ವಾಟ್ಸಾಪ್‌ನಲ್ಲಿ ಬಂತು ಹೊಸ ಅವತಾರ್ ವೈಶಿಷ್ಟ್ಯ !

ಇತ್ತೀಚೆಗೆ ವಾಟ್ಸಪ್ ನಲ್ಲಿ ಹಲವಾರು ಹೊಸತಾದ ಫೀಚರ್ಸ್ ಗಳು ಬರುತ್ತಲೇ ಇವೆ. ಇದಂತು ವಾಟ್ಸಾಪ್ ಬಳಕೆದಾರರ ಕಣ್ಮನ ಸೆಳೆಯುತ್ತಿವೆ. ಹಾಗೇ ಈ ಬಾರಿ ಅವತಾರ್ ಎಂಬ ಫೀಚರ್ಸ್ ಬಂದಿದೆ. ಇನ್ನೂ ಇದರ ವಿಶೇಷತೆ ಏನು? ಏನಿದು ಅವತಾರ್ ಫೀಚರ್ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ.

ಈ ಹೊಸ ಅವತಾರ್ ಫೀಚರ್ ನ ಉಪಯೋಗ ಏನಂದ್ರೆ, ಇದನ್ನು ಬಳಸಿಕೊಂಡು 36 ಕಸ್ಟಮ್ ಸ್ಟಿಕ್ಕರ್ ಗಳನ್ನು ರಚಿಸಬಹುದು. ಅಲ್ಲದೆ, ಫೋಟೋಗಳನ್ನು ಶೇರ್ ಮಾಡುವ ಹಾಗೆ ಇವುಗಳನ್ನು ಕೂಡ ಶೇರ್ ಮಾಡಬಹುದು. ಹಾಗೇ ಪ್ರೊಫೈಲ್ ಚಿತ್ರವನ್ನಾಗಿ ಸಹ ಇದನ್ನು ಇಟ್ಟುಕೊಳ್ಳಬಹುದು. ಇನ್ನೂ ಶೀಘ್ರದಲ್ಲೇ ಎಲ್ಲಾ ವಾಟ್ಸಪ್ ಬಳಕೆದಾರರಿಗೂ ಈ ಹೊಸ ‘ಅವತಾರ್’ ಫೀಚರ್ ಲಭ್ಯವಾಗುವ ನಿರೀಕ್ಷೆ ಇದೆ.

ವಾಟ್ಸಾಪ್ ಬೀಟಾ ಇನ್ಫೋ ವರದಿಯ ಪ್ರಕಾರ, ಈ ಹೊಸ ಅವತಾರ್ ಫೀಚರ್ಸ್ ನಿಂದ ವಾಟ್ಸಾಪ್ ಬಳಕೆದಾರರು ತಮ್ಮಿಷ್ಟದ ಹಾಗೆ ಸ್ಟಿಕ್ಕರ್ ರೂಪಿಸಿಕೊಳ್ಳಬಹುದು. ಅಂದ್ರೆ, ಲೈಟಿಂಗ್, ಶೇಡಿಂಗ್, ಹೇರ್ ಸ್ಟೈಲ್ ಟೆಕ್ಸ್ಚರ್‌ಗಳು ಸೇರಿದಂತೆ ಇನ್ನೂ ಹೆಚ್ಚಿನ ಆಯ್ಕೆಯಲ್ಲಿ ಬಳಕೆದಾರರು ತಮಗೆ ಇಷ್ಟವಾದ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ರೂಪಿಸಬಹುದು. ಸದ್ಯ 36 ಕಸ್ಟಮ್ ಸ್ಟಿಕ್ಕರ್ಗಳನ್ನು ರಚಿಸಲು ಸಾಧ್ಯವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಟಸ್ಟಮ್ ಅವತಾರ್ ಸ್ಟಿಕ್ಕರ್‌ಗಳನ್ನು ವಾಟ್ಸಾಪ್ ಸಂಸ್ಥೆ ಪರಿಚಯಿಸಬಹುದು ಎಂದು ವರದಿ ತಿಳಿಸಿದೆ.

