Philips Headphone: ಫಿಲಿಪ್ಸ್ ಕಂಪೆನಿಯ ಹೊಸ ಹೆಡ್‌ಫೋನ್ ಬಂತು ನೋಡಿ, ವೈಶಿಷ್ಟ್ಯಗಳ ಫುಲ್ ವಿವರ ಇಲ್ಲಿದೆ
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಜನರ ಅಗತ್ಯ ಸಾಧನ ಎಂದರೆ ತಪ್ಪಾಗಲಾರದು. ಆದರೆ, ಇದೀಗ ಸ್ಮಾರ್ಟ್ಫೋನ್ಗಳ ಜೊತೆಗೆ ಹೆಡ್ಫೋನ್ಗಳನ್ನು ಕೂಡ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೆಡ್‌ಫೋನ್ ಕಂಪನಿಗಳು ಮಾರುಕಟ್ಟೆಗೆ ಟೆಕ್ನಾಲಜಿಯನ್ನೊಳಗೊಂಡ ಕಡಿಮೆ ಬೆಲೆಯ ಹಾಗೂ ಉತ್ತಮ ಫೀಚರ್ಸ್’ನ ಹೆಡ್ಫೋನ್ಸ್ ಅನ್ನು ಪರಿಚಯಿಸುತ್ತಿದೆ.
ಇದೀಗ ಫಿಲಿಪ್ಸ್ ಕಂಪೆನಿಯು ಭಾರತದ ಮಾರುಕಟ್ಟೆಗೆ ಹೊಸ ಹೆಡ್ಫೋನ್ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿ ನಿಂತಿದೆ. ಫಿಲಿಪ್ಸ್ TAH8506BK ಹೆಡ್‌ಫೋನ್ ಅತ್ಯಾಕರ್ಷಕ ಫೀಚರ್ಸ್‌ಗಳ ಮೂಲಕ ತನ್ನ ಗ್ರಾಹಕರ ಗಮನಸೆಳೆಯುವಲ್ಲಿ ಎರಡು ಮಾತಿಲ್ಲ. ಈ ಹೊಸ ಹೆಡ್‌ಫೋನ್ ಎಎನ್ಸಿ ಪ್ರೋ, ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಹೆಡ್‌ಫೋನ್‌ಗಳು ಬಿಡುಗಡೆಯಾಗಲಿದ್ದು, ಇದರ ಫೀಚರ್ಸ್, ಬೆಲೆಯ ಬಗ್ಗೆ ಬಿಡುಗಡೆಯ ಮುಂಚೆನೇ ಮಾಹಿತಿಯು ಸೋರಿಕೆಯಾಗಿದೆ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ಫಿಲಿಪ್ಸ್ ಕಂಪೆನಿಯ ಫಿಲಿಪ್ಸ್ TAH8506BK ಎಂಬ ಹೆಡ್‌ಫೋನ್ ಭಾರೀ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಫಿಲಿಪ್ಸ್ ಕಂಪೆನಿ ತನ್ನ ಬ್ರಾಂಡ್ನ ಅಡಿಯಲ್ಲಿ ಗ್ಯಾಜೆಟ್ಸ್ಗಳನ್ನು, ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿದೆ. ಇದು ಆಂಬಿಯೆಂಟ್ ಮೋಡ್ ಬಳಕೆದಾರರಿಗಾಗಿ ಬ್ಯಾಕ್‌ಗ್ರೌಂಡ್ ಸೌಂಡ್ ಅನ್ನು ನೀಡಲಿದೆ. ಇನ್ನು ಈ ಹೆಡ್‌ಫೋನ್‌ಗಳು 40mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದ್ದು, ಹೈ-ರೆಸ್ ಆಡಿಯೋಗೆ ಬೆಂಬಲವನ್ನು ನೀಡಲಿದೆ. ಈ ಹೆಡ್‌ಫೋನ್‌ನಲ್ಲಿ ಬಾಸ್, ವಾಯ್ಸ್, ಪವರ್ ಮತ್ತು ಟ್ರಾವೆಲ್ ಗಳೆಂಬ 4 EQ ಸ್ಟೆಪ್ಸ್‌ಗಳನ್ನು ಪ್ರಿಸೆಟ್ ಮಾಡಲಾಗಿದೆ. ಈ ಮೋಡ್‌ಗಳನ್ನು ಫಿಲಿಪ್ಸ್ ಹೆಡ್‌ಫೋನ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಕಸ್ಟಮೈಸ್ ಮಾಡಬಹುದಾಗಿದೆ.
