BEL Recruitment 2022: ನೀವು ಬಿಇ/ಬಿ.ಟೆಕ್ ಪಾಸಾಗಿದ್ರೆ ಬಿಇಎಲ್‌ನಲ್ಲಿದೆ ಭರ್ಜರಿ ಉದ್ಯೋಗವಕಾಶ | ತಿಂಗಳಿಗೆ ₹55,000 ಸಂಬಳ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharath Electronics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೊಚ್ಚಿ, ಮುಂಬೈ, ಬೆಂಗಳೂರು, ವಿಶಾಖಪಟ್ಟಣಂನಲ್ಲಿ ಉದ್ಯೋಗವಿರುತ್ತದೆ.

ಒಟ್ಟು 41 ಪ್ರಾಜೆಕ್ಟ್​ ಎಂಜಿನಿಯರ್(Project Engineer), ಟ್ರೇನಿ ಎಂಜಿನಿಯರ್(Trainee Engineer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 22, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಿ.

ಸಂಸ್ಥೆ : ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
ಹುದ್ದೆ: ಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಎಂಜಿನಿಯರ್
ಒಟ್ಟು ಹುದ್ದೆ : 41
ವೇತನ ಮಾಸಿಕ :ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹30,000-55,000 ವೇತನ ನೀಡಲಾಗುವುದು.
ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್ ತೇರ್ಗಡೆ ಹೊಂದಿರಬೇಕು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 22/12/2022

ಹುದ್ದೆಯ ವಿವರ :
ಪ್ರಾಜೆಕ್ಟ್​ ಎಂಜಿನಿಯರ್-I – 37 ಹುದ್ದೆಗಳು
ಟ್ರೇನಿ ಎಂಜಿನಿಯರ್-I- 4 ಹುದ್ದೆಗಳು

ವಿದ್ಯಾರ್ಹತೆ:
ಪ್ರಾಜೆಕ್ಟ್​ ಎಂಜಿನಿಯರ್-I – ಕಂಪ್ಯೂಟರ್ ಸೈನ್ಸ್​/ಐಟಿ/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಟೆಲಿಕಮ್ಯುನಿಕೇಶನ್ಸ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್, ಬಿಎಸ್ಸಿ
ಟ್ರೇನಿ ಎಂಜಿನಿಯರ್-I- ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಟೆಲಿಕಮ್ಯುನಿಕೇಶನ್ಸ್​ನಲ್ಲಿ ಬಿಇ/ ಬಿ.ಟೆಕ್

ವಯೋಮಿತಿ:
ಪ್ರಾಜೆಕ್ಟ್​ ಎಂಜಿನಿಯರ್-I – 32 ವರ್ಷ
ಟ್ರೇನಿ ಎಂಜಿನಿಯರ್-I- 28 ವರ್ಷ
ಒಬಿಸಿ(NLC) ಅಭ್ಯರ್ಥಿಗಳು- 3 ವರ್ಷ, SC/ST ಅಭ್ಯರ್ಥಿಗಳು-5 ವರ್ಷ, PWD ಅಭ್ಯರ್ಥಿಗಳು- 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು- ಇಲ್ಲ
ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗೆ 400 ರೂ.
ಟ್ರೇನಿ ಎಂಜಿನಿಯರ್ ಹುದ್ದೆಗೆ 150 ರೂ.
ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್​ಲೈನ್

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಪ್ರಾಜೆಕ್ಟ್​ ಎಂಜಿನಿಯರ್- ಮಾಸಿಕ 40,000-55,000
ಟ್ರೇನಿ ಎಂಜಿನಿಯರ್-ಮಾಸಿಕ ₹30,000-40,000

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ವಿಳಾಸ : ಸೀನಿಯರ್ ಡೆಪ್ಯುಟಿ ಜನರಲ್ ಮ್ಯಾನೇಜರ್(HR),
ನಾವಲ್ ಸಿಸ್ಟಮ್ಸ್ SBU
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಜಾಲಹಳ್ಳಿ ಪೋಸ್ಟ್
ಬೆಂಗಳೂರು-560013

Leave A Reply

Your email address will not be published.