ಪೋಷಕರೇ ಹುಷಾರ್ | ಬಂದಿದೆ ‘ಸ್ಟ್ರೆಪ್ ಎ ಇನ್ಫೆಕ್ಷನ್’ ಸೋಂಕು |

ಅನೇಕ ಸಾಂಕ್ರಾಮಿಕ ರೋಗಗಳಿಂದ ಇಡೀ ಜಗತ್ತು ಬಳಲಿದ್ದೂ, 3 ವರ್ಷಗಳ ಹಿಂದೆ ಕೋವಿಡ್ ಎಂಬ ಮಹಾಮಾರಿಗೆ ಅದೆಷ್ಟೋ ಜನ ಬಲಿಯಾಗಿದ್ದಾರೆ. ಇದೀಗ ಹೊಸ ವೈರಸ್ ಕಾಲಿಟ್ಟಿದ್ದು, ಇದು ಕಡಿಮೆ ವಯಸ್ಸಿನವರಲ್ಲಿ ಅಂದರೆ ಮಕ್ಕಳಲ್ಲಿ ಅಪಾಯ ತರುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ತಜ್ಞರು.

ಹೌದು, ಇತ್ತೀಚೆಗೆ ಸ್ಟ್ರೆಪ್ ಎ ಸೋಂಕು ಅಮೆರಿಕ ಮತ್ತು ಬ್ರಿಟನ್‌ನಂತಹ ದೇಶಗಳಿಂದ ಮುಂಚೂಣಿಗೆ ಬಂದಿದೆ, ಇದರಿಂದಾಗಿ ಆರು ಮಕ್ಕಳು ಸಾವನ್ನಪ್ಪಿದ್ದೂ, ಅವರಲ್ಲಿ ಹೆಚ್ಚಿನ ಮಕ್ಕಳು ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಸ್ಟ್ರೆಪ್ ಎ ಸೋಂಕುಗಳು ಸಾಮಾನ್ಯವಾಗಿ ಸೌಮ್ಯವಾಗಿದ್ದರೂ, ಜನರು ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಅದಕ್ಕಾಗಿಯೇ ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು ಎಂದು ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ಪೋಷಕರಿಗೆ ಎಚ್ಚರಿಕೆ ನೀಡಿದೆ.

ಸ್ಟ್ರೆಪ್ ಎ ಸೋಂಕು ಗಂಟಲು ಮತ್ತು ಚರ್ಮದ ಬ್ಯಾಕ್ಟಿರಿಯಾವಾಗಿದ್ದು, ಸಾಮಾನ್ಯವಾಗಿ ಕಡುಗೆಂಪು ಜ್ವರ ಮತ್ತು ಗಂಟಲಿನ ಸೋಂಕನ್ನು ಉಂಟುಮಾಡುತ್ತದೆ. ಈ ಸೋಂಕು ಕೆಮ್ಮು, ಸೀನುವಿಕೆ ಮತ್ತು ನಿಕಟ ಸಂಪರ್ಕದ ಮೂಲಕ ಇತರರಿಗೆ ಹರಡಬಹುದು. ಆದ್ದರಿಂದ, ಸೋಂಕಿನ ಲಕ್ಷಣಗಳ ಮೇಲೆ ನಿಗಾ ಇಡಬೇಕು ಮತ್ತು ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಯುಎಸ್ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ನನ್ (ಸಿಡಿಸಿ) ಪೋಷಕರಿಗೆ ಸಲಹೆಯನ್ನು ನೀಡಿದೆ.

ಸಣ್ಣಮಟ್ಟದ ಜ್ವರ, ಚರ್ಮದ ದದ್ದು ಕಾಣಿಸುತ್ತದೆ, ಊದಿಕೊಂಡ ಟಾನ್ಸಿಲ್ಗಳು ಮತ್ತು ಗ್ರಂಥಿಗಳು, ನುಂಗುವಾಗ ನೋವು ಕಾಣಿಸಿಕೊಳ್ಳುತ್ತದೆ. ಇದು ‘ಸ್ಟ್ರೆಪ್ ಎ ಇನ್ಸೆಕ್ಷನ್’ ನ ಲಕ್ಷಣಗಳು.

ಸ್ಟ್ರೆಪ್ ಎ ಸೋಂಕು ಹೆಚ್ಚುತ್ತಿರುವುದರಿಂದ ಈ ಬಗ್ಗೆ ಗಮನ ಹರಿಸುವುದರೊಂದಿಗೆ ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸುವುದು ಅತ್ಯಗತ್ಯ.ಮಕ್ಕಳಿಗೆ ಮಾಸ್ಕ್ ಧರಿಸಿ ಶಾಲೆಗಳಿಗೆ ಕಳುಹಿಸಬೇಕು. ಮತ್ತು ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮಕ್ಕಳನ್ನು ವೈದ್ಯರ ಬಳಿಗೆ ಕರೆದು ಕೊಂಡು ಹೋಗಿರಿ.

Leave A Reply

Your email address will not be published.