KYC : ಕೆವೈಸಿ ನೀತಿಯಲ್ಲಿ ಬದಲಾವಣೆ | ಇನ್ನಷ್ಟು ಸರಳೀಕರಿಸಿದ ಸರ್ಕಾರ !

ಕೆವೈಸಿ ನೀತಿಯನ್ನು ಮತ್ತಷ್ಟು ಸರಳೀಕರಿಸಲು ಸರ್ಕಾರ ನಿರ್ಧರಿಸಿದ್ದು, ಡಿಜಿಟಲ್‌ ಇಂಡಿಯಾದ ಬೇಡಿಕೆಗೆ ಅನುಗುಣವಾಗಿ, ಅದಕ್ಕೆ ಹೊಂದಾಣಿಕೆ ಆಗುವಂತಹ ಕೆವೈಸಿ ವ್ಯವಸ್ಥೆ ಅಳವಡಿಸಲು ಹಣಕಾಸು ವಲಯದ ನಿಯಂತ್ರಣಾ ಸಂಸ್ಥೆಗಳನ್ನು ಉತ್ತೇಜಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಇದಲ್ಲದೆ, ಬಳಕೆದಾರನಿಗೆ ವಿಳಾಸ ಮತ್ತು ಇನ್ನಿತರ ಮಾಹಿತಿಯ ಬದಲಾವಣೆಗೆ ಸಂಬಂಧಿಸಿದಂತೆ ಒಂದೇ ಸ್ಥಳದಲ್ಲಿ ಎಲ್ಲಾ ರೀತಿಯ ಪರಿಹಾರ ಸಿಗುವ ಹಾಗೆ ವ್ಯವಸ್ಥೆಯನ್ನು ರೂಪಿಸಲಿದ್ದು, ವಿವಿಧ ಸರ್ಕಾರಿ ಸಂಸ್ಥೆಗಳು, ನಿಯಂತ್ರಣಾ ಪ್ರಾಧಿಕಾರಗಳ ನಡುವೆ ಸಮನ್ವಯಕ್ಕೂ ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಈ ವ್ಯವಸ್ಥೆಯನ್ನು ಡಿಜಿಲಾಕರ್‌ ಮತ್ತು ಆಧಾರ್‌ನಲ್ಲಿರುವ ಬಳಕೆದಾರನ ಮಾಹಿತಿಯನ್ನು ಮೂಲ ಮಾಹಿತಿಯಾಗಿ ಬಳಸಿಕೊಂಡು ರೂಪಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಪಾನ್‌ ಕಾರ್ಡ್ ಹೊಂದಿರುವ, ಉದ್ಯಮಗಳನ್ನು ಗುರುತಿಸಲು, ಇನ್ಮುಂದೆ ಸರ್ಕಾರಿ ಏಜೆನ್ಸಿಗಳು ಪಾನ್‌ ನಂಬರ್‌ ಅನ್ನು ಸಾಮಾನ್ಯ ಗುರುತಿಸುವಿಕೆಯ ಮೂಲವನ್ನಾಗಿ ಬಳಕೆ ಮಾಡಲಿದ್ದು, ಇದು ಉದ್ಯಮಕ್ಕೆ ಸಹಕಾರಿಯಾಗಿದ್ದು, ಇದನ್ನು ಕಾನೂನಿನ ಮೂಲಕ ಬದ್ಧಗೊಳಿಸಲಾಗುತ್ತದೆ.

ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ಒಂದು ಮಾಹಿತಿಯನ್ನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ತಿಳಿಸುವುದನ್ನು ತಪ್ಪಿಸುವುದಕ್ಕಾಗಿ, ಒಂದೇ ಬಾರಿಗೆ ಎಲ್ಲರಿಗೂ ಮಾಹಿತಿ ತಲುಪುವ ಹಾಗೆ ಮಾಡಲು, ಏಕೀಕೃತ ದಾಖಲು ವ್ಯವಸ್ಥೆ ಜಾರಿಗೆ ತರಲಾಗುವುದು.

Leave A Reply

Your email address will not be published.