ಕುಡಿತದ ಮತ್ತಿನಲ್ಲಿ ನಾಯಿ ಬಾಲ,ಕಿವಿ ಕತ್ತರಿಸಿ ಉಪ್ಪು ಸವರಿ ತಿಂದ ಕುಡುಕ !!!
ಕಂಠ ಪೂರ್ತಿ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!.. ಕುಡಿದ ಮತ್ತಿನಲ್ಲಿ ಮದ್ಯ ಪ್ರಿಯರು ಮಾಡುವ ಜಗಳ, ರಾದ್ದಂತ ಮಾಡಿಕೊಳ್ಳುವುದು ನೋಡಿರುತ್ತೇವೆ. ಕೆಲವೊಮ್ಮೆ ಕುಡಿದ ಅಮಲಿನಲ್ಲಿ ಅಪರಾಧ ಎಸಗಿ ಅಮಲು ಇಳಿದ ಮೇಲೆ ತಾನೂ ಮಾಡಿದ ತಪ್ಪಿಗೆ ಕೊರಗುವವರನ್ನು ಕೂಡ ನೋಡಿರಬಹುದು. ಆದರೆ, ಕುಡಿದ ಮತ್ತಿನಲ್ಲಿ ಏನು ಅರಿಯದ ಮುಗ್ಧ ಮೂಕ ಪ್ರಾಣಿಗಳ ಮೇಲೆ ಹಲ್ಲೆ ನಡೆಸಿರುವ ವಿಷಾದನೀಯ ಘಟನೆ ಬೆಳಕಿಗೆ ಬಂದಿದೆ.
ವ್ಯಕ್ತಿಯೋರ್ವ ಮುಗ್ದ ನಾಯಿಮರಿಗಳ ಕಿವಿ, ಬಾಲ ಕತ್ತರಿಸಿ, ಅದಕ್ಕೆ ಉಪ್ಪು ಸವರಿ ತಿನ್ನುತ್ತಾ ಮದ್ಯ ಸೇವಿಸಿರುವ ಘಟನೆ ಬರೇಲಿ ಜಿಲ್ಲೆಯ ಫರೀದ್ಪುರ ಪ್ರದೇಶದ ಎಸ್ಡಿಎಂ ಕಾಲೋನಿಯಲ್ಲಿ ವರದಿಯಾಗಿದೆ. ಎಣ್ಣೆ ಪ್ರಿಯರಿಗೆ ಬಾರ್ ಮುಂದೆ ಎಂಟ್ರಿ ಕೊಟ್ಟು ಹೊಟ್ಟೆಗೆ ಎಣ್ಣೆ ಇಳಿಸದೆ ಹೋದರೆ ದಿನವೇ ಪೂರ್ತಿಯಾಗದು.
ಪರಮಾತ್ಮ ಒಳ ಹೊಕ್ಕಂತೆ ಜಗತ್ತನ್ನೇ ಮರೆತು ಎರ್ರಾಬಿರ್ರಿ ರಸ್ತೆಯಲ್ಲಿ ನಶೆಯಲ್ಲಿ ಬಿದ್ದಿದ್ದರೆ, ಬಾಯಿಗೆ ಬಂದಂತೆ ಬೈಯುತ್ತಾ ಮನೆಯವರ ಮೇಲೆ ದಬ್ಬಾಳಿಕೆ ನಡೆಸುವುದನ್ನು ನಾವು ಕೇಳಿರುತ್ತೇವೆ. ಆದರೆ ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ನಂಚಿಕೊಳ್ಳಲು ನಾಯಿಮರಿಗಳ (Dog) ಬಾಲ ( Tail), ಕಿವಿ (Ear) ಕತ್ತರಿಸಿ ಅದಕ್ಕೆ ಉಪ್ಪು ಸವರಿ ತಿಂದು ಮದ್ಯ ಸೇವಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿದೆ.
