ಶವಪರೀಕ್ಷೆ ವೇಳೆ ಮಾನವನ ದೇಹದೊಳಗಿನಿಂದ ಹೊರಬಂತು ಜೀವಂತ ಹಾವು | ನಂಬಲಸಾಧ್ಯ ಆದರೆ ನಿಜ

ಕೆಲವೊಂದು ಘಟನೆಗಳು ಅಥವಾ ಸಂಭವಗಳು ನಮ್ಮ ಊಹೆಗೂ ಮೀರಿ ನಡೆಯುತ್ತವೆ. ಹೌದು ನಾವೊಂದು ಯೋಚಿಸಿದರೆ ವಾಸ್ತವ ನಡೆಯುವುದು ಬೇರೆಯೇ ಆಗಿರುತ್ತದೆ. ಇನ್ನು ಶವ ಪರೀಕ್ಷೆ ಮಾಡುವಾಗ ಶವದ ಒಳಗೆ ನಾವು ಏನನ್ನು ಊಹೆ ಮಾಡಿರುತ್ತೇವೆ ಅದರ ಹೊರತು ಹಾವು ಇರಬಹುದು ಎಂದು ಯಾರೂ ಊಹೆ ಮಾಡಲು ಸಾಧ್ಯವಿಲ್ಲ.

ಹೌದು ಇಲ್ಲೊಬ್ಬ ಶವ ಪರೀಕ್ಷೆ ತಂತ್ರಜ್ಞೆ ಹೇಳಿರುವ ಮತ್ತು ನೋಡಿರುವ ಪ್ರಕಾರ ಮೃತದೇಹದ ಒಳಗೆ ಜೀವಂತ ಹಾವನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ. ಒಮ್ಮೆ ಮೃತದೇಹವನ್ನು ಪರೀಕ್ಷಿಸುವಾಗ ದೇಹದ ಒಳಗೆ ಜೀವಂತ ಹಾವು ನೋಡಿ ಆಘಾತಕ್ಕೆ ಒಳಗಾಗಿದ್ದು ಅಲ್ಲದೆ ಆ ಕ್ಷಣ ನಾನು ಭಯ ಮತ್ತು ಗೊಂದಲದಲ್ಲಿ ಕೊಠಡಿಯೆಲ್ಲ ಕಿರುಚುತ್ತಾ ಓಡಿದೆ ಮತ್ತು ಹಾವು ಹಿಡಿಯುವವರೆಗೂ ನಾನು ಕೋಣೆಗೆ ಹಿಂತಿರುಗಲೇ ಇಲ್ಲ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಬಿಸಿ ಮತ್ತು ತೇವಯುತವಾಗಿದ್ದರೆ, ಸಾಕಷ್ಟು ಕೀಟಗಳು ಚಟುವಟಿಕೆ ಇರುತ್ತದೆ. ಹೀಗಾಗಿ ನಾನು ಕೊಳೆತ ಮೃತದೇಹಗಳನ್ನು ಚಳಿಗಾಲದಲ್ಲಿ ಆದ್ಯತೆ ಕೊಡುತ್ತೇನೆ ಎಂದು ಜೆಸ್ಸಿಕಾ ಹೇಳಿದ್ದಾರೆ. ಅದಲ್ಲದೆ ಶವಪರೀಕ್ಷೆ ತಂತ್ರಜ್ಞೆಯಾಗುವುದು ಜೆಸ್ಸಿಕಾ ಆರಿಸಿಕೊಂಡ ವೃತ್ತಿಯಲ್ಲವಂತೆ. ಆದರೆ ಈಗ ಅವರು ತಮ್ಮ ಕೆಲಸವನ್ನು ಪ್ರೀತಿಸುತ್ತಿದ್ದಾರೆ. ಪ್ರತಿ ದಿನವೂ ತನಗೆ ವಿಭಿನ್ನ ಅನುಭವಗಳು ಆಗುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

ಮುಖ್ಯವಾಗಿ ಶವಪರೀಕ್ಷೆ ತಂತ್ರಜ್ಞರಾಗಿರುವುದು ಜಗತ್ತಿನ ಕಠಿಣ ಕೆಲಸಗಳಲ್ಲಿ ಒಂದು. ಅದಕ್ಕೆ ಗುಂಡಿಗೆ ಗಟ್ಟಿ ಇರಬೇಕು. ಏಕೆಂದರೆ ಪ್ರತಿನಿತ್ಯ ಅವರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅಮೆರಿಕದ ಮೇರಿಲ್ಯಾಂಡ್‌ನ ಶವಪರೀಕ್ಷೆ ತಂತ್ರಜ್ಞೆ ಜೆಸ್ಸಿಕಾ ಲೋಗನ್ ಅವರು ತಮ್ಮ ಕೆಲಸದ ಸಮಯದಲ್ಲಿ ಎದುರಾದ ವಿಚಿತ್ರ ಘಟನೆಯನ್ನು ಸಾಮಾಜಿಕ ಜಾಲತಾಣ ಮೂಲಕ ಹಂಚಿಕೊಂಡಿದ್ದಾರೆ.

Leave A Reply

Your email address will not be published.