ಪಾಪಿ ನಿರ್ಮಾಪಕ, ಈ ನಟಿಯ ಖಾಸಗಿ ಭಾಗಕ್ಕೆ ಗುದ್ದುತ್ತಿದ್ದನಂತೆ, ಬಾಕ್ಸಿಂಗ್ ರೀತಿ ಜಾಡಿಸುತ್ತಿದ್ದನಂತೆ! ತನ್ನ ಬಾಯ್ ಫ್ರೆಂಡಿನ ಕರಾಳ ಕೃತ್ಯ ಬಿಚ್ಚಿಟ್ಟ ಸೂಪರ್ ಸ್ಟಾರ್ ನಟಿ!!

ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​, ಕಾಲಿವುಡ್​, ಟಾಲಿವುಡ್​ನ ಸೂಪರ್​ಸ್ಟಾರ್​ಗಳ ಜೊತೆ ಅಭಿನಯಿಸಿ ಖ್ಯಾತಿ ಗಳಿಸಿದ ನಟಿ ಎಂದರೆ ಫ್ಲೋರಾ ಸೈನಿ ಅವರು. ಶಿವರಾಜ್ ಕುಮಾರ್ ನಟನೆಯ ‘ಕೋದಂಡರಾಮ’ ಸುದೀಪ್ ನಟನೆಯ ‘ನಮ್ಮಣ್ಣ’ ಸೇರಿದಂತೆ ‘ಸ್ತ್ರೀ’, ‘ಪ್ರೇಮ ಕೋಸಂ’, ‘ನರಸಿಂಹ ನಾಯ್ಡು’ನಂಥ ಹಲವು ಸೂಪರ್​ಹಿಟ್​ ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿರುವ ಒಂದು ಕಾಲದಲ್ಲಿ ಭಾರೀ ಬೇಡಿಕೆ ಇದ್ದವಳು. ಫ್ಲೋರಾ ಸೈನಿಯೀಗ ಶಾಕಿಂಗ್​ ಹೇಳಿಕೆಯೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಇಡೀ ಚಿತ್ರರಂಗವೇ ಶಾಕ್ ಪಡುವಂತಾಗಿದೆ.

ಹೌದು, ಪ್ಲೊರಾ ಸೈನಿ ಅವರು ತಮ್ಮ ಬಾಯ್​ಫ್ರೆಂಡ್​ ಆಗಿದ್ದ ಖ್ಯಾತ ನಿರ್ಮಾಪಕ ಗೌರಂಗ್ ದೋಷಿಯಿಂದ ಅನುಭವಿಸಿರುವ ಭಯಾನಕ ಕರಾಳ ಘಟನೆಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇವರು 14 ತಿಂಗಳ ಕಾಲ ನಿರ್ಮಾಪಕ ಗೌರಂಗ್​ ಜತೆ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಈ ರಿಲೇಶನ್​ಶಿಪ್ ತುಂಬಾನೇ ಬೀಭತ್ಸವಾಗಿತ್ತು ಎಂದು ಹೇಳಿದ್ದಾರೆ. 1999ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಫ್ಲೋರಾ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

1999ರಲ್ಲಿ ಫ್ಲೋರಾ ಸೈನಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ವೃತ್ತಿಜೀವನ ಆರಂಭಿಸಿದ್ದು ತೆಲುಗು ಚಿತ್ರರಂಗದಿಂದ. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ಬಳಿಕ ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದರು. ಈಗಲೂ ಫ್ಲೋರಾ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ತಮ್ಮ ರಿಲೇಶನ್​ಶಿಪ್​ ಬಗ್ಗೆ ಮಾತನಾಡಿದ್ದಾರೆ. ಗೌರಂಗ್ ದೋಶಿ ಅವರಿಂದ ಬದುಕು ನರಕವಾಗಿತ್ತು ಎಂದು ಈ ಮೊದಲು ಅವರ ಆರೋಪ ಮಾಡಿದ್ದರು. ಈಗ ಹೆಸರನ್ನು ಉಲ್ಲೇಖ ಮಾಡದೆ ಅವರು ತಾವು ಅನುಭವಿಸಿರುವ ಕಹಿ ಘಟನೆ ಕುರಿತು ಹೇಳಿಕೊಂಡಿದ್ದಾರೆ. ‘ನಾನು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಯಶಸ್ಸನ್ನು ಕಂಡವಳು. 20 ರ ಹರೆಯದಲ್ಲಿಯೇ ಸಿನಿ ರಂಗಕ್ಕೆ ಪ್ರವೇಶಿಸಿದೆ. 20 ಕ್ಕೂ ಹೆಚ್ಚು ಟಾಪ್ ಡಿಸೈನರ್‌ಗಳಿಗಾಗಿ ಮಾಡೆಲಿಂಗ್ ಮಾಡಿದ್ದೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆ ನಂತರ ನಿರ್ಮಾಪಕನೊಬ್ಬನ ಬಲೆಗೆ ಬಿದ್ದೆ. ಅಲ್ಲಿಂದ ನನ್ನ ಬದುಕೇ ನರಕವಾಗೋಯ್ತು’ ಎಂದು ಫ್ಲೋರಾ ಬರೆದುಕೊಂಡಿದ್ದಾರೆ.