ಇನ್ನೂ ‘ಅವತಾರ್’ ಫೀಚರ್ಸ್ ಅನ್ನು ಉಪಯೋಗಿಸುವುದು ಹೇಗೆಂದರೆ, ನಿಮ್ಮ ವಾಟ್ಸಾಪ್ ಅನ್ನು ಓಪನ್‌ ಮಾಡಿ. ನಂತರ ಅಲ್ಲಿ ಸ್ಟಿಕ್ಕರ್‌ಗಳ ವಿಭಾಗಕ್ಕೆ ಹೋಗಿ, ಅಲ್ಲಿ ನಿಮ್ಮ ಸ್ವಂತ ಡಿಜಿಟಲ್ ಅವತಾರವನ್ನು ರಚಿಸಿಕೊಳ್ಳಬಹುದು. ಐಒಎಸ್ನಲ್ಲಿ ವಾಟ್ಸಾಪ್ ಚಾಟ್ ಓಪನ್ ಮಾಡಿ ಸ್ಟಿಕ್ಕರ್ಸ್ ಆಯ್ಕೆಯಿರುವಲ್ಲಿಗೆ ಭೇಟಿ ನೀಡಿ. ಆಂಡ್ರಾಯ್ಡ್ನಲ್ಲಿ ಇಮೋಜಿ ಸಿಂಬಲ್ ಅನ್ನು ಟ್ಯಾಪ್ ಮಾಡಿ. ಅಲ್ಲಿ ಜಿಫ್ ಆಯ್ಕೆಯ ನಂತರ ಸ್ಟಿಕ್ಕರ್ ಆಯ್ಕೆ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಬೇಕು, ನಿಮ್ಮ ಮೊಬೈಲ್ನಲ್ಲಿ ‘ಅವತಾರ್’ ಆಯ್ಕೆ ಇದ್ದರೆ ಅಲ್ಲಿ ಕಾಣಿಸುತ್ತದೆ. ಅಲ್ಲಿಂದ ಯಾವುದಾದರೂ ಮಾದರಿಯ ಒಂದು ‘ಅವತಾರ್’ ಅನ್ನು ಟ್ಯಾಪ್ ಮಾಡಿ.

ನಿಮ್ಮ ವಾಟ್ಸಾಪ್‌ನಲ್ಲಿ ಈ ಫೀಚರ್ಸ್ ಇಲ್ಲ, ಕಾಣಿಸುತ್ತಿಲ್ಲ ಅಂದ್ರೆ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅಪ್‌ಡೇಟ್‌ ಮಾಡಿಕೊಳ್ಳಿ. ಇನ್ನೂ ‘ಅವತಾರ್’ ಟ್ಯಾಪ್ ಮಾಡಿದ್ರೆ ಹೊಸ ಪುಟ ತೆರೆದುಕೊಳ್ಳುತ್ತೆ. ಆಗ ಅಲ್ಲಿರುವ ‘ಗೆಟ್ ಸ್ಟಾರ್ಟೆಡ್’ ಆಯ್ಕೆಯನ್ನು ಕ್ಲಿಕ್ ಮಾಡಿ, ‘ಅವತಾರ್’ ಸ್ಟಿಕ್ಕರ್ ರಚಿಸಿ. ನೀವು ಒಂದು ಬಾರಿ ಸ್ಟಿಕ್ಕರ್ ರಚಿಸಿದ ನಂತರ ಅದನ್ನು ಸೇವ್ ಮಾಡಿ. ಪ್ರತೀ ಬಾರಿ ಸ್ಟಿಕ್ಕರ್ ರಚಿಸಿದ ನಂತರ ಸೇವ್ ಮಾಡಬೇಕು. ಇನ್ನೂ ಅವತಾರ್ ಸ್ಟಿಕ್ಕರ್ ರಚನೆ ಆದ ಬಳಿಕ ಇದನ್ನು ಶೇರ್ ಮಾಡಬಹುದು ಅಥವಾ ನಿಮ್ಮ ಪ್ರೊಫೈಲ್ ಚಿತ್ರವನ್ನಾಗಿ ಇಟ್ಟುಕೊಳ್ಳಬಹುದಾಗಿದೆ.

Leave A Reply

Your email address will not be published.