Bank Holidays 2023: ಹೊಸ ವರ್ಷ ಬ್ಯಾಂಕ್ ರಜಾ ದಿನಗಳೆಷ್ಟು ಗೊತ್ತಾ ? RBI ಬಿಡುಗಡೆಗೊಳಿಸಿದ ರಜಾ ದಿನ ಪಟ್ಟಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
RBI ಅಧಿಕೃತ ವೆಬ್‌ಸೈಟ್‌ನಲ್ಲಿ 2023 ರ ರಜಾದಿನಗಳನ್ನು ನವೀಕರಿಸಿದೆ. ಮುಂದಿನ ವರ್ಷ, ಕರ್ನಾಟಕದಲ್ಲಿ ಯಾವ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ ಎಂಬ ಮಾಹಿತಿ ತಿಳಿದಿರುವುದು ಅವಶ್ಯಕವಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಮುಗಿದು , ಹೊಸ ವರ್ಷ (New Year) ದ ಹೊಸ್ತಿಲಲ್ಲಿ ನಾವಿಂದು ಇದ್ದೇವೆ. ಹಳೆಯ ದುಃಖ ದುಮ್ಮಾನಗಳನ್ನು ಪಕ್ಕಕ್ಕಿರಿಸಿ, ಹೊಸ ಉತ್ಸಾಹದೊಂದಿಗೆ ಹೊಸ ಹೆಜ್ಜೆ ಇಡುತ್ತಾ ಹೊಸ ವರ್ಷಕ್ಕೆ ದಾಪುಗಲಿಡಬೇಕಾಗಿದೆ. 2023ರಲ್ಲಿ ಬ್ಯಾಂಕ್‌ಗಳ ರಜಾ (2023 Bank Holidays) ದಿನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್(RBI) RBI ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತಿ ವರ್ಷ ಮುಂಚಿತವಾಗಿ ರಜಾದಿನಗಳ ವಿವರಗಳನ್ನು ನವೀಕರಿಸುತ್ತದೆ. 2023 ರಲ್ಲಿ, ಆರ್‌ಬಿಐ ಯಾವ ದಿನಗಳು ಬ್ಯಾಂಕ್‌ಗಳಿಗೆ ರಜೆ ಎಂಬ ಮಾಹಿತಿ ಲಭ್ಯವಾಗಿದೆ.
RBI ಅಧಿಕೃತ ವೆಬ್‌ಸೈಟ್‌ನಲ್ಲಿ 2023 ರ ರಜಾದಿನಗಳನ್ನು ನವೀಕರಿಸಿದೆ. ಮುಂದಿನ ವರ್ಷ, ಕರ್ನಾಟಕದಲ್ಲಿ ಯಾವ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ:
2023 ರ ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿದೆ:
15-ಜನವರಿ- ಸಂಕ್ರಾಂತಿ-(ಭಾನುವಾರ)
26-ಜನವರಿ-ಗಣರಾಜ್ಯೋತ್ಸವ-( ಗುರುವಾರ)
18-ಫೆಬ್ರವರಿ-ಮಹಾ ಶಿವರಾತ್ರಿ- (ಶನಿವಾರ)
22-ಮಾರ್ಚ್- ಚಂದ್ರಮಾನ ಯುಗಾದಿ-( ಬುಧವಾರ)
