Vivo Smartphones : ವಿವೋ ಸ್ಮಾರ್ಟ್‌ಫೋನ್ ಇನ್ಮುಂದೆ‌ ಭಾರತದಲ್ಲಿ ಲಭ್ಯವಿಲ್ಲ

ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಮೊಬೈಲ್​ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ ಸ್ಮಾರ್ಟ್​ಫೊನ್​ಗಳು ಬರುತ್ತಲೇ ಇದೆ. ಪ್ರಸ್ತುತ ಈ ವಿವೋ ಕಂಪನಿಯ ಅಡಿಯಲ್ಲಿ ಭಾರತದಲ್ಲಿ ಸ್ಮಾರ್ಟ್​​ಫೋನ್​ಗಳನ್ನು ತಯಾರಿಸಿ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು ಆದರೆ ಈ ಮಾರಾಟಕ್ಕೆ ಇದೀಗ ಭಾರತ ತಡೆ ಮಾಡಿದೆ.

ಪ್ರಸ್ತುತ ಕೆಲವೊಂದು ಟೆಲಿಕಾಂ ಕಂಪನಿಗಳಾಗಿರುವ ಒನ್​​ಪ್ಲಸ್,ರೆಡ್​ ಮಿ, ಸ್ಯಾಮ್​ಸಂಗ್, ವಿವೋ ನಂತಹ ಕಂಪನಿಗಳು ತನ್ನ ಉತ್ಪನ್ನಗಳ ಮಾರಾಟದ ಬೆಳವಣಿಗೆಯಿಂದ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇದೀಗ ವಿವೋ ಫೋನ್​ಗಳ ರಫ್ತಿಗೆ ಭಾರತ ತಡೆಯಾಜ್ಞೆ ಮಾಡಿದೆ, ಇದರಿಂದ ಚೀನಾ ಕಂಪನಿ ಭಾರೀ ನಷ್ಟವನ್ನು ಹೊಂದಿದೆ ಎಂಬ ವರದಿಯಾಗಿದೆ.

ವಿವೋ ಕಮ್ಯುನಿಕೇಷನ್ಸ್​ ಟೆಕ್ನಾಲಜಿ ಕಂಪನಿಯು ಭಾರತದ ಘಟಕದಲ್ಲಿ ತಯಾರಿಸಿ ನೆರೆ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಿದ್ದ 27,000 ಸ್ಮಾರ್ಟ್​ಫೋನ್​ಗಳ ಸಾಗಾಟಕ್ಕೆ ಭಾರತ ತಡೆಯೊಡ್ಡಿದೆ ಎಂದು ವರದಿ ಆಗಿದೆ.

ರಫ್ತು ಮಾಡುವ ಉದ್ದೇಶದಿಂದ 27,000 ಸ್ಮಾರ್ಟ್​ಫೋನ್​ಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯುತ್ತಿದ್ದರು. ಅದನ್ನು ಗಮನಿಸಿದ ಹಣಕಾಸು ಇಲಾಖೆಯ ಅಧೀನ ಸಂಸ್ಥೆಯಾಗಿರುವ ಕಂದಾಯ ಗುಪ್ತಚರ ಘಟಕ ಹಿಡಿದು ಅದಕ್ಕೆ ತಡೆ ಹಾಕಿದೆ. ಇನ್ನು ಈ ಸ್ಮಾರ್ಟ್​ಫೋನ್​ಗಳು 1.5 ಕೋಟಿ ಡಾಲರ್​ನಷ್ಟು ಮೌಲ್ಯವನ್ನು ಹೊಂದಿದೆ ಎಂದು ವರದಿಗಳು ತಿಳಿಸಿದೆ.

ಸದ್ಯ ತಯಾರಿಸಿದ ಸ್ಮಾರ್ಟ್​​​ಫೋನ್​ಗಳ ಮಾದರಿಗಳನ್ನು ಮತ್ತು ಅದರ ಮೌಲ್ಯಗಳ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡಿರುವುದಾಗಿ ವರದಿ ಆಗಿದೆ. ಈ ರಫ್ತಿಗೆ ತಡೆಯಾಜ್ಞೆ ಹೇರಿರುವ ವಿಚಾರದ ಕುರಿತು ಹಣಕಾಸು ಸಚಿವಾಲಯವಾಗಲೀ, ವಿವೋ ಇಂಡಿಯಾ ಆಗಲೀ ಸದ್ಯಕ್ಕೆ ಯಾವುದೇ ರಿತಿಯ ಪ್ರತಿಕ್ರಿಯೆ ನೀಡಿಲ್ಲ.

