ಮದ್ಯಪ್ರಿಯರೇ ಗಮನಿಸಿ ! ಫೆ.11 ರಂದು ತಾಲೂಕಿನ ಎಲ್ಲಾ ಬಾರ್‌ಗಳು ಬಂದ್‌

ಮದ್ಯ ಪ್ರಿಯರೇ ನಿಮಗೊಂದು ಶಾಕಿಂಗ್‌ ನ್ಯೂಸ್‌. ಪೊಲೀಸ್‌ ಇಲಾಖೆಯ ಈ ಸೂಚನೆ ನಿಮಗೆ ಬೇಸರ ಮೂಡಿಸಬಹುದು. ಏಕೆಂದರೆ ಫೆ.11 ಶನಿವಾರದಂದು ಪುತ್ತೂರು ತಾಲೂಕಿನ ಎಲ್ಲಾ ಬಾರ್, ವೈನ್ ಶಾಪ್ ಗಳನ್ನು ಮುಂಜಾನೆಯಿಂದ ಸಂಜೆಯವರೆಗೆ ಬಂದ್‌ ಮಾಡಬೇಕು ಎನ್ನುವ ಸೂಚನೆಯೊಂದನ್ನು ಪೊಲೀಸ್ ಇಲಾಖೆ ನೀಡಿದೆ.

ಕೇಂದ್ರ ಗೃಹ ಸಚಿವರಾದ ಅಮಿತ್‌ಶಾ ಅವರು ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುವುದರಿಂದ, ಜೊತೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವರು, ಶಾಸಕರು ಹಾಗೂ ಬಿಜೆಪಿ ಹಿರಿಯ ನಾಯಕರು ಕೂಡಾ ಬರಲಿದ್ದು ಈ ಕಾರಣದಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ದೃಷ್ಟಿಯಿಂದ ಈ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ವೃತ್ತ ನಿರೀಕ್ಷಕರು ಪುತ್ತೂರು ಮತ್ತು ಈಶ್ವರಮಂಗಲಕ್ಕೆ ಕೇಂದ್ರ ಗೃಹ ಸಚಿವರ ಸಹಿತ ಬೊಮ್ಮಾಯಿ, ಸಚಿವರುಗಳು ಆಗಮಿಸಲಿದ್ದು, ಭದ್ರತೆ ಹಾಗೂ ಸುರಕ್ಷತೆಯ ಹಿನ್ನೆಲೆಯಲ್ಲಿ ಬಾರ್ ಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.

ಈ ಕುರಿತಂತೆ ಈಗಾಗಲೇ ಸ್ಥಳೀಯ ಶಾಸಕರ ಹಾಗೂ ಅಧಿಕಾರಿಗಳ ಪೂರ್ವತಯಾರಿ ಸಭೆ ನಡೆದಿದ್ದು ಸೂಕ್ತ ಭದ್ರತೆಯ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ತಯಾರಿ ನಡೆಸಿಕೊಂಡಿದೆ. ಹಾಗೆನೇ ಈ ಸೂಚನೆಯನ್ನು ಯಾರಾದರೂ ಧಿಕ್ಕರಿಸಿದರೆ ಕಾನೂನು ಕ್ರಮ ಕೂಡಾ ತೆಗೆದುಕೊಳ್ಳಲಾಗುವುದು ಎಂದು ಮಾಧ್ಯಮದ ಮೂಲಕ ಬಾರ್‌ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಸೂಚಿಸಲಾಗಿದೆ.

Leave A Reply

Your email address will not be published.