Vivo Smartphones : ವಿವೋ ಸ್ಮಾರ್ಟ್ಫೋನ್ ಇನ್ಮುಂದೆ ಭಾರತದಲ್ಲಿ ಲಭ್ಯವಿಲ್ಲ
ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್ಫೋನ್ಗಳು ರಿಲೀಸ್ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ಫೋನ್ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ ಸ್ಮಾರ್ಟ್ಫೊನ್ಗಳು ಬರುತ್ತಲೇ ಇದೆ. ಪ್ರಸ್ತುತ ಈ ವಿವೋ ಕಂಪನಿಯ ಅಡಿಯಲ್ಲಿ ಭಾರತದಲ್ಲಿ ಸ್ಮಾರ್ಟ್ಫೋನ್ಗಳನ್ನು ತಯಾರಿಸಿ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಆದರೆ ಈ ಮಾರಾಟಕ್ಕೆ ಇದೀಗ ಭಾರತ ತಡೆ ಮಾಡಿದೆ.
ಪ್ರಸ್ತುತ ಕೆಲವೊಂದು ಟೆಲಿಕಾಂ ಕಂಪನಿಗಳಾಗಿರುವ ಒನ್ಪ್ಲಸ್,ರೆಡ್ ಮಿ, ಸ್ಯಾಮ್ಸಂಗ್, ವಿವೋ ನಂತಹ ಕಂಪನಿಗಳು ತನ್ನ ಉತ್ಪನ್ನಗಳ ಮಾರಾಟದ ಬೆಳವಣಿಗೆಯಿಂದ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇದೀಗ ವಿವೋ ಫೋನ್ಗಳ ರಫ್ತಿಗೆ ಭಾರತ ತಡೆಯಾಜ್ಞೆ ಮಾಡಿದೆ, ಇದರಿಂದ ಚೀನಾ ಕಂಪನಿ ಭಾರೀ ನಷ್ಟವನ್ನು ಹೊಂದಿದೆ ಎಂಬ ವರದಿಯಾಗಿದೆ.
ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿಯು ಭಾರತದ ಘಟಕದಲ್ಲಿ ತಯಾರಿಸಿ ನೆರೆ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಿದ್ದ 27,000 ಸ್ಮಾರ್ಟ್ಫೋನ್ಗಳ ಸಾಗಾಟಕ್ಕೆ ಭಾರತ ತಡೆಯೊಡ್ಡಿದೆ ಎಂದು ವರದಿ ಆಗಿದೆ.
ರಫ್ತು ಮಾಡುವ ಉದ್ದೇಶದಿಂದ 27,000 ಸ್ಮಾರ್ಟ್ಫೋನ್ಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯುತ್ತಿದ್ದರು. ಅದನ್ನು ಗಮನಿಸಿದ ಹಣಕಾಸು ಇಲಾಖೆಯ ಅಧೀನ ಸಂಸ್ಥೆಯಾಗಿರುವ ಕಂದಾಯ ಗುಪ್ತಚರ ಘಟಕ ಹಿಡಿದು ಅದಕ್ಕೆ ತಡೆ ಹಾಕಿದೆ. ಇನ್ನು ಈ ಸ್ಮಾರ್ಟ್ಫೋನ್ಗಳು 1.5 ಕೋಟಿ ಡಾಲರ್ನಷ್ಟು ಮೌಲ್ಯವನ್ನು ಹೊಂದಿದೆ ಎಂದು ವರದಿಗಳು ತಿಳಿಸಿದೆ.
