ಬಿಲ್ಡಿಂಗ್‌ ಹಾರಿ ಹುಡುಗಿಯರ ನಗ್ನ ಚಿತ್ರ ಸೆರೆ ಹಿಡಿಯುತ್ತಿದ್ದ ಕಾಮುಕ ಅಂದರ್‌

ಕೆಲಸವಿಲ್ಲದೆ ಅಡ್ಡಾಡುತ್ತಿದ್ದ ಮಾಡುತ್ತಿದ್ದ ಹೇಯ ಕೆಲಸದ ಬಗ್ಗೆ ತಿಳಿದರೆ ಅಚ್ಚರಿಯಾಗೋದು ಪಕ್ಕಾ!!. ನಾಲ್ಕು ವರ್ಷದಿಂದ ಯಾವುದೇ ಕೆಲಸವಿಲ್ಲದೇ ಅಡ್ಡಾಡುತ್ತಿದ್ದ ನಿರಂಜನ್ ಎಂಬ ಆರೋಪಿ ಹೆಣ್ಣು ಮಕ್ಕಳ ವಿಡಿಯೋ ಮಾಡೋದನ್ನು ತನ್ನ ಕಸುಬಿನಂತೆ ಮಾಡಿಕೊಂಡಿದ್ದ. ಹೀಗೆ ವಿಡಿಯೋ ಚಿತ್ರೀಕರಣ ಮಾಡಿ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುತ್ತಿದ್ದ ಎನ್ನಲಾಗಿದೆ. ಅಕಸ್ಮಾತ್ ಇವನು ಹೇಳಿದಂತೆ ಕೇಳದೆ ಇದ್ದಲ್ಲಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಸದ್ಯ ಯುವತಿಯೊಬ್ಬಳ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಆರೋಪಿ ನಿರಂಜನ್​ನನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ಬಿಲ್ಡಿಂಗ್ ಟು ಬಿಲ್ಡಿಂಗ್ ಜಂಪ್ ಮಾಡಿ ವೀಡಿಯೋ ಮಾಡುತ್ತಿದ್ದ. ಒಳ್ಳೆಯ ಕೆಲಸ ಹುಡುಕಿಕೊಂಡು ಸರಿಯಾದ ಜೀವನ ನಡೆಸುವುದನ್ನು ಬಿಟ್ಟು, ಹುಡುಗಿಯರ ಅಶ್ಲೀಲ ವಿಡಿಯೋ ರೆಕಾರ್ಡ್​ ಮಾಡುವ ಖಯಾಲಿ ಬೆಳೆಸಿಕೊಂಡಿದ್ದ ಆರೋಪಿ ಪಾಂಡಿಚೇರಿ ಮೂಲದವನೆಂದು ಹೇಳಲಾಗಿದೆ.

ಬಿಲ್ಡಿಂಗ್ ಜಂಪ್ ಮಾಡಿ ಹೆಣ್ಣು ಮಕ್ಕಳು ಸ್ನಾನ ಮಾಡುವ, ಬಟ್ಟೆ ಬದಲಾಯಿಸುವ ನಗ್ನ, ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾಮುಕ ಬಳಿಕ ಲೈಂಗಿಕ ಆಸೆ ಈಡೇರಿಸುವಂತೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಓರ್ವ ಹುಡುಗಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಬಳಿಕ ಹುಡುಗಿಯ ಮೊಬೈಲ್​ನಿಂದ ಆರೋಪಿಗೆ ಮೆಸೇಜ್ ಮಾಡಿ ಆತನನ್ನು ಉಪಾಯವಾಗಿ ಪೊಲೀಸರು ಕರೆಸಿಕೊಂಡಿದ್ದಾರೆ.

ನಾಲ್ಕು ವರ್ಷದಿಂದ ಆಗ್ನೇಯ ವಿಭಾಗದ ಪಿಜಿಯೊಂದರಲ್ಲಿ ವಾಸವಿದ್ದ ಆರೋಪಿ, ಹುಡುಗಿಯರ ಸ್ನಾನದ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಎನ್ನಲಾಗಿದ್ದು ಅಷ್ಟೆ ಅಲ್ಲದೆ ವಿಡಿಯೋ ಮಾಡುವುದರಲ್ಲೂ ಆತ ಜೀವ ಪಣಕ್ಕಿಡಲೂ ಕೂಡ ಹೆದರುತ್ತಿರಲಿಲ್ಲ. ಕಟ್ಟಡದ ಟಾಪ್ ಪ್ಲೋರ್ ಮೇಲೆ ಹತ್ತಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಎನ್ನಲಾಗಿದ್ದು ಸದ್ಯ ಕಾಮುಕ ನಿರಂಜನ್ ಅನ್ನು ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಮೊದಲನೇ ಬಾರಿಗೆ ಪೊಲೀಸರು ಟ್ರ್ಯಾಪ್ ಮಾಡಿದಾಗ ಯುವತಿಯನ್ನು ಭೇಟಿ ಮಾಡಿ ಆರೋಪಿ ನಿರಂಜನ್ ವಾಪಸ್ಸು ಹೋಗಿದ್ದಾನೆ . ಆ ಬಳಿಕ ಎರಡನೇ ದಿನ ರೂಮ್ ಬುಕ್ ಮಾಡಿ ಯುವತಿಯನ್ನ ಕರೆಯಿಸಿದ್ದಾನೆ. ಈ ವೇಳೆ ರೆಂಡ್ ಹ್ಯಾಂಡಾಗಿ ಪೊಲೀಸರ ಬಲೆಗೆ ಬಿದ್ದಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ, ಪಿಜಿಯ ಪಕ್ಕದಲ್ಲೇ ಇದ್ದ ಹೆಣ್ಣು ಮಕ್ಕಳ ಬ್ಲಾಕ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಸದ್ಯ ಆರೋಪಿ ಮೊಬೈಲ್ನಲ್ಲಿ 20 ರಿಂದ 30ಕ್ಕೂ ಹೆಚ್ಚು ವಿಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ.

Leave A Reply

Your email address will not be published.