ಆತನ ಪ್ರೀತಿಗೆ (Love) ಬಿದ್ದ ಕೆಲವೇ ದಿನಗಳಲ್ಲಿ ಆತ ಕ್ರೂರಿಯೆಂಬುದರ ಅರಿವಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು. ಆತ ನನ್ನ ಖಾಸಗಿ ಅಂಗಗಳಿಗೆ ಒದೆಯುತ್ತಿದ್ದ, ಮುಖವನ್ನು ಬಾಕ್ಸಿಂಗ್ ಬ್ಯಾಗ್‌ನಂತೆ ಬಳಸುತ್ತಿದ್ದ. ಯಾರಿಗೂ ಫೋನ್​ ಮಾಡದಂತೆ ತಡೆಯುತ್ತಿದ್ದ. ಸಿನಿಮಾಗಳಲ್ಲಿ ನಟಿಸದಂತೆ ತಾಕೀತು ಮಾಡುತ್ತಿದ್ದ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲು ಆಗಲೇ ಇಲ್ಲ. ಅವನಿಗಾಗಿ ಎಲ್ಲರನ್ನು ಬಿಟ್ಟು ಹೋದರೆ ಹೀಗೆಲ್ಲಾ ದೌರ್ಜನ್ಯ ಮಾಡಿದ. ಯಾಕೆ ಆತ ಹೀಗೆ ಹೊಡೆಯುತ್ತಿದ್ದಾನೆ ಎಂದು ಗೊತ್ತಾಗಲಿಲ್ಲ. ಆದರೂ ಆತ ಒಳ್ಳೆಯವನು ಎಂದು ನಂಬಿದ್ದೆ. ಕೊನೆಗೂ ಅವನ ಸಮಸ್ಯೆ ಅರ್ಥವಾಗಲಿಲ್ಲ. ಎಲ್ಲಾದರೂ ಹೋಗಿಬಿಡುತ್ತೇನೆ ಎಂದೆ. ಹಾಗೆ ಮಾಡಿದರೆ ನನ್ನನ್ನು, ನನ್ನ ಪೋಷಕರನ್ನು ಕೊಂದುಬಿಡುತ್ತೇನೆ ಎಂದು ಬೆದರಿಸಿದ್ದ. ಹದಿನಾಲ್ಕು ತಿಂಗಳು ಕತ್ತಲೆಯಲ್ಲಿಯೇ ಬದುಕಿದೆ. ಯಾರನ್ನೂ ಭೇಟಿಯಾಗಲು, ಮಾತನಾಡಲು ಆಗಲೇ ಇಲ್ಲ. ಒಂದು ದಿನ ಚಿತ್ರಹಿಂಸೆ ಹೆಚ್ಚಾಯಿತು. ಆತ ನನ್ನ ಹೊಟ್ಟೆಗೆ ಒದ್ದ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಮನೆ ಬಿಟ್ಟು ಓಡಿಹೋದೆ’ ಎಂದು ಫ್ಲೋರಾ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಹೊಡೆತ ತಿಂದ ಫೋಟೋಗಳನ್ನೂ ಶೇರ್​ ಮಾಡಿಕೊಂಡಿದ್ದಾರೆ.

ಹೀಗೆ ಓಡಿಬಂದ ಫ್ಲೋರಾ ನಂತರದಲ್ಲಿ ತಮ್ಮ ಪಾಲಕರ ಜೊತೆ ವಾಸಮಾಡೋಕೆ ಆರಂಭಿಸಿದರು. ಈ ಘಟನೆಯಿಂದ ಚೇತರಿಸಿಕೊಳ್ಳೋಕೆ ಅವರಿಗೆ ಸಾಕಷ್ಟು ತಿಂಗಳೇ ಬೇಕಾಯಿತು. ನಂತರದಲ್ಲಿ ಅವರು ಮತ್ತೆ ನಟನೆ ಆರಂಭಿಸಿದರು. ಇದರ ಕುರಿತು ಮಾತನಾಡಿದ ಅವರು ‘ಎಲ್ಲದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು. ಆದರೆ, ನಾನು ಈಗ ಖುಷಿಯಾಗಿದ್ದೇನೆ. ನನಗೆ ಪ್ರೀತಿಯೂ ಸಿಕ್ಕಿದೆ’ ಎಂದು ಹೇಳಿದ್ದಾರೆ.

Leave A Reply

Your email address will not be published.