Bucket Cleaning : 2 ನಿಮಿಷ ಸಾಕು ಬಾತ್‌ರೂಂ ಬಕೆಟ್‌ ಕ್ಲೀನ್‌ ಮಾಡಲು, ಈ ವಿಧಾನ ಅನುಸರಿಸಿ

ಮಹಿಳೆಯರಿಗೆ ಈ ಬಾತ್‌ರೂಂ ಸ್ವಚ್ಛಗೊಳಿಸುವುದು ನಿಜಕ್ಕೂ ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಹೇಗೆ ಕ್ಲೀನ್‌ ಮಾಡಿದರೂ ಹೊಸದರಂತೆ ಕಾಣದಿದ್ದಾಗ ಟೆನ್ಶನ್‌ ಆಗೋದು ಸಾಮಾನ್ಯ. ಸಾಮಾನ್ಯವಾಗಿ ಬಾತ್ ರೂಂ ನಲ್ಲಿರೋ ಬಕೆಟ್ ಅನ್ನು ದಿನಾಲೂ ಸ್ವಚ್ಛಗೊಳಿಸೋದಿಲ್ಲ. ಹಾಗಾಗಿ ಅದರಲ್ಲಿ ಕೊಳೆ ತುಂಬಿಕೊಂಡಿರುತ್ತದೆ. ಇನ್ನೂ ಈ ಕೊಳಕನ್ನು ತೆಗೆದು, ಬಕೆಟ್ ಶುಭ್ರವಾಗಿರಿಸಲು ಇಲ್ಲಿದೆ ಎರಡು ನಿಮಿಷದ ವಿಧಾನ. ಈ ವಿಧಾನದಿಂದ ನಿಮ್ಮ ಮನೆಯ ಬಾತ್ ರೂಂ ನ ಬಕೆಟ್ ಫಳಫಳ ಹೊಳೆಯುವಂತೆ ಮಾಡಿ.

ಬಕೆಟ್ ಅನ್ನು ಸ್ವಚ್ಛಗೊಳಿಸುವುದು ಹೇಗೆ?

ನಾವು ಬೇಕಿಂಗ್ ಸೋಡಾವನ್ನು ಆಹಾರ ತಯಾರಿಸಲು ಬಳಸುತ್ತೇವೆ. ಇದು ಆಹಾರದ ತಯಾರಿಗೆ ಮಾತ್ರವಲ್ಲದೆ, ಕ್ಲೀನಿಂಗ್ ನಲ್ಲೂ ಸಹಕಾರಿಯಾಗಿದೆ. ಇದು ಬಕೆಟ್ ಅನ್ನು 2 ನಿಮಿಷಗಳಲ್ಲಿ ಸ್ವಚ್ಛಗೊಳಿಸುತ್ತದೆ.

ವಿಧಾನ : ಒಂದು ಪಾತ್ರೆಯಲ್ಲಿ ಅಡಿಗೆ ಸೋಡಾ, ಡಿಶ್ ಸೋಪ್ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿಕೊಳ್ಳಿ. ನಂತರ ಟೂತ್ ಬ್ರಶ್ ಅಥವಾ ಬೇರೆ ಯಾವುದಾದರೂ ಬ್ರೆಶ್ ಗೆ ಪೇಸ್ಟ್ ಹಚ್ಚಿ ಅದರಿಂದ ಬಕೆಟ್ ಅನ್ನು ಚೆನ್ನಾಗಿ ಉಜ್ಜಿ. ಪೂರ್ತಿಯಾಗಿ ಉಜ್ಜಿದ ಬಳಿಕ ಬಕೆಟ್ ಅನ್ನು ನೀರಿನಿಂದ ತೊಳೆಯಿರಿ. ಈಗ ನೋಡಿ ಬಕೆಟ್ ಹೊಸತರಂತೆ ಕಾಣುತ್ತದೆ. ಶುಭ್ರವಾಗಿ ಹೊಳೆಯುತ್ತದೆ.

ಇದಲ್ಲದೆ, ವೈಟ್ ವಿನೆಗರ್ ಸಹಾಯದಿಂದ ಕೂಡ ನಿಮ್ಮ ಮನೆಯ ಬಕೆಟ್ ಸ್ವಚ್ಚ ಮಾಡಬಹುದು. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಕೊಳಕು ಬಕೆಟ್ ಅನ್ನು ಸ್ವಚ್ಛಗೊಳಿಸಲು ಕೂಡ ಸಹಕಾರಿಯಾಗಿದೆ. ಇದಕ್ಕೆ ಸುಲಭ ವಿಧಾನಗಳು ಇಲ್ಲಿವೆ.

ವಿಧಾನ : ಒಂದು ಪಾತ್ರೆಯಲ್ಲಿ 2 ಕಪ್ ಬಿಳಿ ವಿನೆಗರ್ ತೆಗೆದುಕೊಳ್ಳಿ ಹಾಗೂ ಅದಕ್ಕೆ ಸ್ವಲ್ಪ ನೀರು ಸೇರಿಸಿ. ಈ ಮಿಶ್ರಣದಲ್ಲಿ ಸ್ಪಾಂಜ್ ಅನ್ನು ನೆನೆಸಿ ನಂತರ ಬಕೆಟ್ ಅನ್ನು ಉಜ್ಜಿ. ಕೊನೆಗೆ ಬಕೆಟ್ ಅನ್ನು ನೀರಿನಿಂದ ತೊಳೆಯಿರಿ. ಈಗ ಶುಭ್ರವಾದ ಬಕೆಟ್ ನೀವು ನೋಡಬಹುದು.

Leave A Reply

Your email address will not be published.