ನಟಿ ದೀಪಿಕಾ ನಂತರ ಈಗ ನಟಿ ಕಂಗನಾಗೂ ಕೇಸರಿ ಬಿಸಿ ತಟ್ಟುತ್ತಾ ? ಇಲ್ಲಿದೆ ನೋಡಿ ಫೋಟೋ

ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ವಿವಾದದ ಕಾವು ಏರಿರುವ ನಡುವೆಯೇ ಇದೀಗ ನಟಿ ಕಂಗನಾ ರಣಾವತ್ ಅವರಿಗೂ ಇದೇ ಭೀತಿ ಶುರುವಾಗಿದೆ. ನಟಿಯ ಲಾಕಪ್ ಶೋ ಪ್ರಮೋಷನ್ ಭಾಗವಾಗಿ ನಟಿ ಕೇಸರಿ ಮೇಲೆ ಬೂಟುಗಾಲಿಟ್ಟಿರುವ ಫೋಟೋ ಈಗ ವೈರಲ್ ಆಗಿ ಸಂಚಲನ ಮೂಡಿಸಿದೆ.

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಸಿನಿಮಾದ ಬೇಷರಂ ರಂಗ್ ಸಿನಿಮಾ ಕೇಸರಿ ವಿವಾದದ ಸುಳಿಯಲ್ಲಿ ನಲುಗುತ್ತಿದೆ. ಈಗ ನಟಿ ಕಂಗನಾ ರಣಾವತ್​​ಗೂ ಅದೇ ಭೀತಿ ಶುರುವಾದಂತೆ ಕಂಡುಬರುತ್ತಿದೆ.

ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿ ವಿಪರೀತ ಬೋಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಇದೆ ವೇಳೆ ಶಾರುಖ್ ಖಾನ್ ಹಸಿರು ಬಣ್ಣದ ಬಟ್ಟೆ ಧರಿಸಿದ ವಿಚಾರಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

ಈ ನಡುವೆ ನಟಿ ದೀಪಿಕಾ ಪಡುಕೋಣೆ ಡ್ರೆಸ್ಸಿಂಗ್ ವಿಷಯಕ್ಕೆ ಕೂಡ ಟ್ರೊಲ್ ಆಗಿದ್ದರು. ನಟಿಯ ಅವತಾರ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಲ್ಲದೆ ಭಾರೀ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇದೇ ಸಾಲಿಗೆ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಎಂಟ್ರಿಯಾಗುತ್ತಾ ಇದ್ದಾರಾ?? ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳಲ್ಲಿ ಮೂಡಿದೆ.

ಇದೀಗ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರ ವಿಷಯದಲ್ಲಿ ಕೂಡ ಚರ್ಚೆ ನಡೆಯುತ್ತಿದ್ದು, ನಟಿಯ ರಿಯಾಲಿಟಿ ಶೋ ಲಾಕಪ್ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ, ಕಂಗನಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಅವರ ರಿಯಾಲಿಟಿ ಶೋ ಕೂಡಾ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ರಾಜಕೀಯದ ಕಡೆಗೂ ಮುಖ ಮಾಡಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಂಗನಾ ಅವರು ನಡೆಸಿಕೊಡುವ ಲಾಕಪ್ ಎನ್ನುವ ರಿಯಾಲಿಟಿ ಶೋ ಪ್ರೋಮೋದಲ್ಲಿ ಅವರು ಕೇಸರಿ ಮೇಲೆ ಬೂಟುಕಾಲಿಟ್ಟಿರುವ ಫೊಟೋ ಒಂದು ವೈರಲ್ ಆಗಿದೆ. ಇದೀಗ ನಟಿ ಕೇಸರಿ ಬಟ್ಟೆಯ ಮೇಲೆ ಬೂಟುಕಾಲನ್ನು ಇಟ್ಟು ಭರ್ಜರಿ ಪೋಸ್ ಕೊಟ್ಟಿದ್ದಾರೆ.

ಆದರೆ ಕಂಗನಾ ಅವರನ್ನೂ ಎಲ್ಲೂ ಕೂಡ ಟ್ರೋಲ್ ಮಾಡಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಕೆಲ ನೆಟ್ಟಿಗರು ಕಂಗನಾ ಅವರನ್ನು ಟ್ರೋಲ್ ಮಾಡುತ್ತಿಲ್ಲವೇಕೆ?? ಎಂದು ಪ್ರಶ್ನಿಸಿ ಕಾಲೆಳೆಯುತ್ತಿದ್ದಾರೆ. ಇದೀಗ, ದೀಪಿಕಾ ಪಡುಕೋಣೆ ಅವರ ಬಳಿಕ, ಬಾಲಿವುಡ್ ಕ್ವೀನ್ ಕಂಗನಾ ಟ್ರೋಲ್ ಆಗುತ್ತಿದ್ದು ಈ ವಿವಾದದ ಕುರಿತಾಗಿ ನಟಿ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ.

Leave A Reply

Your email address will not be published.