ಪುರುಷರೇ ನಿಮಗಿದು ತಿಳಿದಿರಲಿ | ನಿಮ್ಮ ಲೈಂಗಿಕ ಸಾಮರ್ಥ್ಯ ಈ ನೈಸರ್ಗಿಕ ವಿಧಾನದ ಮೂಲಕ ಹೆಚ್ಚಿಸಿ

ಮನುಷ್ಯನ ಜೀವನದಲ್ಲಿ ಲೈಂಗಿಕ ಕ್ರಿಯೆ ಅನ್ನೋದು ಸಹಜ ಕ್ರಿಯೆ ಆಗಿದೆ. ಮನುಷ್ಯ ಸಂಘ ಜೀವಿಯಾಗಿರಲು ಇಷ್ಟ ಪಡುವ ಕಾರಣ ಲೈಂಗಿಕತೆಗೆ ಹೆಚ್ಚು ಪ್ರಾಶಸ್ಯ ಇದೆ. ಹೌದು ಯಾವಾಗ ಸಂಗಾತಿಗಳಿಬ್ಬರ ಮಧ್ಯೆ ಸ್ನೇಹ ಮತ್ತು ಸಾಮರಸ್ಯ ಹೆಚ್ಚಾಗಿರುತ್ತದೆ ಆಗ ಮದುವೆಯ ಜೀವನ ಆನಂದಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಲೈಂಗಿಕ ಜೀವನಕ್ಕೆ ಮುಖ್ಯವಾಗಿ ಬೇಕಾಗಿ ರುವ ಉದ್ರೇಕ ಮತ್ತು ಆಸಕ್ತಿ ಇಬ್ಬರ ಮಧ್ಯೆ ಇರುವುದೇ ಇಲ್ಲ. ಅದಲ್ಲದೆ ಲೈಂಗಿಕ ತೃಪ್ತಿ ಕಾರಣದಿಂದ ದಂಪತಿಗಳ ನಡುವೆ ಮುನಿಸು ಬಂದರೆ ದಾಂಪತ್ಯ ಮೌನ ಆಗಬಹುದು.
ಸಹಜವಾಗಿ ಮದುವೆಯ ನಂತರ ಪುರುಷನು ತನ್ನ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು ಎಂದು ಬಯಸುತ್ತಾನೆ, ಆದರೆ ದೈಹಿಕ ದೌರ್ಬಲ್ಯವಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.

ಇದೆಲ್ಲದರ ಹೊರತು ವಿಶೇಷವಾಗಿ ವಯಸ್ಸು 40 ದಾಟಿದ ನಂತರ ಕೆಲಸದ ಒತ್ತಡ, ಅನಾರೋಗ್ಯವು ಲೈಂಗಿಕ ಸಮಸ್ಯೆಯನ್ನು ಹೆಚ್ಚಿಸಬಹುದು. ಆದರೆ ಪುರುಷರು ಉತ್ತಮ ಜೀವನಶೈಲಿ ಜತೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂಗಿಕ ಸಮಸ್ಯೆಗಳ ವಿರುದ್ಧ ಹೋರಾಡಬಹುದಾಗಿದೆ.

ಪುರುಷರ ಲೈಂಗಿಕ ಸಮಸ್ಯೆ ಪರಿಹಾರ ಮಾಡುವ ಆಹಾರಗಳು :
ದಾಳಿಂಬೆ : ಟೆಸ್ಟೋಸ್ಟೇರೋನ್‌ ಹಾರ್ಮೋನ್‌ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ. ಮೂಡನ್ನು ಉತ್ತೇಜಿಸುವುದರ ಜತೆ ರಕ್ತ ಸಂಚಾರ ಸರಾಗವಾಗುವಂತೆ ಮಾಡುತ್ತದೆ.

  • ಜೀರಿಗೆ : ಕಡಿಮೆ ಕಾಮಾಸಕ್ತಿ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಪ್ರಬುದ್ಧ ಸ್ಖಲನದಿಂದ ತೊಂದರೆಗೊಳಗಾದ ವಿವಾಹಿತ ಪುರುಷರು ರಾತ್ರಿಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ಜೀರಿಗೆಯನ್ನು ಸೇವಿಸಬೇಕು. ಏಕೆಂದರೆ, ಇದು ಕಾಮೋತ್ತೇಜಕ ಗುಣಗಳನ್ನು ಹೊಂದಿದೆ. ಇದು ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಕಲ್ಲಂಗಡಿ :40 ವರ್ಷದ ನಂತರ ಪುರುಷರು ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಇದರಿಂದ ಉದ್ರೇಕ ಸಮಸ್ಯೆಯಿಂದ ಮುಕ್ತರಾಗಬಹುದು.
  • ಬೀಟ್‌ರೂಟ್‌: ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್‌ರೂಟ್‌ಗೆ ಇದೆ. ನಿತ್ಯ ಬೀಟ್‌ರೂಟ್‌ ರಸ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮಿರುವಿಕೆಯ ಸಮಸ್ಯೆಯನ್ನು ಇದು ನಿವಾರಿಸಲಿದೆ.
  • ಮೆಣಸು: ಲೈಂಗಿಕ ಜೀವನವನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಮೆಣಸು ಇರಲಿ. ಸ್ನಾಯುಗಳು, ಹೃದಯ, ಸೇರಿದಂತೆ ಲೈಂಗಿಕ ಅಂಗಗಳಿಗೆ ಉತ್ತಮ ರಕ್ತದ ಹರಿವನ್ನು ಒದಗಿಸುತ್ತದೆ.
  • ಬ್ರಕೋಲಿ: ಅತ್ಯಂತ ಆರೋಗ್ಯಪೂರ್ಣವಾದದ್ದು ಬ್ರಕೋಲಿ. ಇದು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಟೆಸ್ಟೋಸ್ಟೆರಾನ್‌ ಮಟ್ಟವನ್ನು ಹೆಚ್ಚಿಸುತ್ತದೆ.
  • ಡಾರ್ಕ್‌ ಚಾಕೊಲೇಟ್‌: ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್‌ ಅನ್ನು ಕಡಿಮೆಗೊಳಿಸುತ್ತದೆ. ಈ ಮೂಲಕ ರಕ್ತ ಪರಿಚಲನೆ ಸುಧಾರಿಸಬಹುದು. ಇದು ಲೈಂಗಿಕತೆಯನ್ನು ಉತ್ತೇಜಿಸುತ್ತದೆ ಕೂಡ.
  • ಮೆಂತ್ಯೆ : ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಸರಾಗಗೊಳಿಸುವ ಸಾಮರ್ಥ್ಯ‌ವನ್ನು ಹೊಂದಿದೆ. ಅಲ್ಲದೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಯಾವುದೇ ಆಹಾರದ ಮೂಲಕ ಸೇವಿಸಬಹುದು.

ಈ ಮೇಲಿನ ಆಹಾರವನ್ನು ಸೇವಿಸುವ ಮೂಲಕ ಲೈಂಗಿಕ ಸಮಸ್ಯೆಗಳ ವಿರುದ್ಧ ಹೋರಾಡಬಹುದಾಗಿದೆ.

Leave A Reply

Your email address will not be published.