Auto Helpline : ಆಟೋ ಚಾಲಕರು ಹೆಚ್ಚು ದರ ವಸೂಲಿ ಮಾಡಿದರೆ ಈ ನಂಬರ್‌ಗೆ ಕಾಲ್‌ ಮಾಡಿ

ಇನ್ಮುಂದೆ ಪ್ರೀ -ಪೇಯ್ಡ್ ಆಟೋ ಸೇವೆಗಳಿಂದ ಆಟೋ ಚಾಲಕರು ತಮಗನಿಸಿದಷ್ಟು ಶುಲ್ಕ ವಿಧಿಸಿ, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುವುದಿಲ್ಲ. ಪ್ರಯಾಣಿಕರಿಗೆಂದು ಸಹಾಯವಾಣಿ ಇದೆ. ಒಂದು ವೇಳೆ ಆಟೋ ಚಾಲಕರು ಹೆಚ್ಚು ದರ ವಸೂಲಿ ಮಾಡಿದರೆ ಇಲ್ಲಿ ನೀಡಿರುವ ನಂಬರ್‌ಗೆ ಕಾಲ್‌ ಮಾಡಿ

ರಾಜ್ಯ ರಾಜಧಾನಿಯಲ್ಲಿ ಆಟೋ ಚಾಲಕರು ಪ್ರಯಾಣಿಕರ ಮೇಲೆ ವಿಪರೀತ ದರ ವಿಧಿಸುತ್ತಿದ್ದಾರೆ ಎಂಬ ಕೂಗು ಹೆಚ್ಚಾಗುತ್ತಿದ್ದು, ಈ ಬಗ್ಗೆ ಟ್ರಾಫಿಕ್ ಪೊಲೀಸರು, ಬೆಂಗಳೂರು ನಾಗರಿಕರ ಪ್ರಯಾಣಕ್ಕಾಗಿ ಹೊಸ ಯೋಜನೆಯೊಂದನ್ನು ಆರಂಭಿಸಲು ನಿರ್ಧರಿಸಿದ್ದಾರೆ.

ಟ್ರಾಫಿಕ್ ಇಲಾಖೆ, ನಗರದಲ್ಲಿ ಪ್ರೀ-ಪೇಯ್ಡ್ ಆಟೋ ಸ್ಟೇಷನ್​ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ನಂತರ ಬೆಂಗಳೂರಿನ ಹಲವು ಭಾಗಗಳಲ್ಲಿ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಇನ್ನೂ ಈ ಪ್ರೀ-ಪೇಯ್ಡ್ ಆಟೋ ಯೋಜನೆಯಿಂದ ಆಟೋ ಚಾಲಕರು ಪ್ರಯಾಣಿಕರ ಮೇಲೆ ಬೇಕಾಬಿಟ್ಟಿ ಶುಲ್ಕ ವಿಧಿಸಲು ಸಾಧ್ಯವಿಲ್ಲ. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗುತ್ತದೆ. ಇನ್ಮುಂದೆ ಯಾವುದೇ ಆಟೋ ಚಾಲಕರು ಹೆಚ್ಚು ದರ ವಸೂಲಿ ಮಾಡಿದರೆ ತಕ್ಷಣವೇ 112 ಸಂಖ್ಯೆಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಥವಾ ಹೆಚ್ಚಿನ ಹಣ ವಸೂಲಿ ಮಾಡಿದರೆ ಹತ್ತಿರದ ಪೊಲೀಸ್ ಠಾಣೆಗೆ ಪ್ರಯಾಣಿಕರು ದೂರು ನೀಡಬಹುದು ಎಂದು ಹೇಳಲಾಗಿದೆ.

Leave A Reply

Your email address will not be published.