AtherStack5.0: ಎಥರ್ 450ಎಕ್ಸ್ ಮತ್ತು 450 ಪ್ಲಸ್ ಹೊಸ ಹೊಳಪು, ಬದಲಾವಣೆಯೊಂದಿಗೆ ನಿಮ್ಮ ಮುಂದೆ

ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಇದೀಗ ಭಾರತದ ದ್ವಿಚಕ್ರ ವಾಹನ ತಯಾರಕರಾದ ಎಥರ್ ಎನರ್ಜಿ ಕಂಪನಿಯು ತನ್ನ ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಮತ್ತಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ

ಎಥರ್ ಎನರ್ಜಿ ಕಂಪನಿಯು 450ಎಕ್ಸ್ ಮತ್ತು 450 ಪ್ಲಸ್ ಆವೃತ್ತಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ಹೊಸ ಇವಿ ಸ್ಕೂಟರ್ ಮಾದರಿಗಳಿಗಾಗಿ 5.0 ನವೀಕರಣ ಪರಿಚಯಿಸಿದೆ.

ಸದ್ಯ 450ಎಕ್ಸ್ ಮತ್ತು 450 ಪ್ಲಸ್ ಮೂರನೇ ತಲೆಮಾರಿನ ಆವೃತ್ತಿಗಳಲ್ಲಿ ಎಥರ್ ಕಂಪನಿಯು ಆಟೋ ಹೋಲ್ಡ್, ಉನ್ನತೀಕರಿಸಿದ ಗೂಗಲ್ ಮ್ಯಾಪ್ ಮತ್ತು ಲೈವ್ ಟ್ರಾಫಿಕ್, ರೈಡ್ ಮೋಡ್ ಗಳಿಗೆ ಅನುಗುಣವಾಗಿ ಬದಲಾಗುವ ಬ್ಯಾಟರಿ ಮಾಹಿತಿ ಲಭ್ಯತೆ ಪ್ರಮುಖ ಆಗಿದೆ.

ವಿಶೇಷತೆಗಳು :

  • ಎಥರ್ ಎನರ್ಜಿ ಕಂಪನಿಯು ಇವಿ ಸ್ಕೂಟರ್ ಗಳಿಗೆ ಈಗಾಗಲೇ ನೀಡಲಾಗುತ್ತಿರುವ ಮೂರು ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆಗೆ ಹೆಚ್ಚುವರಿ ಎರಡು ವರ್ಷಗಳ ವಿಸ್ತರಿತ ವಾರಂಟಿ ಪರಿಚಯಿಸಿದೆ. ಮೂರು ವರ್ಷಗಳ ನಂತರ ಐದು ವರ್ಷಗಳಿಗೆ ಬ್ಯಾಟರಿ ವಾರಂಟಿ ವಿಸ್ತರಿಸುವ ಗ್ರಾಹಕರು ರೂ. 6,999 ಪಾವತಿ ಮಾಡಬೇಕಾಗುತ್ತದೆ. ಇದು ನಿಮ್ಮ ಇವಿ ಸ್ಕೂಟರಿಗೆ ಗರಿಷ್ಠ ಸುರಕ್ಷತೆ ನೀಡಲಿದ್ದು, 5 ವರ್ಷಗಳ ಕೊನೆಯಲ್ಲಿ ಬ್ಯಾಟರಿಗೆ ಕನಿಷ್ಠ ಶೇ. 70 ರಷ್ಟು ಗುಣಮಟ್ಟವನ್ನು ಖಾತರಿಪಡಿಸುತ್ತದೆ.
  • ಹೊಸ ಎಥರ್ 450ಎಕ್ಸ್ ಮತ್ತು 450 ಪ್ಲಸ್ ಸ್ಕೂಟರ್ ಮಾದರಿಗಳು ನಮ್ಮ ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ. 1,35,452 ರಿಂದ ರೂ. 1,58,462 ಬೆಲೆ ಹೊಂದಿದ್ದು, ಇದರಲ್ಲಿ 3.7 kWh ಬ್ಯಾಟರಿ ಪ್ಯಾಕ್ ಜೋಡಣೆಯೊಂದಿಗೆ 450 ಪ್ಲಸ್ ಪ್ರತಿ ಚಾರ್ಜ್ ಗೆ 85 ಕಿ.ಮೀ ಮೈಲೇಜ್ ನೀಡಿದರೆ 450ಎಕ್ಸ್ ಪ್ರತಿ ಚಾರ್ಜ್ ಗೆ 105 ಕಿ.ಮೀ ಮೈಲೇಜ್ ನೀಡುತ್ತದೆ.

ಇನ್ನು ಹೊಸ ಇವಿ ಸ್ಕೂಟರ್ ಮಾದರಿಗಳೊಂದಿಗೆ ಎಥರ್ ಕಂಪನಿಯ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಮಾರಾಟ ದಾಖಲೆಯೊಂದಿಗೆ ಕಂಪನಿಯು ಹೊಸೂರಿನಲ್ಲಿರುವ ತನ್ನ ಇವಿ ಸ್ಕೂಟರ್ ಉತ್ಪಾದನಾ ಘಟಕವನ್ನು ವಿಸ್ತರಿಸುತ್ತಿದೆ. ಬೇಡಿಕೆ ತಕ್ಕಂತೆ ಮಾರಾಟ ಮಳಿಗೆಗಳನ್ನು ಕೂಡಾ ಹೆಚ್ಚಿಸುತ್ತಿದ್ದು, ಸದ್ಯ ಕರ್ನಾಟಕದಲ್ಲಿ ನಮ್ಮ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಮಾರಾಟ ಮಳಿಗೆ ಹೊಂದಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ಆರಂಭಿಸಲಿದೆ ಎಂದು ಮಾಹಿತಿ ನೀಡಲಾಗಿದೆ.

ನಿಮಗೆ ಹೊಸ ಇವಿ ಸ್ಕೂಟರ್ ಗಳಲ್ಲಿ ನಾಲ್ಕು ಹೊಸ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಕಾಸ್ಮಿಕ್ ಬ್ಲ್ಯಾಕ್, ಸಾಲ್ಟ್ ಗ್ರೀನ್, ಟ್ರೂ ರೆಡ್ ಮತ್ತು ಲೂನಾರ್ ಗ್ರೇ ಬಣ್ಣಗಳ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Leave A Reply

Your email address will not be published.