Transman Pregnancy : ಟ್ರಾನ್ಸ್‌ಜೆಂಡರ್‌ ಗರ್ಭಿಣಿ ! ದೇಶದಲ್ಲೇ ಮೊಟ್ಟಮೊದಲ ಘಟನೆ, ಫೋಟೋ ವೈರಲ್‌ !!

ಹೆಣ್ಣೆಂದರೆ ದೈವಿಕ ಶಕ್ತಿಯ ಪ್ರತಿರೂಪ ಎನ್ನುವ ನಂಬಿಕೆಯಿದೆ. ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ.  ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಮದುವೆಯಾದ ಪ್ರತಿ ಜೋಡಿಯು ಕೂಡ ತಮ್ಮ ವಂಶದ ಕುಡಿಯ ನಿರೀಕ್ಷೆಯಲ್ಲಿರುವುದು ಸಹಜ. ಅದೆಷ್ಟೋ ಜೋಡಿಗಳು ಮಕ್ಕಳಾಗಿಲ್ಲ ಎಂದು  ಅದೆಷ್ಟೋ ದೇವರ ಮೊರೆ ಹೋಗುವ ಪ್ರಮೇಯ ಕೂಡ ಇದೆ.

ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮಿಚ್ಚೆಯಂತೆ  ಬದುಕುವ ಹಕ್ಕಿದೆ ಎನ್ನುವುದು ಎಷ್ಟು ಸತ್ಯವೋ ಆದ್ರೆ ಇದೇ ವಾಸ್ತವ ಸತ್ಯವನ್ನು ಒಪ್ಪಿಕೊಳ್ಳಲು ಸಮಾಜ ತಯಾರಿಲ್ಲ. ಹುಟ್ಟುತ್ತಾ ಬಾಲ್ಯದವರೆಗೂ ಗಂಡಂತೆ ನಟಿಸಿ, ಮನದಲ್ಲಿ ಹೆಣ್ಣಿನ ಭಾವನೆಗಳು ಭುಗಿಲೆದ್ದ ಸಂದರ್ಭದಲ್ಲಿ ಯಾರಲ್ಲೂ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡಲಾಗದೆ ಒದ್ದಾಟ ನಡೆಸುತ್ತಿದ್ದ ಮಂಗಳಮುಖಿಯರ ಪಾಡು ಹೇಳತೀರದು. ಮಂಗಳಮುಖಿ ಎಂದೊಡನೆ ಸಮಾಜ ಅವರನ್ನು ನೋಡುವ ರೀತಿಯೆ ಭಿನ್ನ. ಅವರಿಗೂ ಕೂಡ ಎಲ್ಲರಂತೆ ಸ್ವತಂತ್ರವಾಗಿ ಜೀವಿಸುವ  ಹಕ್ಕಿದೆ ಎಂಬುದನ್ನು ಮರೆತು ಪ್ರಾಣಿಗಳಿಗಿಂತ ಹೀನಾಯವಾಗಿ ವೇಶ್ಯಾವಾಟಿಕೆ ಎಂಬ ದಂಧೆಗೆ ನೂಕುವ ಇಲ್ಲವೇ ಬಿಕ್ಷೆ ಬೇಡಲು ಇರುವವರು ಎಂಬಂತೆ ಈಗಲೂ ನೋಡುತ್ತಿರುವುದು ವಿಪರ್ಯಾಸ. ಆದರೆ, ಕಾಲ ಬದಲಾದಂತೆ ಜನರ ಯೋಚನಾ ಲಹರಿ ಕೊಂಚ ಬದಲಾಗಿ, ಸಮಾಜ ಅವರನ್ನು ಪುರಸ್ಕೃತಗೊಳಿಸದೆ ಇದ್ದರೂ ಕೂಡ ಮನೆಯವರು ತೃತೀಯ ಲಿಂಗಿಗಳ ಪರವಾಗಿ ಕೆಲವೆಡೆಯಾದರೂ ನಿಲ್ಲುತ್ತಿರುವ ಹಿನ್ನೆಲೆ ತನ್ನ ಕಾಲ ಮೇಲೆ ಸದೃಢವಾಗಿ ಬೆಳೆಯಲು ಅವಕಾಶ ದೊರೆಯುತ್ತಿದೆ. ಇದೀಗ, ಮಂಗಳಮುಖಿಯೊಬ್ಬರ ಕನಸು ನನಸಾಗಿದ್ದು, ಈ ಅಚ್ಚರಿಯ ಸಂಗತಿ ಎಲ್ಲರನ್ನು ಬೆರಗುಗೊಳಿಸುತ್ತದೆ.

