‘ಹತ್ತಿ’ ಮಾಡುವುದಕ್ಕಿಂತ ಇಳಿದು ಮಾಡಿದರೆ ಜಾಸ್ತಿ ವ್ಯಾಯಾಮ !
ನೀವೂ ಕೂಡಾ ಆ ವ್ಯಾಯಾಮ ಮಾಡೇ ಮಾಡಿರ್ತೀರಿ. ಅದು ನಿಮ್ಮ ಫೆವರಿಟ್ ವ್ಯಾಯಾಮ ಕೂಡಾ ಆಗಿರ್ಬೋದು. ಮನೆಯಲ್ಲಿರುವ ಹೆಚ್ಚಿನವರು ಇದನ್ನ ಮಾಡಿದ್ರೂ ಇದೊಂದು ಪ್ರಕಾರದ ವ್ಯಾಯಾಮ ಅನ್ನೋದು ನಿಮಗೆ ಹಲವರಿಗೆ ಗೊತ್ತಿರ್ಲಿಕ್ಕಿಲ್ಲ. ಹೌದು ಹೆಚ್ಚಿನವರು ಇದನ್ನು ಪ್ರತೀ ದಿನ ಮಾಡ್ತಾರೆ. ಮೇಲೆ ಹತ್ತೋದು, ಸುಸ್ತಾದ್ರೆ ಕೆಳಗೆ ಇಳಿಯೋದು ಈ ವಿಶೇಷ ವ್ಯಾಯಾಮ. ಕೆಲವರು ಮೇಲೆ ‘ಹತ್ತಿ’ ಮಾಡಿದ್ರೆ, ಇನ್ನು ಕೆಲವರು ಕೆಳಗಿಳಿದು ಮಾಡ್ತಾರೆ. ಯಾವಾಗಲೂ ಕೆಳಗಡೆಯೇ ಇರುವವರೂ ಇದ್ದಾರೆ. ಒಮ್ಮೆಯಾದರೂ ಮೇಲೆ, ಕೆಳಗೆ ಎರಡೂ ಕಡೆ ‘ಹತ್ತಿ’ ಈ ವ್ಯಾಯಾಮ ಮಾಡುವ ಆಸೆಯಂತೂ ಹಲವರಿಗೆ ಇದ್ದೇ ಇರುತ್ತದೆ. ಯಾಕಂದ್ರೆ ಇದರಿಂದ ದೇಹ ದಂಡನೆಯಾಗಿ, ಅವರಿಗೂ ಕೂಡ ನಾವು ಎಲ್ಲರ ಹಾಗೆ ಸ್ಮಾರ್ಟ್ ಇದ್ದೇವೆ ಅನ್ನೋ ಫೀಲ್ ಬರಬೇಕಲ್ವಾ? ಆದ್ರೆ ಕೆಲವರಿಗೆ ಇದನ್ನು ಮಾಡುವಾಗ ಬೇಗ ಸುಸ್ತಾಗಿ ಹೋಗ್ಬೋದು. ಅದರಲ್ಲೂ ಕೂಡ ‘ಪ್ರಾಯ’ ದವರಿಗೆ ಬೇಗ ಆಯಾಸ ಆಗಿ ಬಿಡುತ್ತದೆ. ಅದೆಲ್ಲ ಬದಿಗಿರ್ಲಿ. ಹಾಗಾದ್ರೆ ಈ ವ್ಯಾಯಾಮ ಯಾವುದು? ಈ ಆಸನದಿಂದ ಏನೆಲ್ಲಾ ಪ್ರಯೋಜನ ಆಗ್ಬೋದು ಅನ್ನ ಕುತೂಹಲ ಇದೆಯಾ? ಹಾಗಾದ್ರೆ ಸ್ಟೋರಿ ನೋಡಿ.
