Samsung Galaxy F04 Smartphone: ಸ್ಯಾಮ್​ಸಂಗ್​​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ನ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ!

ಸ್ಮಾರ್ಟ್’ಯುಗದಲ್ಲಿ ಸ್ಮಾರ್ಟ್’ಫೋನ್ ಅನ್ನು ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುವ ಸಾಧನ. ಸ್ಮಾರ್ಟ್’ಫೋನ್ ಕಂಪನಿಗಳು ಒಂದಲ್ಲಾ ಒಂದು ಆಫರ್’ಗಳ ಮಳೆ ಸುರಿಸಿ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನವನ್ನು ಮಾಡುತ್ತಲೇ ಇದೆ. ಪ್ರಸ್ತುತ ಸ್ಮಾರ್ಟ್​ಫೋನ್ ವಲಯದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಂಪೆನಿಗಳಲ್ಲಿ ಒಂದಾದ ಸ್ಯಾಮ್​​ಸಂಗ್​ ವಿಶೇಷ ಆಫರೊಂದನ್ನು ನೀಡಿದೆ. ನೀವೆನಾದರೂ ಸ್ಮಾರ್ಟ್’ಫೋನ್ ಖರೀದಿಸುವುದಾದರೆ ಈ ಆಫರ್ ಅನ್ನು ಖಂಡಿತ ಮಿಸ್ ಮಾಡ್ಬೇಡಿ.

ಸ್ಯಾಮ್’ಸಂಗ್ ಕಂಪೆನಿ ತನ್ನದೇ ಆದ ಶೈಲಿಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಇದೀಗ ಜನವರಿ 12 ರಿಂದ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​04 ತನ್ನ ಫಸ್ಟ್​​ಸೇಲ್ (First Sale Offers)​ ಅನ್ನು ಫ್ಲಿಪ್​ಕಾರ್ಟ್​ ಮೂಲಕ ಪ್ರಾರಂಭಿಸಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ ಡ್ಯುಯಲ್​ ರಿಯರ್​ ಕ್ಯಾಮೆರಾ ಸೆಟಪ್​ ಅನ್ನು ಹೊಂದಿರಲಿದ್ದು, ಇನ್ನೂ ಹಲವಾರು ಫೀಚರ್ಸ್​ಗಳ ಜೊತೆಗೆ ಇದು ಬಿಡುಗಡೆಯಾಗಿದೆ. ಬಜೆಟ್​ ಬೆಲೆಯಲ್ಲಿ ಬಿಡುಗಡೆಯಾದ ಸ್ಯಾಮ್​ಸಂಗ್​ ಕಂಪೆನಿಯ ಸ್ಮಾರ್ಟ್​​ಫೋನ್​ ಇದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್​​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವಿಡಿಯೋ ಕಾಲ್​ಗಳಿಗಾಗಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು ಹಿಂಭಾಗದ ಕ್ಯಾಮೆರಾಗಳ ಜೊತೆಗೆ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ರಚಿಸಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್​​ಡಿ+ ಇನ್ಫಿನಿಟಿ ವಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1560 × 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ಹೈ ಡೆಫಿನಿಷನ್‌ ವ್ಯೂವಿಂಗ್‌ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಇದು ವಾಟರ್‌ಡ್ರಾಪ್ ನಾಚ್ ವಿನ್ಯಾಸ ಮತ್ತು ಸ್ಲಿಮ್ ಬೆಜೆಲ್‌ಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ. ಈ ಫೋನ್‌ ಜೇಡ್ ಪರ್ಪಲ್ ಮತ್ತು ಓಪಲ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಪಿ35 ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಬರಲಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 2 ವರ್ಷಗಳ ಓಎಸ್ ಅಪ್‌ಗ್ರೇಡ್ ಅನ್ನು ನೀಡುವುದಾಗಿ ಸ್ಯಾಮ್‌ಸಂಗ್‌ ಕಂಪನಿ ತನ್ನ ಗ್ರಾಹಕರಿಗೆ ಭರವಸೆಯನ್ನು ನೀಡಿದೆ. ಹಾಗೆಯೇ 4 ಜಿಬಿ RAM ಮತ್ತು 64ಜಿಬಿ ಇಂಟರ್ನಲ್​​ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ವರ್ಚುವಲ್ ರ್‍ಯಾಮ್ (RAM) ಸಹಾಯದಿಂದ 8 ಜಿಬಿ ರ್‍ಯಾಮ್(RAM) ವರೆಗೆ ವಿಸ್ತರಿಸುವ ಅವಕಾಶ ಕೂಡ ಇದೆ. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ 1ಟಿಬಿ ವರೆಗೆ ಸ್ಟೋರೇಜ್​ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಫಸ್ಟ್​ ಸೇಲ್​​ನಲ್ಲಿ ವಿಶೇಷ ಆಫರ್ಸ್​ ಲಭ್ಯವಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಫ್​04 ಸ್ಮಾರ್ಟ್‌ಫೋನ್ ಫಸ್ಟ್​​ಸೇಲ್​ ಆಫರ್​​ನಲ್ಲಿ ಕೇವಲ 7,499 ರೂಪಾಯಿ ಬೆಲೆಯಲ್ಲಿ ನಿಮ್ಮ ಕೈಗೆ ಸಿಗಲಿದೆ. ಆದರೆ ಈ ಲಾಂಚ್‌ ಆಫರ್‌ ಬೆಲೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಈ ಲಾಂಚ್‌ ಆಫರ್ ಮುಗಿದ ನಂತರ ಇದರ ಬೆಲೆ 9,499 ರೂಪಾಯಿ ಆಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಫಸ್ಟ್‌ ಸೇಲ್‌ನಲ್ಲಿ ಸಿಟಿ ಕ್ರೆಡಿಟ್ ಕಾರ್ಡ್ ಮತ್ತು ಇಎಮ್​ಐ ಮೂಲಕ ಫೋನ್‌ ಖರೀದಿಸೋರಿಗೆ 1,000 ರೂಪಾಯಿವರೆಗೆ ಹೆಚ್ಚುವರಿ ರಿಯಾಯಿತಿ ದೊರೆಯಲಿದೆ.

Leave A Reply

Your email address will not be published.