Philips Headphone: ಫಿಲಿಪ್ಸ್​ ಕಂಪೆನಿಯ ಹೊಸ ಹೆಡ್​​ಫೋನ್​ ಬಂತು ನೋಡಿ, ವೈಶಿಷ್ಟ್ಯಗಳ ಫುಲ್ ವಿವರ ಇಲ್ಲಿದೆ

ಇಂದಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ ಜನರ ಅಗತ್ಯ ಸಾಧನ ಎಂದರೆ ತಪ್ಪಾಗಲಾರದು. ಆದರೆ, ಇದೀಗ ಸ್ಮಾರ್ಟ್​ಫೋನ್​ಗಳ ಜೊತೆಗೆ ಹೆಡ್​ಫೋನ್​ಗಳನ್ನು ಕೂಡ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಡ್​ಫೋನ್ ಕಂಪನಿಗಳು ಮಾರುಕಟ್ಟೆಗೆ ಟೆಕ್ನಾಲಜಿಯನ್ನೊಳಗೊಂಡ ಕಡಿಮೆ ಬೆಲೆಯ ಹಾಗೂ ಉತ್ತಮ ಫೀಚರ್ಸ್’ನ ಹೆಡ್​ಫೋನ್ಸ್ ಅನ್ನು ಪರಿಚಯಿಸುತ್ತಿದೆ.

ಇದೀಗ ಫಿಲಿಪ್ಸ್​ ಕಂಪೆನಿಯು ಭಾರತದ ಮಾರುಕಟ್ಟೆಗೆ ಹೊಸ ಹೆಡ್​ಫೋನ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿ ನಿಂತಿದೆ. ಫಿಲಿಪ್ಸ್ TAH8506BK ಹೆಡ್‌ಫೋನ್‌ ಅತ್ಯಾಕರ್ಷಕ ಫೀಚರ್ಸ್‌ಗಳ ಮೂಲಕ ತನ್ನ ಗ್ರಾಹಕರ ಗಮನಸೆಳೆಯುವಲ್ಲಿ ಎರಡು ಮಾತಿಲ್ಲ. ಈ ಹೊಸ ಹೆಡ್‌ಫೋನ್‌ ಎಎನ್​​ಸಿ ಪ್ರೋ, ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಹೆಡ್​ಫೋನ್​ಗಳು ಬಿಡುಗಡೆಯಾಗಲಿದ್ದು, ಇದರ ಫೀಚರ್ಸ್​, ಬೆಲೆಯ ಬಗ್ಗೆ ಬಿಡುಗಡೆಯ ಮುಂಚೆನೇ ಮಾಹಿತಿಯು ಸೋರಿಕೆಯಾಗಿದೆ. ಇದರ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ ನೋಡಿ.

ಫಿಲಿಪ್ಸ್​ ಕಂಪೆನಿಯ ಫಿಲಿಪ್ಸ್​ TAH8506BK ಎಂಬ ಹೆಡ್​​ಫೋನ್ ಭಾರೀ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಫಿಲಿಪ್ಸ್​ ಕಂಪೆನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಗ್ಯಾಜೆಟ್ಸ್​​ಗಳನ್ನು, ಸೌಂಡ್​ಬಾರ್​​ಗಳನ್ನು ಬಿಡುಗಡೆ ಮಾಡಿದೆ. ಇದು ಆಂಬಿಯೆಂಟ್ ಮೋಡ್ ಬಳಕೆದಾರರಿಗಾಗಿ ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ನೀಡಲಿದೆ. ಇನ್ನು ಈ ಹೆಡ್‌ಫೋನ್‌ಗಳು 40mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದ್ದು, ಹೈ-ರೆಸ್ ಆಡಿಯೋಗೆ ಬೆಂಬಲವನ್ನು ನೀಡಲಿದೆ. ಈ ಹೆಡ್‌ಫೋನ್‌ನಲ್ಲಿ ಬಾಸ್, ವಾಯ್ಸ್‌, ಪವರ್‌ ಮತ್ತು ಟ್ರಾವೆಲ್‌ ಗಳೆಂಬ 4 EQ ಸ್ಟೆಪ್ಸ್‌ಗಳನ್ನು ಪ್ರಿಸೆಟ್‌ ಮಾಡಲಾಗಿದೆ. ಈ ಮೋಡ್‌ಗಳನ್ನು ಫಿಲಿಪ್ಸ್ ಹೆಡ್‌ಫೋನ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಕಸ್ಟಮೈಸ್ ಮಾಡಬಹುದಾಗಿದೆ.