ನೀವು ಸಣ್ಣಗಾಗಬೇಕು, ಬಾಡಿಯನ್ನು ಫಿಟ್ ಆಗಿ ಇಡ್ಬೇಕು, ಸ್ಮಾರ್ಟ್ ಆಗಿ ಕಾಣ್ಬೇಕು ಅಂತ ಮನೆಯಲ್ಲಿ ಸಾಕಷ್ಟು ಬಾರಿ ‘ಹತ್ತು’ವುದನ್ನು, ‘ಹತ್ತಿ’ಸುವುದನ್ನು ಏನಾದ್ರೂ ಅಭ್ಯಾಸ ಮಾಡ್ಕೊಂಡಿದಿರಾ? ಆಫೀಸ್ ಅಥವಾ ಇನ್ನಿತರೆ ಜಾಗಗಳಲ್ಲೂ ಕೂಡ ಹತ್ತೋದನ್ನೇ ಮಾಡ್ತೀರಾ! ಹೀಗೆ ಮಾಡೋದ್ರಿಂದ ಏನಾದ್ರೂ ನಮ್ಮ ದೇಹಕ್ಕೆ ಹೆಚ್ಚು ಪ್ರಯೋಜನ ಎಂದು ಭಾವಿಸಿದ್ರೆ ಮೈಕಲ್ ಮೋಸ್ಲೇ ಎಂಬ ತಜ್ಞರ ಮಾತನ್ನೊಮ್ಮೆ ಕೇಳಿ. ‘ಹತ್ತಿ’ ಮಾಡಿ ದೇಹ ದಂಡಿಸುವುದು ಉತ್ತಮವೋ, ಕೆಳಗಿಳಿದು ಮಾಡುವುದು ಉತ್ತಮವೋ ಎಂದು! ಆಗ ಯಾವುದು ಪ್ರಯೋಜನ ನಿಮಗೇ ತಿಳಿಯುತ್ತದೆ.
ಸಂಶೋಧಕರಾದ ಮೋಸ್ಲೇ ಹಾಗೂ ಅವರ ತಂಡದವರು ಸೇರಿ ಸಂಶೋದಿಸಿದ್ದೇನೆಂದರೆ ಯಾವುದೇ ವ್ಯಾಯಾಮದಿಂದ ಹೆಚ್ಚಿನ ಲಾಭ ಪಡೆಯಲು ಉತ್ತಮ ಮಾರ್ಗವೆಂದರೆ ಅದನ್ನು ವಿಲಕ್ಷಣವಾಗಿ ಮಾಡುವುದು. ಅಂದರೆ ಅದಕ್ಕೆವಿರುದ್ದವಾಗಿ ಮಾಡುವುದು ಎಂದರ್ಥ. ಬಿಡಿಸಿ ಹೇಳವದಾದರೆ ನೀವು ‘ಹತ್ತು’ವಾಗ ಅಥವಾ ಭಾರವನ್ನು ಎತ್ತುವಾಗ ನಿಮ್ಮ ಸ್ನಾಯುಗಳು ಸಂಕುಚಿತವಾಗುತ್ತದೆ. ಆದರೆ ಮರಳಿ ಇಳಿಯುವಾಗ ಅಥವಾ ಇಳಿಸುವಾಗ ಅದೇ ಸ್ನಾಯುಗಳು ವಿಸ್ತಾರವಾಗಿ ಬಿಡುತ್ತದೆ. ಇದು ವಿಲಕ್ಷಣ ವ್ಯಾಯಾಮದ ಹೊಸ ವಿಜ್ಞಾನವಾಗಿದೆ ಎಂದು ಮೋಸ್ಲೇ ಹೇಳುತ್ತಾರೆ.