01-ಏಪ್ರಿಲ್-ಬ್ಯಾಂಕ್‌ಗಳ ವಾರ್ಷಿಕ ಖಾತೆಗಳ ಮುಕ್ತಾಯ ದಿನ(ಶನಿವಾರ) 03-ಏಪ್ರಿಲ್-ಮಹಾವೀರ ಜಯಂತಿ-(ಸೋಮವಾರ)
07-ಏಪ್ರಿಲ್- ಗುಡ್ ಫ್ರೈಡೇ-(ಶುಕ್ರವಾರ) 14-ಏಪ್ರಿಲ್-ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ-(ಶುಕ್ರವಾರ)
22-ಏಪ್ರಿಲ್- ರಂಜಾನ್-(ಶನಿವಾರ)
23-ಏಪ್ರಿಲ್-ಬಸವ ಜಯಂತಿ-(ಭಾನುವಾರ)
1-ಮೇ-ಕಾರ್ಮಿಕರ ದಿನ-(ಸೋಮವಾರ) 29-ಜೂನ್-ಬಕ್ರೀದ್-(ಗುರುವಾರ)
29-ಜುಲೈ-ಮೊಹರಂನ ಕೊನೆಯ ದಿನ-(ಶನಿವಾರ)
15-ಆಗಸ್ಟ್- ಸ್ವಾತಂತ್ರ್ಯ ದಿನಾಚರಣೆ-(ಮಂಗಳವಾರ)
18-ಸೆಪ್ಟೆಂಬರ್-ಗಣೇಶ ಚತುರ್ಥಿ-(ಸೋಮವಾರ)
28-ಸೆಪ್ಟೆಂಬರ್-ಈದ್ ಮಿಲಾದ್- (ಗುರುವಾರ)
2-ಅಕ್ಟೋಬರ್- ಗಾಂಧಿ ಜಯಂತಿ-(ಸೋಮವಾರ)
14-ಅಕ್ಟೋಬರ್- ಮಹಾಲಯ ಅಮವಾಸ್ಯೆ-(ಶನಿವಾರ)
23-ಅಕ್ಟೋಬರ್-ಮಹಾ ನವಮಿ, ಆಯುಧಪೂಜೆ-(ಸೋಮವಾರ)
24-ಅಕ್ಟೋಬರ್- ವಿಜಯದಶಮಿ-(ಮಂಗಳವಾರ)
28-ಅಕ್ಟೋಬರ್- ಮಹರ್ಷಿ ವಾಲ್ಮೀಕಿ ಜಯಂತಿ-(ಶನಿವಾರ)
1-ನವೆಂಬರ್-ಕನ್ನಡ ರಾಜ್ಯೋತ್ಸವ-(ಬುಧವಾರ)
12-ನವೆಂಬರ್- ನರಕ ಚತುರ್ದಶಿ-(ಭಾನುವಾರ)
14-ನವೆಂಬರ್- ಬಲಿ ಪಾಡ್ಯಮಿ ದೀಪಾವಳಿ-(ಮಂಗಳವಾರ)
30-ನವೆಂಬರ್- ಕನಕದಾಸರ ಜಯಂತಿ-(ಗುರುವಾರ)
25-ಡಿಸೆಂಬರ್ ಕ್ರಿಸ್ಮಸ್-(ಸೋಮವಾರ)
ಬ್ಯಾಂಕ್‌ಗಳಿಗೆ 26 ರಜೆಗಳು ದೊರೆಯಲಿವೆ. ಈ ರಜಾದಿನಗಳನ್ನು ಹೊರತುಪಡಿಸಿ ಸಾಮಾನ್ಯ ರಜಾದಿನಗಳಿವೆ. ಪ್ರತಿ ತಿಂಗಳ ಪ್ರತಿ ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳು ತೆರೆಯುವುದಿಲ್ಲ. ಈ ಸಾರ್ವಜನಿಕ ರಜಾದಿನಗಳ ಜೊತೆಗೆ ಬ್ಯಾಂಕ್‌ಗಳು ಮುಚ್ಚಿದಾಗ ಗ್ರಾಹಕರು ಆನ್‌ಲೈನ್ ಬ್ಯಾಂಕಿಂಗ್, ನೆಟ್‌ಬ್ಯಾಂಕಿಂಗ್, UPI, NEFT ನಂತಹ ಸೇವೆಗಳನ್ನು ಬಳಸಬಹುದಾಗಿದೆ. ಬ್ಯಾಂಕ್ ರಜೆಗಳ ಮಾಹಿತಿ ತಿಳಿದಿದ್ದರೆ ಅಗತ್ಯ ವಹಿವಾಟು ನಡೆಸಲು ಬ್ಯಾಂಕ್ ಗೆ ಅಲೆದಾಡಿ ಸಮಯ ವ್ಯರ್ಥವಾಗದು.