ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಮಳೆ – ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ಮಾಂಡಸ್‌ ಚಂಡಮಾರುತ ಅಬ್ಬರಕ್ಕೆ ಎಫೆಕ್ಟ್ ಸಿಲಿಕಾನ್‌ ಸಿಟಿಯಲ್ಲಿ ಭಾರೀ ತಡಿಯಾಗಿದೆ. ನಿನ್ನೆಯಿಂದ ಜಡಿ ಮಳೆ ಕೂಡ ಹೆಚ್ಚಾಗಿದ್ದು, ಇನ್ನೂ ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯಲಿದೆ.

ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾಂಡಸ್ ಅಬ್ಬರದ ಎಫೆಕ್ಟ್ ಬೆಂಗಳೂರಿನ ಮೇಲೆ ಕೊಂಚ ಹೆಚ್ಚಾಗೆ ಬೀರುತ್ತಿದೆ. ಜೊತೆಗೆ ಇನ್ನೂ ಎರಡು ಮೂರು ದಿನಗಳ ಕಾಲ ಚಂಡಮಾರುತದ ಅಬ್ಬರ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಮೋಡದ ವಾತಾವರಣದ ಜೊತೆಗೆ ಶೀತಗಾಳಿ ಮತ್ತು ಕೆಲವೊಮ್ಮೆ ಜೋರು ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ತಜ್ಞ ಪ್ರಸಾದ್‌ ಅವರು ತಿಳಿಸಿದ್ದಾರೆ.

ಇಷ್ಟು ದಿನ ಊಟಿ, ಮಲೆನಾಡು ಭಾಗದಲ್ಲಿ ಕಂಡುಬರುತ್ತಿದ್ದ ತಣ್ಣನೆ ವಾತಾವರಣ ಇದೀಗ ಬೆಂಗಳೂರಿಗೂ ಶಿಫ್ಟ್ ಆಗಿದೆ. ಕಳೆದ ಎರಡು ದಿನದಿಂದ ಸೂರ್ಯನನ್ನೇ ಕಾಣದೆ ಕಂಗೆಟ್ಟಿರೋ ಬೆಂಗಳೂರಿಗರಿಗೆ ಇನ್ನು ಎರಡು-ಮೂರು ದಿನ ಇದೇ ರೀತಿಯ ವಾತಾವರಣನ್ನ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ .

ಬೆಳಗ್ಗೆ ವೇಳೆಯಲ್ಲಿ ನಗರಾದ್ಯಂತ ಹೆಚ್ಚು ಮಂಜು ಮುಸುಕುವ ಸಾಧ್ಯತೆ ಇದೆ. ಈಗಾಗಲೇ ನಗರಾದ್ಯಂತ ಬೆಳಗ್ಗೆ ಸಂದರ್ಭದಲ್ಲಿ ಕಡಿಮೆ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಕಂಡಿದೆ. ಇದೇ ವಾತಾವರಣ ಇನ್ನೂ ಕೆಲ ದಿನ ಮುಂದುವರಿಯುವ ಸಾಧ್ಯತೆ ಇದ್ದು, ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

Leave A Reply

Your email address will not be published.