ನಿಮ್ಮ ಸ್ನಾಯುಗಳನ್ನು ಸಂಕುಚಿತಗೊಳಿಸುವುದನ್ನು (ಹತ್ತುವಾಗ ಆಗುವುದು) ಕೇಂದ್ರೀಯ ವ್ಯಾಯಾಮ ಎಂದೂ, ಆದರೆ ಆ ಸ್ನಾಯುಗಳು ವಿಸ್ತರಿಸುವುದನ್ನು(ಇಳಿಯುವಾಗ ಆಗುವುದು) ವಿಲಕ್ಷಣ ವ್ಯಾಯಾಮ ಎಂದೂ ಕರೆಯಲಾಗುತ್ತದೆ. ನಾರ್ಥಾಂಪ್ಟನ್ ವಿಶ್ವವಿದ್ಯಾಲಯದ ಬಯೋಮೆಕಾನಿಕ್ಸ್ ಪ್ರಾಧ್ಯಾಪಕರಾದ ಟೋನಿ ಕೀ ಅವರು ಹೇಳುವಂತೆ ಎಲ್ಲಾ ರೀತಿಯ ವ್ಯಾಯಾಮಗಳು ಸ್ನಾಯುಗಳಿಗೆ ಸೂಕ್ಷ್ಮವಾದ ಹಾನಿಯುಂಟುಮಾಡುತ್ತದೆ. ಇದರಿಂದ ಬೆಳವಣಿಗೆಯ ಹಾರ್ಮೋನುಗಳ ಬಿಡುಗಡೆಯಾಗಿ ನಿಮ್ಮ ಸ್ನಾಯುಗಳು ಮೊದಲಿಗಿಂತ ಬಲಿಷ್ಠವಾಗಿ ಬೆಳೆಯಲು ಪ್ರಚೋದಿಸುತ್ತದೆ ಯಂತೆ.
ವ್ಯಾಯಾಮದ ವಿಲಕ್ಷಣ ಭಾಗವು ಕಡಿಮೆ ಫೈಬರ್ ಗಳನ್ನು ಆಯಾಸಗೊಳಿಸಿದರೂ, ಅದು ನಾಲ್ಕು ಪಟ್ಟು ಹೆಚ್ಚಿನ ಹೊರೆಯೊಂದಿಗೆ ಮಾಡುತ್ತದೆ. ಇದು ಆ ಜಿವಕೋಶಗಳು ಮತ್ತು ಫೈಬರ್ ಗಳಿಗೆ ಹೆಚ್ಚಿನ ಸೂಕ್ಷ್ಮ ಹಾನಿಯನ್ನುಂಟು ಮಾಡುತ್ತದೆ. ಹೆಚ್ಚಿನ ಹಾನಿ ಎಂದರೆ ವ್ಯಾಯಾಮದ ನಂತರ ದುರಸ್ತಿ ಮತ್ತು ಚೇತರಿಕೆಯ ಪ್ರಕ್ರಿಯೆಯಲ್ಲಿ ದೇಹವು ಹೆಚ್ಚಿನ ಕ್ಯಾಲೋರಿಗಳನ್ನು ಸುಡುತ್ತದೆ ಎಂದರ್ಥ. ಜೊತೆಗೆ ಇದು ಸಾಂಪ್ರದಾಯಿಕ ವ್ಯಾಯಾಮಗಳಿಗಿಂತ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದರ್ಥ.
ಇದರಿಂದ ನೀವು ಹತ್ತುವ ವ್ಯಾಯಾಮಕ್ಕಿಂತ ಇಳಿಯುವ ವ್ಯಾಯಾಮವೆ ಪ್ರಯೋಜನ ಎಂದು ಅರಿಯಬೇಕು. ಈಗಲಾದರೂ ನಿಮಗೆ ತಿಳಿಯಿತಾ? ಮನೆಯಲ್ಲಿ ಅಥವಾ ಆಫೀಸ್ ಗಳಲ್ಲಿ ಇರುವಂತಹ ಮೆಟ್ಟಿಲುಗಳನ್ನು ಹತ್ತುವುದಕ್ಕಿಂತ ಇಳಿಯುವುದೇ ಹೆಚ್ಚು ಪ್ರಯೋಜನಕಾರಿಯಾದ ವ್ಯಾಯಾಮ ಎಂದು. ಬೆಟ್ಟದ ಮೇಲಕ್ಕೆ ಜಾಗಿಂಗ್ ಮಾಡುವ ಬದಲು ಇಳಿಜಾರಿನಲ್ಲಿ ಓಡುವುದು ಹೆಚ್ಚು ಉಪಯುಕ್ತ ಎಂದೂ. ಹಾಗಾದ್ರೆ ಇನ್ನು ಇಳಿಯುವ ಕಡೆಗೆ ಹೆಚ್ಚು ಗಮನ ಕೊಡಿ. ಆಯಾಸವೂ ಅಷ್ಟೇನೂ ಇರುವುದಿಲ್ಲ! ಜೊತೆಗೆ ದೇಹ ದಂಡನೆಯೂ ಇರುತ್ತದೆ!