ನಟ ಅನಿರುದ್ಧ್‌ ಕಿರುತೆರೆಯಿಂದ ಬ್ಯಾನ್‌ ಆಗಿದ್ದಾರೆ, ಅವಕಾಶ ಕೊಡಬಾರದು | ಏನಿದು ಹೊಸ ಸುದ್ದಿ

ಕನ್ನಡದ ಮನೆ ಮಾತಾದ ನೆಚ್ಚಿನ ಧಾರಾವಾಹಿ ಜೊತೆ ಜೊತೆಯಲಿ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದ ಅನಿರುದ್ಧ್ ಆರ್ಯವರ್ಧನ್ ಎಂಬ ಖ್ಯಾತಿಯನ್ನು ಪಡೆದು ದೊಡ್ದ ಮಟ್ಟದ ಯಶಸ್ಸನ್ನು ಕೂಡ ತಂದುಕೊಟ್ಟಿದಂತು ಸುಳ್ಳಲ್ಲ.

ಝೀ ಕನ್ನಡದ ಜೊತೆ ಜೊತೆಯಲಿ ಸೀರಿಯಲ್ ಅನಿರುದ್ದ್ ಅವರನ್ನು ಟಾಪ್ ನಾಯಕರ ಪಟ್ಟಿಗೆ ಸೇರಿಸಿತ್ತು. ಅನಿರುದ್ಧ್ ಅನ್ನೋ ಹೆಸರಿಗಿಂತ ಹೆಚ್ಚಾಗಿ ಜನ ಅವರನ್ನು ಆರ್ಯವರ್ಧನ್ ಎಂದು ಗುರುತಿಸುವಂತೆ ಆಗಿದ್ದು ಮಾತ್ರವಲ್ಲ ಎಷ್ಟೋ ಅಭಿಮಾನಿಗಳನ್ನು ಕೂಡ ಹೊಂದಿದ್ದರು. ಆದರೆ, ಜೊತೆ ಜೊತೆಯಲಿ ಯಶಸ್ವಿ ಧಾರಾವಾಹಿ ಚಿತ್ರೀಕರಣದ ಸಂದರ್ಭದಲ್ಲಿ ನಡೆದಿದ್ದ ಘಟನೆ ಹಿನ್ನೆಲೆಯಲ್ಲಿ ಆರ್ಯವರ್ಧನ್ ಅವರನ್ನು ಅವರನ್ನು ಕಿರುತೆರೆ ನಿರ್ಮಾಪಕರ ಸಂಘದಿಂದ ಎರಡು ವರ್ಷಗಳ ಕಾಲ ನಿರ್ಬಂಧ ಹೇರಲಾಗಿತ್ತು. ಅಷ್ಟೆ ಅಲ್ಲದೆ, ಶೂಟಿಂಗ್ ಸೀರಿಯಲ್ ನಿಂದ ಮಾತ್ರವಲ್ಲದೆ ಕಿರಿತೆರೆಯಿಂದ ಕೂಡ ದೂರ ಇರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು.

