Rohini Sindhuri : ಯಾರನ್ನೂ ಸುಮ್ನೆ ಬಿಡಲ್ಲ, ಏನಾಗುತ್ತೆ ಕಾದು ನೋಡಿ, Get well soon! ಫೋಟೋ ವಾರ್ ಬಗ್ಗೆ ಸಿಂಧೂರಿ ಫಸ್ಟ್ ರಿಯಾಕ್ಷನ್! ಪತಿ ಏನಂದ್ರು ಗೊತ್ತಾ?

Rohini Sindhuri and Roopa D: ರಾಜ್ಯದಲ್ಲಿ ನಿನ್ನೆಯಿಂದ ಐಎಎಸ್‌ ಹಾಗೂ ಐಸಿಪಿಎಸ್ (IAS vs IPS) (Rohini Sindhuri and Roopa D) ಅಧಿಕಾರಿಗಳ ಫೋಟೋ ವಾರ್ ಶುರುವಾಗಿದ್ದು, ಸಂಚಲನ ಸೃಷ್ಟಿಸಿದೆ. ಇಂದು ವಾರ್ ಮುಂದುವರೆದದ್ದು ಮತ್ತಷ್ಟು ತಾರಕಕ್ಕೇರಿದೆ. ಅಲ್ಲದೆ ಸಿಎಂ ಕೂಡ ಮಧ್ಯ ಪ್ರವೇಶಿಸಿ ಇಬ್ಬರಿಗೂ ನೋಟಿಸ್ ಕೊಡುವುದಾಗಿ ಸೂಚಿಸಿದ್ದಾರೆ. ಇದೀಗ ಈ ಸಂಬಂಧ ಇದೇ ಮೊದಲ ಬಾರಿಗೆ ರೋಹಿಣಿ ಸಿಂಧೂರಿ(Rohini Sindhuri)ಯವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ರೋಹಿಣಿಯವರು, ಗೆಟ್​ ವೆಲ್​ ಸೂನ್. ಈ ತರ ಮಾಡುವುದು ಸರಿಯಲ್ಲ. ಇದನ್ನು ನಾನು ಸುಮ್ಮನೇ ಬಿಡುವುದಿಲ್ಲ. ಫ್ರೊಪೆಷನಲ್​ ಆಗಿ ಏನೇ ಮಾಡಲಿ ಆ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ. ಆದ್ರೆ ವೈಯಕ್ತಿಕವಾಗಿ ಅವರು ತೇಜೋವಧೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವ, ಬಿಡುವ ಮಾತೇ ಇಲ್ಲ. ಈಗಾಗಲೇ ನನ್ನ ಗಂಡ ಎಲ್ಲವನ್ನು ಮಾತನಾಡಿದ್ದಾರೆ. ಈ ಬಗ್ಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದು ಐಎಎಸ್​ ಅಧಿಕಾರಿ ಹೇಳಿದ್ದಾರೆ.

ಅಲ್ಲದೆ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಕೂಡ ಇದರ ಬಗ್ಗೆ ರಿಯಾಕ್ಟ್ ಮಾಡಿದ್ದು, ವೈಯಕ್ತಿಕ ವಚಾರಗಳ ಬಗ್ಗೆ ಮಾತನಾಡುವುದಕ್ಕೆ ಡಿ.ರೂಪಾ ಯಾರು? ಅವರು ಹೊಟ್ಟೆಕಿಚ್ಚಿಗೆ ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ. ರೂಪಾ (Roopa IPS) ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಫಾಲೋವರ್ಸ್ ಇದ್ದಾರೆ. ಅವರು ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಬಳಿಕ ಮಾತನಾಡಿದ ನಾನು ಕನ್ನಡಿಗ ಆಗಿದ್ದು, ಮೊದಲು ನಾನು ಭಾರತಿಯ ಆಗಿದ್ದೇನೆ. ಆಂಧ್ರ ಪ್ರದೇಶಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮದು ಸುಶಿಕ್ಷಿತ ಕುಟುಂಬವಾಗಿದ್ದು, ನಮ್ಮ ಕುಟುಂಬದ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ. ಡಿ ಕೆ ರವಿ ವಿಚಾರವಾಗಿ, ಅವರ ಬಗ್ಗೆ ನಾನು ಮಾತನಾಡಲ್ಲ. ಮೃತಪಟ್ಟವರ ಈಗ ಬಗ್ಗೆ ಮಾತನಾಡುವುದು ಸರಿಯಲ್ಲ. ನನಗೂ ಸಂಸ್ಕಾರ ಗೊತ್ತಿದೆ. ನಮ್ಮ ತಂದೆಯವರು 50 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲಿನಿಂದಲೂ ನಮ್ಮ ಆಸ್ತಿಗಳು ರಾಜ್ಯದಲ್ಲಿಯೇ ಇಲ್ಲಿವೆ. ರೋಹಿಣಿ ಅವರನ್ನು ಮದುವೆಯಾಗುವ ಮೊದಲೇ ನಮ್ಮ ಕುಟುಂಬ ರಿಯಲ್ ಎಸ್ಟೇಟ್( Real estate) ವ್ಯವಹಾರ ನಡೆಸುಕೊಂಡು ಬಂದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಂದೆಡೆ ರೋಹಿಣಿ ಸಿಂಧೂರಿಯ (Rohini Sindhuri) ಫೋಟೋಗಳೆಲ್ಲವೂ ಸಹಜ ಫೋಟೋಗಳಾಗಿದೆ. ನಾನು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದೆ. ತಂದೆ ತಾಯಿ ಇಲ್ಲೇ ಇರುವ ಕಾರಣ ನಾನು ಉದ್ಯೋಗವನ್ನು ತೊರೆದು ಅವರೊಂದಿಗೆ ಇರಲು ಇಲ್ಲಿಗೆ ಬಂದಿದ್ದೇನೆ. ನಾವು ಮಾತನಾಡುವ ಹಾಗೂ ಸಂಭಾಷಣೆ ಮಾಡುವ ಬಗ್ಗೆ ಬ್ಲೂಟೂತ್(Bluetooth) ಮೂಲಕ ಹ್ಯಾಕ್ ಮಾಡಿ ಫೋಟೋಸ್‍ಗಳನ್ನು ತಗೆದುಕೊಂಡಿರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ದೂರು ಕೊಡುತ್ತೇವೆ ಎಂದು ಹೇಳಿದರು.

Leave A Reply

Your email address will not be published.