ಭೌಗೋಳಿಕ ಪ್ರದೇಶವು ವೇರಿಯಬಲ್ ಆಗಿದೆ ಮತ್ತು ವಿವಿಧ ಗುಂಪುಗಳಿಂದ ಹಲವಾರು ಪ್ರತಿಪಾದನೆಗಳನ್ನು ಮಾಡಲಾಗಿದೆ, ಆದರೆ ಪ್ರಾಥಮಿಕವಾಗಿ ಪರಿಗಣಿಸಲಾದ ಎಲ್ಲಾ ಯೋಜನೆಗಳು ಪ್ರಸ್ತುತ ಪಂಜಾಬ್, ಚಂಡೀಗಢ ಮತ್ತು ನೆರೆಯ ಭಾರತದ ರಾಜ್ಯಗಳ ಕೆಲವು ಭಾಗಗಳನ್ನು ರೂಪಿಸುವ ಭೂಮಿಯನ್ನು ಒಳಗೊಂಡಿವೆ.