ಸದ್ಯ ತಯಾರಿಸಿದ ಸ್ಮಾರ್ಟ್ಫೋನ್ಗಳ ಮಾದರಿಗಳನ್ನು ಮತ್ತು ಅದರ ಮೌಲ್ಯಗಳ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡಿರುವುದಾಗಿ ವರದಿ ಆಗಿದೆ. ಈ ರಫ್ತಿಗೆ ತಡೆಯಾಜ್ಞೆ ಹೇರಿರುವ ವಿಚಾರದ ಕುರಿತು ಹಣಕಾಸು ಸಚಿವಾಲಯವಾಗಲೀ, ವಿವೋ ಇಂಡಿಯಾ ಆಗಲೀ ಸದ್ಯಕ್ಕೆ ಯಾವುದೇ ರಿತಿಯ ಪ್ರತಿಕ್ರಿಯೆ ನೀಡಿಲ್ಲ.
ಈ ತಡೆಯಾಜ್ಞೆ ನಿಲ್ಲಿಸಬೇಕಾದರೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್’ನ ಅಧ್ಯಕ್ಷರಾಗಿರುವ ಪಂಕಜ್ ಮೊಹಿಂದ್ರೂ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕೇಂದ್ರ ಸಂಸ್ಥೆಗಳ ಇಂತಹ ಕ್ರಮದಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತು ಮೇಲಿನ ಬೆಳವಣಿಗೆಗೆ ಈ ರೀತಿಯ ನಿರ್ಧಾರಗಳು ಕಾರಣವಾಗಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಮುಖ್ಯವಾಗಿ ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಚೀನಾ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ನಿಗಾ ವಹಿಸಿದೆ . ಕೇಂದ್ರ ಸರ್ಕಾರ ದೇಶದಲ್ಲಿ ಕೆಲವರ್ಷಗಳ ಹಿಂದೆ ಚೀನೀ ಅ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಅದರ ಜೊತೆಗೆ ಸರ್ಕಾರ ಚೀನಾದ ಕೆಲವು ಕಂಪನಿಗಳ ಆದಾಯ ತೆರಿಗೆ ಇವುಗಳ ಮೇಲೆ ದಾಳಿ ಮಾಡಿ ಇಡೀ ಅಕ್ರಮವನ್ನು ಪತ್ತೆ ಹಚ್ಚಿತ್ತು.
ಭಾರತ ಘಟಕದಲ್ಲಿ ಮೊದಲ ಬಾರಿಗೆ ತಯಾರಿಸಿದ ಸ್ಮಾರ್ಟ್ಫೋನ್ಗಳನ್ನು ವಿವೋ ಸೌದಿ ಅರೇಬಿಯಾ ಮತ್ತು ಥಾಯ್ಲೆಂಡ್ಗೆ ರಫ್ತು ಮಾಡಿತ್ತು. ಆದರೆ ವಿವೋ ಕಂಪನಿಯ ಕೆಲವೊಂದು ಹಣಕಾಸು ವ್ಯವಹಾರದಲ್ಲಾದ ಅಕ್ರಮದಿಂದ ಸರ್ಕಾರ ಕಂಪನಿಯ ಮೇಲೆ ನಿಗಾ ವಹಿಸುತ್ತಿದ್ದು. ಚೀನಾದ ಪ್ರತಿಯೊಂದು ಮೋಸದ ವ್ಯವಹಾರಗಳಿಗೆ ನಾಂದಿ ಹಾಡಲು ಸರ್ಕಾರ ಮುಂದಾಗಿದೆ.
ಈ ಎಲ್ಲಾ ಕಾರಣದಿಂದಾಗಿ ಸದ್ಯ ವಿವೋ ಕಮ್ಯುನಿಕೇಷನ್ಸ್ ಟೆಕ್ನಾಲಜಿ ಕಂಪನಿಯು ಭಾರತದ ಘಟಕದಲ್ಲಿ ತಯಾರಿಸಿ ನೆರೆ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಿದ್ದ 27,000 ಸ್ಮಾರ್ಟ್ಫೋನ್ಗಳ ಸಾಗಾಟಕ್ಕೆ ಭಾರತ ತಡೆಯೊಡ್ಡಿರುವ ಮಾಹಿತಿ ವರದಿ ಆಗಿದೆ.