ಬ್ಯಾಟರಿ ಫೀಚರ್ಸ್​:- ಈ ಹೆಡ್‌ಫೋನ್‌ ವೇಗದ ಚಾರ್ಜಿಂಗ್‌ಸಾಮರ್ಥ್ಯವನ್ನು ಸಹ ಹೊಂದಿದೆ. ಆದ್ದರಿಂದ ಈ ಹೆಡ್‌ಫೋನ್‌ ಅನ್ನು ನೀವು ಕೇವಲ 15 ನಿಮಿಷಗಳ ಕಾಲ ಚಾರ್ಜ್‌ ಮಾಡಿದರೆ 8 ಗಂಟೆಗಳವರೆಗಿನ ಪ್ಲೇಟೈಮ್ ಅವಕಾಶವನ್ನು ನೀಡುತ್ತದೆ. ಈ ಡಿವೈಸ್‌ ಅನ್ನು ಒಮ್ಮೆ ಫುಲ್​ ಚಾರ್ಜ್ ಮಾಡಿದ್ರೆ 60 ಗಂಟೆಗಳವರೆಗಿನ ಪ್ಲೇಬ್ಯಾಕ್ ಟೈಂ ನೀಡಲಿದೆ. ಇದು ಎಎನ್​​ಸಿ ಇಲ್ಲದೆ ಆಕ್ಟಿವ್‌ ಮಾಡಿದರೆ 45 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

ಕನೆಕ್ಟಿವಿಟಿ ಫೀಚರ್:- ಈ ಹೆಡ್‌ಫೋನ್‌ ಎಎನ್​​ಸಿ ಫೀಚರ್ಸ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಹೆಡ್‌ಫೋನ್‌ ಬ್ಲೂಟೂತ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಕೂಡ ಹೊಂದಿದ್ದು, ಬಳಕೆದಾರರಿಗೆ ಎರಡು ಡಿವೈಸ್‌ಗಳಿಗೆ ಏಕಕಾಲದಲ್ಲಿ ಕನೆಕ್ಟ್​ ಮಾಡವ ಅವಕಾಶ ಮಾಡಿಕೊಡುತ್ತದೆ.

ಫಿಲಿಪ್ಸ್‌ TAH8506BK ಹೆಡ್‌ಫೋನ್‌ ಭಾರತದಲ್ಲಿ 10,999 ರೂಪಾಯಿ ಬೆಲೆಯನ್ನು ಹೊಂದಿದೆ. ಇದೀಗ ಈ ಹೆಡ್​​ಫೋನ್​ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶವಾಗಲಿದ್ದು, ಪ್ರಮುಖ ಇಕಾಮರ್ಸ್​​ ವೆಬ್​ಸೈಟ್​ಗಳಲ್ಲಿ ಮತ್ತು ಆಫ್​ಲೈನ್​ ಮಾರುಕಟ್ಟೆಗಳಲ್ಲಿ ಖರೀದಿಸಲು ಅವಕಾಶ ಸಿಗಲಿದೆ.

ಇತ್ತೀಚೆಗೆ ಫಿಲಿಪ್ಸ್​ ಕಂಪೆನಿಯು ಮಾರುಕಟ್ಟೆಗೆ ತನ್ನ ಬ್ರಾಂಡ್​ನ ಅಡಿಯಲ್ಲಿ ಎರಡು ಸೌಂಡ್​ಬಾರ್​​ಗಳನ್ನು ಬಿಡುಗಡೆ ಮಾಡಿದೆ. ಫಿಲಿಪ್ಸ್‌ TAB8947 3.1.2 CH ಸೌಂಡ್​ಬಾರ್​ ಮತ್ತು ಫಿಲಿಪ್ಸ್ TAB7807 3.1 CH.

​ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್‌:- ಈ ಸೌಂಡ್ ಬಾರ್ 8 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ ಅನ್ನು ಹೊಂದಿದೆ. ಇದು 3.1.2 ಚಾನೆಲ್‌ಗಳನ್ನು ಮತ್ತು 8-ಇಂಚಿನ ಸಬ್ ವೂಫರ್ ಅನ್ನು ಹೊಂದಿರಲಿದೆ. ಇನ್ನು ಈ ಸೌಂಡ್‌ಬಾರ್‌ ಕ್ಲಿಯರ್​​ ಸೌಂಡ್‌ ಮಾತ್ರವಲ್ಲದೆ ಹೆಚ್ಚಿನ ಬಾಸ್‌ಅನ್ನು ಕೂಡ ಹೊಂದಿರಲಿದೆ.

ಫಿಲಿಪ್ಸ್ TAB7807 3.1 CH.ಸೌಂಡ್‌ಬಾರ್‌:- ಈ ಸೌಂಡ್ ಬಾರ್ ಕೂಡ 3.1-ಚಾನೆಲ್ ಅನ್ನು ಹೊಂದಿದೆ. ಆದರೆ ಇದು 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದರಲ್ಲಿ ಸಂಪೂರ್ಣ ಸಿಸ್ಟಮ್‌ಗೆ ವಯರ್‌ಲೆಸ್ ಮೂಲಕ ಕನೆಕ್ಟ್​ ಮಾಡುವ 8-ಇಂಚಿನ ಸಬ್ ವೂಫರ್ ಅನ್ನು ನೀಡಲಾಗಿದೆ. ಈ ಫಿಲಿಪ್ಸ್ ಸೌಂಡ್‌ಬಾರ್‌ನ ಎರಡೂ ತುದಿಯಲ್ಲಿ ಎರಡು ಹೆಚ್ಚುವರಿ ಸ್ಪೀಕರ್‌ಗಳನ್ನು ನೀಡಲಾಗಿದೆ.

Leave A Reply

Your email address will not be published.