KPSC : 2017, 2020ನೇ ಸಾಲಿನ ಗ್ರೂಪ್ ಸಿ ಪರೀಕ್ಷೆ ಬರೆದವರ ಅಂಕಪಟ್ಟಿ ಪ್ರಕಟ!!
2017, 2020ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಗ್ರೂಪ್ ಸಿ ನಾನ್ ಟೆಕ್ನಿಕಲ್ (ಗ್ರಾಜುಯೇಟ್, ಗ್ರಾಜುಯೇಟ್ ಏತರ) ಹುದ್ದೆಗಳ ನೇಮಕಾತಿಗೆ ಕುರಿತಂತೆ,ಇದೀಗ ಸದರಿ ಹುದ್ದೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಅಂಕಪಟ್ಟಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು 2017, 2020ನೇ ಸಾಲಿನಲ್ಲಿ ವಿವಿಧ ಸಾಲಿನಲ್ಲಿ ಅಧಿಸೂಚಿಸಿದ್ದ ಗ್ರೂಪ್ ಸಿ ನಾನ್ ಟೆಕ್ನಿಕಲ್ (ಗ್ರಾಜುಯೇಟ್, ಗ್ರಾಜುಯೇಟ್ ಏತರ) ಹುದ್ದೆಗಳಿಗೆ ಸಂಬಂಧಿಸಿದಂತೆ, ಈ ಸದರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹುದ್ದೆಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ಇದೀಗ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅಂಕಗಳನ್ನು ವೀಕ್ಷಿಸಬಹುದು.
ಅಭ್ಯರ್ಥಿಗಳ ಅಂಕಪಟ್ಟಿಯಲ್ಲಿ ರಿಜಿಸ್ಟರ್ ನಂಬರ್, ಪೇಪರ್-1, ಪೇಪರ್-2 ಹಾಗೂ ಒಟ್ಟು ಅಂಕಗಳ ಮಾಹಿತಿಗಳನ್ನು ಬಿಡುಗಡೆ ಮಾಡಲಾಗಿದೆ.ದಿನಾಂಕ 25-11-2017 ಹಾಗೂ 31-07-2020 ರಂದು ಅಧಿಸೂಚಿಸಿದ್ದ, ಗ್ರಾಜುಯೇಟ್ ಲೆವೆಲ್ ಹಾಗೂ ನಾನ್ ಗ್ರಾಜುಯೇಟ್ ಲೆವೆಲ್ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಹರಾದ ಅಭ್ಯರ್ಥಿಗಳ ಅಂಕಗಳನ್ನೂ ಪ್ರಕಟ ಮಾಡಲಾಗಿದೆ. ಎರಡು ದಿನಾಂಕಗಳ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅಂಕಗಳನ್ನು, ಗ್ರಾಜುಯೇಟ್, ನಾನ್ ಗ್ರಾಜುಯೇಟ್ ಲೆವೆಲ್ ಎಂದು ಪ್ರತ್ಯೇಕವಾಗಿ ವಿಂಗಡನೆ ಮಾಡಿ ಬಿಡುಗಡೆ ಮಾಡಲಾಗಿದೆ.
ಅಂಕಪಟ್ಟಿ ಚೆಕ್ ಮಾಡುವುದು ಹೇಗೆ?
ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್ https://www.kpsc.kar.nic.in/ ಗೆ ಭೇಟಿ ನೀಡಬೇಕು. ಆ ಬಳಿಕ, ಓಪನ್ ಆದ ಕೆಪಿಎಸ್‌ಸಿ ಮುಖಪುಟದಲ್ಲಿ ‘ಅರ್ಜಿದಾರರ ಗಮನಕ್ಕೆ’ ಎಂದಿರುವ ಆಯ್ಕೆ ಕೆಳಗಡೆ ‘ಫಲಿತಾಂಶ’ ಎಂದಿರುವಲ್ಲಿ ಕ್ಲಿಕ್ ಮಾಡಬೇಕು.ಆಗ, ಕೆಪಿಎಸ್‌ಸಿ’ಯ ಮತ್ತೊಂದು ಪುಟ ತೆರೆಯುತ್ತದೆ. ಇಲ್ಲಿ ಅಭ್ಯರ್ಥಿಗಳು ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳಿಗೆ ಅರ್ಹತೆ ಪಡೆದವರು ತಮ್ಮ ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.