ಈ ತಡೆಯಾಜ್ಞೆ ನಿಲ್ಲಿಸಬೇಕಾದರೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್​’ನ ಅಧ್ಯಕ್ಷರಾಗಿರುವ ಪಂಕಜ್ ಮೊಹಿಂದ್ರೂ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕೇಂದ್ರ ಸಂಸ್ಥೆಗಳ ಇಂತಹ ಕ್ರಮದಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ರಫ್ತು ಮೇಲಿನ ಬೆಳವಣಿಗೆಗೆ ಈ ರೀತಿಯ ನಿರ್ಧಾರಗಳು ಕಾರಣವಾಗಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಮುಖ್ಯವಾಗಿ ಗಲ್ವಾನ್‌ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಚೀನಾ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ನಿಗಾ ವಹಿಸಿದೆ . ಕೇಂದ್ರ ಸರ್ಕಾರ ದೇಶದಲ್ಲಿ ಕೆಲವರ್ಷಗಳ ಹಿಂದೆ ಚೀನೀ ಅ್ಯಪ್​ಗಳನ್ನು ಬ್ಯಾನ್ ಮಾಡಿತ್ತು. ಅದರ ಜೊತೆಗೆ ಸರ್ಕಾರ ಚೀನಾದ ಕೆಲವು ಕಂಪನಿಗಳ ಆದಾಯ ತೆರಿಗೆ ಇವುಗಳ ಮೇಲೆ ದಾಳಿ ಮಾಡಿ ಇಡೀ ಅಕ್ರಮವನ್ನು ಪತ್ತೆ ಹಚ್ಚಿತ್ತು.

ಭಾರತ ಘಟಕದಲ್ಲಿ ಮೊದಲ ಬಾರಿಗೆ ತಯಾರಿಸಿದ ಸ್ಮಾರ್ಟ್​​ಫೋನ್​ಗಳನ್ನು ವಿವೋ ಸೌದಿ ಅರೇಬಿಯಾ ಮತ್ತು ಥಾಯ್ಲೆಂಡ್​ಗೆ ರಫ್ತು ಮಾಡಿತ್ತು. ಆದರೆ ವಿವೋ ಕಂಪನಿಯ ಕೆಲವೊಂದು ಹಣಕಾಸು ವ್ಯವಹಾರದಲ್ಲಾದ ಅಕ್ರಮದಿಂದ ಸರ್ಕಾರ ಕಂಪನಿಯ ಮೇಲೆ ನಿಗಾ ವಹಿಸುತ್ತಿದ್ದು. ಚೀನಾದ ಪ್ರತಿಯೊಂದು ಮೋಸದ ವ್ಯವಹಾರಗಳಿಗೆ ನಾಂದಿ ಹಾಡಲು ಸರ್ಕಾರ ಮುಂದಾಗಿದೆ.

ಈ ಎಲ್ಲಾ ಕಾರಣದಿಂದಾಗಿ ಸದ್ಯ ವಿವೋ ಕಮ್ಯುನಿಕೇಷನ್ಸ್​ ಟೆಕ್ನಾಲಜಿ ಕಂಪನಿಯು ಭಾರತದ ಘಟಕದಲ್ಲಿ ತಯಾರಿಸಿ ನೆರೆ ದೇಶಗಳಿಗೆ ರಫ್ತು ಮಾಡಲು ಉದ್ದೇಶಿಸಿದ್ದ 27,000 ಸ್ಮಾರ್ಟ್​ಫೋನ್​ಗಳ ಸಾಗಾಟಕ್ಕೆ ಭಾರತ ತಡೆಯೊಡ್ಡಿರುವ ಮಾಹಿತಿ ವರದಿ ಆಗಿದೆ.

Leave A Reply

Your email address will not be published.