BBK9 : ಖಡಕ್ ಮಾತಿನ, ನೇರ ನುಡಿಯ ರೂಪೇಶ್ ರಾಜಣ್ಣ ದೊಡ್ಮನೆಯಿಂದ ಔಟ್!!!

Share the Article

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ‘ ಮನೆಯ ಆಟಗಳು ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿದೆ. ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದ್ದು, ಗೆಲುವು ಯಾರ ಪಾಲಾಗುತ್ತದೆ ಎಂಬ ಕುತೂಹಲವನ್ನು ಸೃಷ್ಟಿಸಿದೆ.

ದಿವ್ಯಾ ಉರುಡುಗ ಎಲಿಮಿನೇಷನ್ ನಂತರ, ಇದೀಗ ರೂಪೇಶ್ ರಾಜಣ್ಣ ಆಟಕ್ಕೆ ಬ್ರೇಕ್ ಬಿದ್ದಿದೆ. ಟಾಸ್ಕ್, ಮನರಂಜನೆಯ ಮೂಲಕ ಕನ್ನಡಿಗರ ಮನೆಗೆದ್ದಿದ್ದ, ಖಡಕ್ ಮಾತಿನ, ನೇರ ನುಡಿಯ ರೂಪೇಶ್ ರಾಜಣ್ಣ ದೊಡ್ಮನೆಯಿಂದ ಹೊರಬಂದಿದ್ದಾರೆ.

ಕನ್ನಡ ಪರ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ರೂಪೇಶ್ ರಾಜಣ್ಣ (Roopesh Rajanna) ನವೀನರ ಪೈಕಿ ಒಬ್ಬರಾಗಿ ಮನೆಗೆ ಕಾಲಿಟ್ಟಿದ್ದರು. ಇತರೆ ಸ್ಪರ್ಧಿಗಳಿಗೆ ಪೈಪೋಟಿ ಕೊಟ್ಟು ಟಾಪ್ 5 ಫೈನಲಿಸ್ಟ್‌ಗಳಲ್ಲಿ ಇವರು ಒಬ್ಬರಾಗಿದ್ದರು. ಇದೀಗ ರೂಪೇಶ್ ರಾಜಣ್ಣ ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ.

Leave A Reply