ಹಳೆ ಬೆಲ್ಲ ಹೊಸ ಬೆಲ್ಲಕ್ಕಿಂತ ಆರೋಗ್ಯಕ್ಕೆ ಬಹಳ ಉತ್ತಮ!

ಬೆಲ್ಲ ಎಂದೊಡನೆ ಸಿಹಿಯಾದ ರುಚಿ, ಹಬ್ಬದ ಸಂಭ್ರಮ ಕಣ್ಣ ಮುಂದೆ ಬರುತ್ತೆ. ನಮ್ಮಲ್ಲಿನ ಬಹುತೇಕ ಹಬ್ಬಗಳ ಅಡುಗೆಯಲ್ಲಿ ಬೆಲ್ಲಕ್ಕೆ ದೊಡ್ಡ ಸ್ಥಾನವಿದೆ. ಇಂಥ ಬೆಲ್ಲ ಆರೋಗ್ಯಕ್ಕೂ ಒಳ್ಳೆಯದು. ಆದರೆ ಸರಿಯಾದ ವಿಧಾನದಲ್ಲಿ ಸೇವಿಸಬೇಕಷ್ಟೇ. ಆಯುರ್ವೇದದಲ್ಲಿ ಬೆಲ್ಲಕ್ಕೆ ಔಷಧೀಯ ಮಹತ್ವ ನೀಡಲಾಗಿದೆ. ಇದು ಸಕ್ಕರೆಗೆ ಉತ್ತಮ ಮತ್ತು ಆರೋಗ್ಯಕರ ಪರ್ಯಾಯವಾಗಿದೆ.

ಬೆಲ್ಲದಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಬೆಲ್ಲದ ಸೇವನೆಯಿಂದ ದೇಹದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.ಇಂದು ನಾವು ಬೆಲ್ಲ ಸೇವನೆಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಅದರಲ್ಲೂ ಒಂದು ವರ್ಷ ಹಳೆಯ ಬೆಲ್ಲವನ್ನು ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಬೆಲ್ಲ ಒಂದು ಆರೋಗ್ಯಕರ ಆಹಾರವಾಗಿದೆ. ಇದು ಚಳಿಗಾಲದಲ್ಲಿ ರೋಗಗಳನ್ನು ತಡೆಯುತ್ತದೆ. ಈ ಬೆಲ್ಲ ನೈಸರ್ಗಿಕ ಸಿಹಿಯನ್ನು ಹೊಂದಿದೆ. ಇದಲ್ಲದೆ ಬೆಲ್ಲದಲ್ಲಿ ಕಬ್ಬಿಣ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ನ ಹೆಚ್ಚಿನ ಪ್ರಮಾಣದಲ್ಲಿ ಇದೆ. ಬಹುತೇಕರು ಹೊಸ ಬೆಲ್ಲಕ್ಕೆ ಆದ್ಯತೆ ನೀಡ್ತಾರೆ. ಮಾರುಕಟ್ಟೆಯಲ್ಲಿ ಹೊಸ ಬೆಲ್ಲ ಖರೀದಿ ಮಾಡ್ತಾರೆ. ಆದ್ರೆ ಆಯುರ್ವೇದ ತಜ್ಞರ ಪ್ರಕಾರ, ಹೊಸ ಬೆಲ್ಲಕ್ಕಿಂತ ಒಂದು ವರ್ಷ ಹಳೆ ಬೆಲ್ಲ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಹೊಂದಿದೆ ಅಂತಾರೆ!!

ಹೌದು, ಇದನ್ನು ತಿನ್ನುವುದರಿಂದ ಯಕೃತ್ತು ಮತ್ತು ಗುಲ್ಮದ ಕಾಯಿಲೆಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಇದು ಹೃದಯ ಮತ್ತು ವಾತ ದೋಷವನ್ನು ಸಮತೋಲನಗೊಳಿಸಲು ಒಳ್ಳೆಯದು. ಈ ಹಳೆ ಬೆಲ್ಲ ದೇಹದ ಚಾನಲ್‌ಗಳನ್ನು ನಿರ್ಬಂಧಿಸುವುದಿಲ್ಲ. ರಕ್ತವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸುತ್ತದೆ. ಆದರೆ ಹೊಸ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಹುಳುಗಳ ಸೋಂಕು ಉಂಟಾಗುತ್ತದೆ. ಕರುಳಿನ ಆರೋಗ್ಯ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ದೇಹದಲ್ಲಿರುವ ಕಫದ ಸಮತೋಲನ ಹದಗೆಡುತ್ತದೆ. ಇದರಿಂದಾಗಿ ಕೆಮ್ಮು ಮತ್ತು ಶೀತ ನಮ್ಮನ್ನು ಬಾಧಿಸಬಹುದು.

ಹಳೆ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಅದನ್ನು ಹೇಗೆ ಪತ್ತೆ ಮಾಡಬೇಕು ಎನ್ನುವವರು, ಹಳೆ ಬೆಲ್ಲದ ರುಚಿಯನ್ನು ನೀವು ನೋಡಬೇಕಾಗುತ್ತದೆ. ಹಳೆ ಬೆಲ್ಲ ಸ್ವಲ್ಪ ಉಪ್ಪು ರುಚಿಯನ್ನು ಹೊಂದಿದ್ದೂ, ಬೆಲ್ಲದ ಬಣ್ಣ ಗಾಢ ಬಣ್ಣದಿಂದ ಕೂಡಿರುತ್ತದೆ. ಬೆಲ್ಲದ ರುಚಿ ಹೆಚ್ಚು ಉಪ್ಪಿನಿಂದ ಕೂಡಿದ್ದರೆ ಅದು ಕಲಬೆರಿಕೆ ಬೆಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬಹುದು.

Leave A Reply

Your email address will not be published.