ಇತ್ತೀಚಿಗೆ, ವಿಷಯ ತಣ್ಣಗಾದ ಬಳಿಕ ಹೆಸರಾಂತ ನಿಮಾಪಕ, ನಿರ್ದೇಶಕರಾದ ಎಸ್. ನಾರಾಯಣ್ ಅವರು ಅನಿರುದ್ದ್ ಅವರಿಗೆ ಹೊಸ ಧಾರವಾಹಿಗೆ ಅವಕಾಶ ನೀಡಿದ್ದರು. ಎಸ್ ನಾರಾಯಣ್ ಅನಿರುದ್ದ್ ಜೊತೆ ಸೂರ್ಯವಂಶ ಅನ್ನೋ ಸೀರಿಯಲ್ ಅನ್ನು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೆ ಅನಿರುದ್ದ್ ಅವರನ್ನು ಕಿರಿತೆರೆಯಿಂದ ಬ್ಯಾನ್ ಮಾಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಅನಿರುದ್ದ್ ಅವರನ್ನ ಕಿರುತೆರಿಯಿಂದ ದೂರ ಇಡಬೇಕು. ಅವರಿಗೆ ಸೀರಿಯಲ್ ಗಳಲ್ಲಿ ಅವಕಾಶ ಕೊಡಬಾರದು ಅನ್ನೋ ಕೂಗು ಈಗಲೂ ಜೋರಾಗಿ ಕೇಳಿ ಬರುತ್ತಿವೆ. ಎಸ್. ನಾರಾಯಣ್ ಅವರು ಅನಿರುದ್ದ್ ಅವರಿಗಾಗಿ ಸೂರ್ಯವಂಶ ಧಾರಾವಾಹಿಯನ್ನು ಅನೌನ್ಸ್ ಮಾಡಿದ ನಡುವೆಯೇ , ನಾರಾಯಣ್ ಅವರನ್ನು ಭೇಟಿಯಾಗಿರುವ ನಿರ್ಮಾಪಕರ ಸಂಘದವರು, ಅನಿರುದ್ದ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಿದ್ದು, ಹಾಗಾಗಿ, ಅನಿರುದ್ಧ್ ಜೊತೆ ಧಾರವಾಹಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ..

ನಟ ಅನಿರುದ್ಧ್ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಸಂಧಾನದ ಮುಖೇನ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಎಸ್.ನಾರಾಯಣ್ ಹೆಜ್ಜೆ ಇಟ್ಟಿದ್ದಾರೆ. ಇದರ ನಡುವೆ ಎಸ್.ನಾರಾಯಣ್ ಅವರು ಸೂರ್ಯವಂಶ ಎಂಬ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಅನಿರುದ್ಧ್ ಅವರಿಗೆ ಪ್ರಮುಖ ಪಾತ್ರ ನೀಡಿದ್ದಾರೆ. ಇದಕ್ಕೆ ಕಿರುತೆರೆ ನಿರ್ಮಾಪಕರು ಎಸ್.ನಾರಾಯಣ್ ಅವರ ಬಳಿ ಅನಿರುದ್ಧ್ ಅವರ ಮೇಲೆ ಹೇರಿರುವ ನಿರ್ಬಂಧದ ಬಗ್ಗೆ ತಿಳಿಸಿ ಅನಿರುದ್ದ್ ಅವರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.

ಈ ವಿಚಾರವನ್ನು ತಿಳಿ ಮಾಡುವ ನಿಟ್ಟಿನಲ್ಲಿ ನಾರಾಯಣ್ ಅವರು ಮುಂದಾಗಿದ್ದು, ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕಾಗಿದ್ದು, ಈ ರೀತಿ ನಡೆದುಕೊಂಡರೆ ಉದ್ಯಮಕ್ಕೂ ಕೂಡ ಹಾನಿಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಗಿಡವಾಗಿದ್ದಾಗಲೇ ಸಮಸ್ಯೆಯ ಮೂಲ ಅರಿತು ಬಗೆಹರಿಸಬೇಕು ಅಲ್ಲದೆ, ಮರವಾದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂಬ ಸಲಹೆ ನೀಡಿದ್ದಾರೆ . ಹಾಗಾಗಿ , ಈ ಬಗ್ಗೆ ಚರ್ಚೆ ನಡೆಸಿದ ಬಳಿಕ ಕಿರುತೆರೆ ನಿರ್ಮಾಪಕರು ಕೂಡ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತಾಗಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಎಲ್ಲ ವಿಷಯಗಳನ್ನೂ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟ ವಾಗಲಿದೆ ಎಂದು ತಿಳಿದುಬಂದಿದೆ.

ಕೆಲವು ಮೂಲಗಳ ಪ್ರಕಾರ, ಎಸ್.ನಾರಾಯಣ್ ಅವರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನೂ ಸರಿ ಮಾಡಲು ಪ್ರಯತ್ನ ನಡೆಸಿದ್ದು ಸಕಲ , ಅದು ಯಶಸ್ವಿಯಾಗುವ ಲಕ್ಷಣಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

Leave A Reply

Your email address will not be published.