ಭಾರತದ ಸಂವಿಧಾನದ ಪ್ರಕಾರ ಆರ್ಟಿಕಲ್​ 377 ಪ್ರಕಾರ 2018ರಿಂದ LGBT ಸಕ್ರಮವಾಗಿದೆ. ಒಂದೇ ಲಿಂಗದವರು ಮದುವೆ ಆಗಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಅದೆಷ್ಟೋ ಜೋಡಿಗಳು ತಮ್ಮ ಕನಸಿಗೆ ಬಣ್ಣ ಹಚ್ಚಿದ್ದಾರೆ. ಸಾಮಾನ್ಯವಾಗಿ ತೃತೀಯ ಲಿಂಗದವರು ಮದುವೆಯಾದರು ಕೂಡ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಗೊತ್ತಿರುವ ಸಂಗತಿ. ಆದರೆ, ದೇಶದಲ್ಲಿ ಇದೆ ಮೊದಲ ಬಾರಿಗೆ  ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ವೈದ್ಯಕೀಯ ಕ್ಷೇತ್ರದಲ್ಲಿ  ಹೊಸ ಹೊಸ ಪ್ರಯೋಗಗಳು ನಡೆಯುವುದೇನು ಹೊಸತಲ್ಲ. ಆದರೆ, ವಿಜ್ಞಾನ  ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಹೊಸ ಪ್ರಯೋಗದತ್ತ ಹೆಜ್ಜೆ ಇಟ್ಟಿದೆ. ಹೌದು!! ತೃತೀಯ ಲಿಂಗದವರು ಗರ್ಭಾಧಾರಣೆ ಆಗಿರುವ ಘಟನೆ ವರದಿಯಾಗಿದೆ. ಈ ಅಪರೂಪದ ಘಟನೆಗೆ ಕೊಚ್ಚಿಯಲ್ಲಿ  ನಡೆದಿದೆ. ಜಹಾದ್ ಹೆಣ್ಣುಮಕ್ಕಳ ರೀತಿ ಬಾಲ್ಯದಲ್ಲಿ ಬೆಳೆದು, ಆ ಬಳಿಕ  ಗಂಡಸಿನ ರೀತಿ ಬದಲಾವಣೆ ಮಾಡಿಕೊಂಡರು. ಜಹಾದ್​ ಫಾಸಿಲ್​ ಮತ್ತು ಜಿಯಾ ಪೊವೆಲ್​ ಇಬ್ಬರು ಕೇರಳದ ತೃತೀಯಲಿಂಗಿ ದಂಪತಿಗಳಾಗಿದ್ದಾರೆ. ಜಿಯಾ ಪೊವೆಲ್​ ಒಬ್ಬ ಫೇಮಸ್ ಡಾನ್ಸರ್ ಆಗಿ ಕೇರಳದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ, ಜಹಾದ್   8 ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಜಿಯಾ ಅವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಶೇರ್​ ಮಾಡಿಕೊಳ್ಳುವುದರ ಮೂಲಕ ತಾಯಿಯಾಗುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

https://www.instagram.com/p/CoFoTzxvjWH/?igshid=Yzg5MTU1MDY=

ತನ್ನ  ಮಾನಸಿಕ ಖಿನ್ನತೆ ಕಡಿಮೆಯಾಗಿರುವ ಕುರಿತು ಹೇಳಿಕೊಂಡಿರುವ ಜಿಯಾ ಅವರ ಇಚ್ಛೆಯ ಅನುಸಾರ   ಜಹಾದ್​ ದೇಹದಲ್ಲಿ ಬದಲಾವಣೆ ಮಾಡಿಕೊಂಡ ಬಳಿಕ ಹಾರ್ಮೋನು ಚಿಕಿತ್ಸೆ ಮತ್ತು ಸ್ತನ ತೆಗೆಯುವ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾರೆ. ಸದ್ಯ ಎಲ್ಲಾ ಕೆಟ್ಟ ಕ್ಷಣಗಳು ಮುಕ್ತಾಯಗೊಂಡಿದೆ.  ಹೀಗಾಗಿ,  ಮಗುವಿನ ನಿರೀಕ್ಷೆಯಲ್ಲಿ ನಾವಿದ್ದೇವೆ  ಎಂದು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಜಿಯಾ ಬರೆದುಕೊಂಡಿದ್ದಾರೆ. ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ ತಂದುಕೊಡುವ ಸುಂದರ ಕ್ಷಣಗಳು. ಇದೀಗ, ಜಿಯಾ  ತಾಯಿ ತಂದೆಯಾಗುವ ಹಂಬಲ ಅಭಿಲಾಷೆ ಈಡೇರುವ ಖುಷಿಯಲ್ಲಿದ್ದಾರೆ. ನಮ್ಮ ಸ್ವಂತದ ಮಗುವ ಪಡೆಯುವ ಬಯಕೆ ಈಡೇರುವ ಕುರಿತು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ತಾನು ಹೆಣ್ಣಾಗಿ ಹುಟ್ಟದಿದ್ದರು ಕೂಡ ಹೆಣ್ತನ, ತಾಯ್ತನವನ್ನು ಅರಿತಿದ್ದೇನೆ. ತಾನು ಪ್ರತಿ ಬಾರಿ ತಾಯಿಯ ಕನಸನ್ನು ಕಾಣುತ್ತಿದೆ. ಸದ್ಯ ಈ  ಸಮಯವು ನನ್ನ ಅಭಿಲಾಷೆಗಳು ನಡೆಯುತ್ತಿದ್ದು, ಉದರದೊಳಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿರುವ ಮಗು ಗಂಡಾಗಲೀ, ಹೆಣ್ಣಾಗಲೀ ತಾನು ನವ ಮಾಸ ಮಗುವನ್ನು ಎದುರುನೋಡಲು ಕಾಯುವುದು ಅನಿವಾರ್ಯ.  ಆದರೂ ಈ ಕ್ಷಣವನ್ನು ಆನಂದದಿಂದ ಕಳೆಯುತ್ತಿದ್ದೆವೆ  ಎಂದು ಜಿಯಾ ಸಂತಸವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದ್ದು, ನಮ್ಮ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿ ತೃತೀಯಲಿಂಗಿ ದಂಪತಿ ತಂದೆ ತಾಯಿಯಾಗುತ್ತಿರುವ ವಿಚಾರ ಎಲ್ಲರನ್ನು ಅಚ್ಚರಿಗೆ ತಳ್ಳಿದ್ದು, ಏನೇ ಆಗಲಿ ಈ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ ಅಲ್ವಾ!!

Leave A Reply

Your email address will not be published.