ಬ್ಯಾಟರಿ ಫೀಚರ್ಸ್:- ಈ ಹೆಡ್‌ಫೋನ್ ವೇಗದ ಚಾರ್ಜಿಂಗ್‌ಸಾಮರ್ಥ್ಯವನ್ನು ಸಹ ಹೊಂದಿದೆ. ಆದ್ದರಿಂದ ಈ ಹೆಡ್‌ಫೋನ್ ಅನ್ನು ನೀವು ಕೇವಲ 15 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 8 ಗಂಟೆಗಳವರೆಗಿನ ಪ್ಲೇಟೈಮ್ ಅವಕಾಶವನ್ನು ನೀಡುತ್ತದೆ. ಈ ಡಿವೈಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 60 ಗಂಟೆಗಳವರೆಗಿನ ಪ್ಲೇಬ್ಯಾಕ್ ಟೈಂ ನೀಡಲಿದೆ. ಇದು ಎಎನ್ಸಿ ಇಲ್ಲದೆ ಆಕ್ಟಿವ್ ಮಾಡಿದರೆ 45 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.
ಕನೆಕ್ಟಿವಿಟಿ ಫೀಚರ್:- ಈ ಹೆಡ್‌ಫೋನ್ ಎಎನ್ಸಿ ಫೀಚರ್ಸ್ ಅನ್ನು ಒಳಗೊಂಡಿದೆ. ಜೊತೆಗೆ ಈ ಹೆಡ್‌ಫೋನ್ ಬ್ಲೂಟೂತ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಫೀಚರ್ಸ್ ಅನ್ನು ಕೂಡ ಹೊಂದಿದ್ದು, ಬಳಕೆದಾರರಿಗೆ ಎರಡು ಡಿವೈಸ್‌ಗಳಿಗೆ ಏಕಕಾಲದಲ್ಲಿ ಕನೆಕ್ಟ್ ಮಾಡವ ಅವಕಾಶ ಮಾಡಿಕೊಡುತ್ತದೆ.
ಫಿಲಿಪ್ಸ್ TAH8506BK ಹೆಡ್‌ಫೋನ್ ಭಾರತದಲ್ಲಿ 10,999 ರೂಪಾಯಿ ಬೆಲೆಯನ್ನು ಹೊಂದಿದೆ. ಇದೀಗ ಈ ಹೆಡ್‌ಫೋನ್ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪ್ರವೇಶವಾಗಲಿದ್ದು, ಪ್ರಮುಖ ಇಕಾಮರ್ಸ್ ವೆಬ್ಸೈಟ್ಗಳಲ್ಲಿ ಮತ್ತು ಆಫ್ಲೈನ್ ಮಾರುಕಟ್ಟೆಗಳಲ್ಲಿ ಖರೀದಿಸಲು ಅವಕಾಶ ಸಿಗಲಿದೆ.
ಇತ್ತೀಚೆಗೆ ಫಿಲಿಪ್ಸ್ ಕಂಪೆನಿಯು ಮಾರುಕಟ್ಟೆಗೆ ತನ್ನ ಬ್ರಾಂಡ್ನ ಅಡಿಯಲ್ಲಿ ಎರಡು ಸೌಂಡ್ಬಾರ್ಗಳನ್ನು ಬಿಡುಗಡೆ ಮಾಡಿದೆ. ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್ ಮತ್ತು ಫಿಲಿಪ್ಸ್ TAB7807 3.1 CH.
ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್:- ಈ ಸೌಂಡ್ ಬಾರ್ 8 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್ ಅನ್ನು ಹೊಂದಿದೆ. ಇದು 3.1.2 ಚಾನೆಲ್‌ಗಳನ್ನು ಮತ್ತು 8-ಇಂಚಿನ ಸಬ್ ವೂಫರ್ ಅನ್ನು ಹೊಂದಿರಲಿದೆ. ಇನ್ನು ಈ ಸೌಂಡ್‌ಬಾರ್ ಕ್ಲಿಯರ್ ಸೌಂಡ್ ಮಾತ್ರವಲ್ಲದೆ ಹೆಚ್ಚಿನ ಬಾಸ್‌ಅನ್ನು ಕೂಡ ಹೊಂದಿರಲಿದೆ.
ಫಿಲಿಪ್ಸ್ TAB7807 3.1 CH.ಸೌಂಡ್‌ಬಾರ್:- ಈ ಸೌಂಡ್ ಬಾರ್ ಕೂಡ 3.1-ಚಾನೆಲ್ ಅನ್ನು ಹೊಂದಿದೆ. ಆದರೆ ಇದು 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದರಲ್ಲಿ ಸಂಪೂರ್ಣ ಸಿಸ್ಟಮ್‌ಗೆ ವಯರ್‌ಲೆಸ್ ಮೂಲಕ ಕನೆಕ್ಟ್ ಮಾಡುವ 8-ಇಂಚಿನ ಸಬ್ ವೂಫರ್ ಅನ್ನು ನೀಡಲಾಗಿದೆ. ಈ ಫಿಲಿಪ್ಸ್ ಸೌಂಡ್‌ಬಾರ್‌ನ ಎರಡೂ ತುದಿಯಲ್ಲಿ ಎರಡು ಹೆಚ್ಚುವರಿ ಸ್ಪೀಕರ್‌ಗಳನ್ನು ನೀಡಲಾಗಿದೆ.