ಕುಡಿಯುವ ಅಭ್ಯಾಸ ಇಟ್ಟುಕೊಂಡವರು ಸಾಮಾನ್ಯವಾಗಿ ನಂಚಿಕೊಳ್ಳಲು ಉಪ್ಪಿನ ಕಾಯಿ, ಚಿಪ್ಸ್, ಸೌತೆಕಾಯಿ, ಕ್ಯಾರಂಟ್, ಚಿಕನ್, ಮಟನ್, ಫಿಶ್ ಹೀಗೆ ತರಹೇವಾರಿ ತಿಂಡಿಗಳನ್ನು ನಂಚಿಕೊಳ್ಳುತ್ತಾರೆ. ಆದರೆ ವ್ಯಕ್ತಿಯೋರ್ವ ಮುಗ್ದ ನಾಯಿಮರಿಗಳ ಕಿವಿ, ಬಾಲ ಕತ್ತರಿಸಿ, ಅದಕ್ಕೆ ಉಪ್ಪು ಸವರಿ ತಿನ್ನುತ್ತಾ ಮದ್ಯ ಸೇವಿಸಿದ್ದು, ಬರೇಲಿ ಜಿಲ್ಲೆಯ ಫರೀದ್ಪುರ ಪ್ರದೇಶದ ಎಸ್ಡಿಎಂ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ.
ಈ ಕೃತ್ಯ ಎಸಗಿದ ಆರೋಪಿಯನ್ನು ಮುಖೇಶ್ ವಾಲ್ಮೀಕಿ ಎಂದು ಗುರುತಿಸಲಾಗಿದ್ದು, ಆರೋಪಿ ಮತ್ತು ಮುಖೇಶ್ ವಾಲ್ಮೀಕಿ ಎಂಬ ಇಬ್ಬರು ಕುಡಿದ ಮತ್ತಿನಲ್ಲಿದ್ದಾಗ ಆರೋಪಿ ಅಮಾನವೀಯ ಕೃತ್ಯವೆಸಗಿದ್ದಾನೆ.
ಇದೀಗ ಈ ಬಗ್ಗೆ ಪ್ರಾಣಿಗಳ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಸದಸ್ಯರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಇದರ ಜೊತೆಗೆ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ಚೌರಾಸಿಯಾ ಅವರು, ಈ ಸಂಬಂಧ ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ಪೊಲೀಸರು, ವ್ಯಕ್ತಿ ನಾಯಿ ಮರಿಗಳಲ್ಲಿ ಒಂದು ನಾಯಿ ಮರಿಯ ಕಿವಿ ಮತ್ತು ಇನ್ನೊಂದು ನಾಯಿ ಮರಿಯ ಬಾಲವನ್ನು ಕತ್ತರಿಸಿರುವ ಕುರಿತು ಮಾಹಿತಿ ನೀಡಿದ್ದು, ಇದರಿಂದ ಎರಡೂ ನಾಯಿ ಮರಿಗಳಿಗೂ ತೀವ್ರ ರಕ್ತಸ್ರಾವವಾಗಿದೆ . ನಾಯಿಮರಿ ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವುಗಳ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ .
ಮೂಕ ಪ್ರಾಣಿಗಳೆಂದ ಮಾತ್ರಕ್ಕೆ ಅವುಗಳ ಮೇಲೆ ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದ್ಧು ಅದನ್ನು ಕಿತ್ತುಕೊಳ್ಳುವ ನಾಯಿ ಮರಿಯನ್ನು ಮನೆಯ ಸದಸ್ಯನಂತೆ ಪ್ರೀತಿಸುವವರ ಮಧ್ಯೆ ಇಂತಹ ಕ್ರೂರ ಜನ, ಮುಗ್ದ ಪ್ರಾಣಿಗಳಿಗೆ ಚಿತ್ರ ಹಿಂಸೆ ನೀಡುತ್ತಿರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ರೀತಿ ದೌರ್ಜನ್ಯ ಪ್ರಕರಣದ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.