Insurance scheme | ಸರ್ಕಾರದ ಸೂಪರ್ ಸೇವಿಂಗ್ ಯೋಜನೆ | 20 ರೂಪಾಯಿ ಉಳಿತಾಯ ಮಾಡಿ ಪಡೆಯಿರಿ 2 ಲಕ್ಷದವರೆಗೆ ವಿಮೆ!

ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ.

ಹೌದು. ಕೇಂದ್ರ ಸರ್ಕಾರದಿಂದ ಬಡವರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಜನತೆಗೆ ಸಹಾಯ ಆಗಿತ್ತಿದೆ. ಅದರಂತೆ ವಿಮಾ ಪಾಲಿಸಿ ಯೋಜನೆಯನ್ನು ಜಾರಿಗೆ ತಂದಿದೆ. ಇಂದಿನ ಆಗು-ಹೋಗುಗಳನ್ನು ಗಮನಿಸಿದಾಗ ಮುಖ್ಯವಾಗಿ ಬೇಕಾಗಿರುವುದು ರಕ್ಷಣೆ. ಅದೇ ಅಪಘಾತಗಳಿಂದ. ಇಂತಹ ಸಮಸ್ಯೆಯನ್ನು ಮನಗಂಡೇ ಸರ್ಕಾರ ಯೋಜನೆಯನ್ನು ಪ್ರಾರಂಭಿಸಿದೆ.

ಅದುವೇ ಅಪಘಾತ ವಿಮಾ ಪಾಲಿಸಿ.  ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ. ಅತಿ ಕಡಿವೆ ಮೊತ್ತದ ಹಣ ಪಾವತಿ ಮಾಡುವ ಮೂಲಕ ದೊಡ್ಡ ಮೊತ್ತದ ಪಾಲಿಸಿಯನ್ನು ಪಡೆದುಕೊಳ್ಳಬಹುದು. ವರ್ಷಕ್ಕೆ ಕೇವಲ ರೂ 20 ಜಮ ಮಾಡುವ ಮೂಲಕ 20 ಲಕ್ಷದವರೆಗೆ ಪಾಲಿಸಿಯನ್ನು ಪಡೆದುಕೊಳ್ಳಬಹುದು. ನೀವೇನಾದೂ ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷದವರೆಗೆ ಹಣವನ್ನು ಪರಿಹಾರವಾಗಿ ಪಡೆದುಕೊಳ್ಳಬಹುದು. ಮತ್ತು ಶಾಶ್ವತ ಅಂಗವೈಕಲ್ಯ ಹೊಂದಿದರೆ ಒಂದು ಲಕ್ಷದವರೆಗೆ ಪರಿಹಾರ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯ ಲಾಭವನ್ನು 18-70 ವರ್ಷ ವಯಸ್ಸಿನ ಜನರು ಪಡೆಯಬಹುದು. PMSBY ಪಾಲಿಸಿಯ ಪ್ರೀಮಿಯಂ ಅನ್ನು ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಬ್ಯಾಂಕ್ ಖಾತೆಯನ್ನು PMSBY ಗೆ ಲಿಂಕ್ ಮಾಡಲಾಗುತ್ತದೆ. PMSBY ನೀತಿಯ ಪ್ರಕಾರ, ವಿಮೆಯನ್ನು ಖರೀದಿಸಿದ ಗ್ರಾಹಕರು ಅಪಘಾತದಲ್ಲಿ ಅಥವಾ ಅಂಗವೈಕಲ್ಯದಲ್ಲಿ ಮರಣಹೊಂದಿದರೆ, ಅವರ ಅವಲಂಬಿತರಿಗೆ 2 ಲಕ್ಷ ರೂ. ಸಿಗಲಿದೆ.

ಬ್ಯಾಂಕಿನ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಈ ಪಾಲಿಸಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಮಿತ್ರರು PMSBY ಅನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ. ಇದಕ್ಕಾಗಿ ವಿಮಾ ಏಜೆಂಟ್ ಅನ್ನು ಸಹ ಸಂಪರ್ಕಿಸಬಹುದು. ಸರ್ಕಾರಿ ವಿಮಾ ಕಂಪನಿಗಳು ಮತ್ತು ಅನೇಕ ಖಾಸಗಿ ವಿಮಾ ಕಂಪನಿಗಳು ಈ ಯೋಜನೆಯನ್ನು ಮಾರಾಟ ಮಾಡುತ್ತವೆ. ಹಾಗಿದ್ದರೆ ಇನ್ಯಾಕೆ ತಡ ಈಗಾಲೆ ಖಾತೆ ತೆರೆಯಿರಿ 20 ಜಮಾ ಮಾಡಿ ವಿಮಾ ಪಾಲಿಸಿ ಪಡೆದುಕೊಳ್ಳಿ. ಇಂತಹ ಸುಲಭ ಯೋಜನೆಯ ಖಾತೆ ತೆರೆಯುವ ಮೂಲಕ ಅಪಘಾತ ಸಂದರ್ಭದಲ್ಲಿ ಕುಟುಂಬದವರಿಗೆ ನೆರವಾಗಬಹುದು.

Leave A Reply

Your email address will not be published.