ಮೂಢನಂಬಿಕೆ ಬೇಡ, ನಂಬಿಕೆ ಇರಲಿ : ದೈವದ ಕುರಿತು ನಟ ಕಿಶೋರ್ ಹೇಳಿಕೆ
ಇತ್ತೀಚಿಗೆ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ದೈವದ ಕುರಿತು ಅವಹೇಳನಕಾರಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ರಿಷಬ್ ಶೆಟ್ಟಿ ಅವರ ನಟನೆಯನ್ನು ಅನುಕರಣೆ ಮಾಡಿ ದೈವವನ್ನು ಅವಹೇಳನ ಮಾಡಲಾಗುತ್ತಿದ್ದು, ಇದರಿಂದ ದೈವರಾಧಕರು ಮುನಿಸಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ಕಾಂತಾರ ಸಿನಿಮಾದ ಹಾಡು ಎಷ್ಟು ಸಂಚಲನ ಮೂಡಿಸಿತ್ತೋ ಅಷ್ಟೆ ಮಟ್ಟಿಗೆ ದೈವದ ಕೂಗು ಕೂಡ ದೇಶದಾದ್ಯಂತ ತನ್ನದೇ (Kantara Viral) ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಒಂದು ಕೂಗು ಸಿನಿಮಾ ರಿಲೀಸ್ ಆದ ದಿನದಿಂದಲೂ ಹೆಚ್ಚು ವೈಬ್ ಕ್ರಿಯೆಟ್ ಮಾಡಿದ್ದು ಸುಳ್ಳಲ್ಲ. ಸಿನಿಮಾ ಬಿಡುಗಡೆಯಾದ ಕೂಡಲೇ, ದೈವದ ಕೂಗನ್ನು ಎಲ್ಲರೂ ಕೂಗಬೇಡಿ, ಕೂಗಿ ಅವಮಾನಿಸಬೇಡಿ ಎಂದು ರಿಷಬ್ (Rishab Shetty) ಶೆಟ್ಟಿ ಮನವಿ ಕೂಡ ಮಾಡಿದ್ದರು. ಆದರೂ ಕೂಡ ದೈವದ ಕೂಗು ಅನುಕರಣೆ ಮಾಡಿದ ಬೆನ್ನಲ್ಲೇ, ಕಾಂತಾರ ದೈವ ಅವಮಾನಿಸಿದ ಯುವಕ ರಕ್ತಕಾರಿ ಸತ್ತ ಎಂಬ ವಿಡಿಯೋ ವೈರಲ್ ಆಗಿ ಎಲ್ಲೆಡೆ ಸಂಚಲನ ಮೂಡಿಸಿದೆ.
ಸದ್ಯ ಈ ಬಗ್ಗೆ ಮಾತನಾಡಿರುವ ಕಿಶೋರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಕಾಂತಾರ ದೈವ ಅವಮಾನಿಸಿದ ಯುವಕ ರಕ್ತಕಾರಿ ಸತ್ತ ಎನ್ನುವ ರೀತಿ ಬಿಂಬಿಸುವ ವೀಡಿಯೋ ವೈರಲ್ ಆಗಿದೆ. ಈ ಕುರಿತು ಮಾತನಾಡಿರುವ ಕಿಶೋರ್ ಅವರು, ‘ನಂಬಿಕೆ ಇರಲಿ ಮೂಢನಂಬಿಕೆ ಬೇಡ’ ಎಂಬ ಸಲಹೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.
‘ಕೊಲ್ಲುವ ದೈವವು ಆ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸಲು ಸಾಧ್ಯವಿಲ್ಲವೇ? ಕಾಂತಾರ ಸಿನಿಮಾದ ಭಾಗವಾಗಿ ಈ ರೀತಿ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಜವಾಬ್ದಾರಿಯಾಗಿದೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಎಂದು ಹೇಳಿದ್ದು, ಸಿನಿಮಾವಾಗಲಿ ಪುರಾಣವಾಗಲಿ’ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶದ ಪೂರೈಕೆಗೆ ದೈವವೋ, ದೆವ್ವವೋ ಒಂದು ಸಾಧನವನ್ನು ಬಳಕೆ ಮಾಡಿಕೊಳ್ಳಲಾಗಿದೆ. .
‘ದೈವವೋ ದೆವ್ವವೋ ಅದು ಅವರವರ ನಂಬಿಕೆಗೆ ಬಿಟ್ಟದ್ದು. ನಂಬಿದರೆ ಉಂಟು ನಂಬದಿದ್ದರೆ ಇಲ್ಲ ಎಂದಿದ್ದು ಅಲ್ಲದೆ, ಹಾಗೆಂದ ಮಾತ್ರಕ್ಕೆ ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವುದು ಕೂಡ ಸರಿಯಲ್ಲ ಎಂದಿದ್ದಾರೆ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನು ಇದೆ. ಪ್ರತಿಯೊಬ್ಬರ ನಂಬಿಕೆ ಅವರಿಗೆ ಬಿಟ್ಟದ್ದು ಆದರೆ ನಂಬಿಕೆ ಇರಲಿ ಮೂಢನಂಬಿಕೆ ಬೇಡ ಎಂಬ ಕಿವಿ ಮಾತು ನೀಡಿದ್ದು, ದೈವದ ಹೆಸರಲ್ಲಿ ಮೂಢನಂಬಿಕೆ ದ್ವೇಷ ಪಸರಿಸುವುದು ಬೇಡ ಎಂದು ಕಿಶೋರ್ ಹೇಳಿದ್ದಾರೆ.
‘ಕಾಂತಾರ’ (Kantara Movie) ಸಿನಿಮಾದಿಂದ ನಟ ಕಿಶೋರ್ ಅವರ ಪಾತ್ರ ಜನರು ಗುರುತಿಸುವಂತೆ ಆಗಿದೆ.ಈ ಚಿತ್ರದಿಂದ ಎಲ್ಲೆಡೆ ಪ್ರಖ್ಯಾತಿ ಕೂಡ ಪಡೆದುಕೊಂಡಿದ್ದು, ಪರಭಾಷೆಯಿಂದ ಬರುತ್ತಿದ್ದ ಆಫರ್ಗಳ ಸಂಖ್ಯೆ ಏರಿಕೆ ಕಂಡಿದೆ. ನಟ ಕಿಶೋರ್ (Actor Kishore) ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದು ಕೆಲ ವಿಚಾರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋ ಕುರಿತಂತೆ ಕಿಶೋರ್ ಉತ್ತಮ ಸಂದೇಶ ನೀಡುವ ಸದುದ್ದೇಶ ದಿಂದ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.