ಈ ಸಮಸ್ಯೆ ಇರೋರು ಬೀಟ್ರೂಟ್ ನಿಂದ ದೂರ ಉಳಿಯೋದೆ ಸೂಕ್ತ ; ಇಲ್ಲವಾದಲ್ಲಿ ನಿಮಗೆ ಎದುರಾಗಬಹುದು ಸಮಸ್ಯೆ!

ಹಣ್ಣು ಹಾಗೂ ತಕಾರಿಗಳು ನಮ್ಮ ಆರೋಗ್ಯಕ್ಕೆ ಲಾಭಕಾರಿ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನಾವು ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ ಪೋಷಕಾಂಶಗಳು ವಿಭಿನ್ನ ರೂಪದಲ್ಲಿ ಸಿಗುತ್ತದೆ. ಹೀಗಾಗಿ ಎಲ್ಲಾ ಪದಾರ್ಥಗಳನ್ನು ಸೇವಿಸುವುದು ಉತ್ತಮ.

ಕೆಲವು ತರಕಾರಿಗಳಲ್ಲಿ ವಿಟಮಿನ್ ಗಳು ಹೆಚ್ಚಾಗಿದ್ದರೆ, ಇನ್ನು ಕೆಲವು ತರಕಾರಿಗಳಲ್ಲಿ ಖನಿಜಾಂಶಗಳು ಇರುವುದು. ಹೀಗೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಸಂಪೂರ್ಣ ಪೋಷಕಾಂಶಗಳು ತರಕಾರಿಯಿಂದ ಸಿಗುವುದು. ಇಂತಹ ತರಕಾರಿಯಲ್ಲಿ ಬೀಟ್ ರೂಟ್ ಕೂಡ ಒಂದು.

ಇದು ರಕ್ತದ ಕೆಂಪು ಬಣ್ಣವನ್ನೇ ಹೊಂದಿರುವಂತಹ ತರಕಾರಿ. ಇದನ್ನು ಹಲವಾರು ವಿಧದಿಂದ ನಾವು ಬಳಸುತ್ತೇವೆ. ಬೀಟ್ ರೂಟ್ ನ ಜ್ಯೂಸ್ ಕೂಡ ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗುತ್ತಿದೆ. ಈ ಜ್ಯೂಸ್ ನ್ನು ಕುಡಿದರೆ ಅದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುವುದು. ಇಂತಹ ತರಕಾರಿಯಿಂದ ಸಿಗುವ ಲಾಭಗಳು ಅಪಾರವಾಗಿದೆ.

ಬೀಟ್ರೂಟ್ ರಕ್ತಹೀನತೆ ಸಮಸ್ಯೆಯನ್ನು ಕಡಿಮೆ ಮಾಡುವುದರೊಂದಿಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೀಟ್ರೂಟ್ ನಮ್ಮ ದೇಹಕ್ಕೆ ವಿಟಮಿನ್ ಬಿ, ಸಿ ಫಾಸ್ಫರಸ್, ಫೈಬರ್ ಮತ್ತು ಆಂಟಿಆಕ್ಸಿಡೆಂಟ್​ಗಳಂತಹ ಪೋಷಕಾಂಶಗಳನ್ನು ನೀಡುತ್ತದೆ. ಇದರಿಂದಾಗಿ ನಮ್ಮ ದೇಹವು ಸದೃಢವಾಗಿ ಮತ್ತು ಆರೋಗ್ಯಕರವಾಗಿರುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗೆ ಪರಿಹಾರವನ್ನು ನೀಡುವುದು ನಿಜ. ಆದರೆ, ಎಲ್ಲರೂ ಬೀಟ್ರೂಟ್ ಸೇವಿಸುವುದು ಒಳ್ಳೆಯದಲ್ಲ. ಯಾಕಂದ್ರೆ, ಈ ಆರೋಗ್ಯ ಸಮಸ್ಯೆ ಹೊಂದಿರುವವರು ಬೀಟ್ರೂಟ್ ಸೇವಿಸಬಾರದು. ಇದು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಹಾಗಿದ್ರೆ ಬನ್ನಿ ಯಾವುದು ಆ ಸಮಸ್ಯೆ? ಹೇಗೆ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಅನ್ನೋದನ್ನು ತಿಳಿಯೋಣ.

ಯಕೃತ್ತಿನ ಸಮಸ್ಯೆ:
ಬೀಟ್ರೂಟ್ ಅನ್ನು ಅತಿಯಾಗಿ ಸೇವಿಸುವುದರಿಂದ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯಕೃತ್ತಿನ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಕಬ್ಬಿಣ ಮತ್ತು ತಾಮ್ರದಂತಹ ಅಂಶಗಳು ಯಕೃತ್ತಿನಲ್ಲಿ ಠೇವಣಿಯಾಗುತ್ತವೆ. ಇದು ಯಕೃತ್ತಿನ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಚರ್ಮ ರೋಗಿಗಳು :
ಚರ್ಮ ಸಂಬಂಧಿ ಕಾಯಿಲೆ ಇರುವವರು ಬೀಟ್‌ರೂಟ್ ತಿನ್ನುವುದನ್ನು ತಪ್ಪಿಸಬೇಕು. ಹಾಗೆಯೇ ದೇಹದಲ್ಲಿ ಕೆಂಪು ದದ್ದುಗಳು ಅಥವಾ ಯಾವುದೇ ರೀತಿಯ ಅಲರ್ಜಿ ಇದ್ದರೆ, ನಂತರ ಬೀಟ್ರೂಟ್ ಅನ್ನು ಸೇವಿಸಬಾರದು.

ತುರಿಕೆ ಮತ್ತು ಜ್ವರ :

ತುರಿಕೆ ಮತ್ತು ಜ್ವರದಂತಹ ಸಮಸ್ಯೆ ಇದ್ದರೆ, ಬೀಟ್ರೂಟ್ ಅನ್ನು ತಿನ್ನಬಾರದು. ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವ ಜನರು ಸಹ ಇದನ್ನು ತಪ್ಪಿಸಬೇಕು ಏಕೆಂದರೆ ಬೀಟ್ರೂಟ್ ಮೂತ್ರಪಿಂಡದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬೀಟ್ರೂಟ್​ನಲ್ಲಿರುವ ಆಕ್ಸಲೇಟ್ ಎಂಬ ವಸ್ತುವು ಕಲ್ಲುಗಳ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ಜನರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಹೀಗಾಗಿ ಈ ಸಮಸ್ಯೆ ಇರುವವರು ಬೀಟ್ರೂಟ್ ತಿನ್ನುವುದರಿಂದ ದೂರ ಉಳಿಯೋದು ಉಳಿಯೊಂದು ಉತ್ತಮ.

Leave A Reply

Your email address will not be published.