Smart TV: ಗ್ರಾಹಕರೇ ಭರ್ಜರಿ ಆಫರ್ |ಕೇವಲ 6 ಸಾವಿರ ಕೊಟ್ಟು ಈ 32 ಇಂಚಿನ ಸ್ಮಾರ್ಟ್ ಟಿವಿ ನಿಮ್ಮದಾಗಿಸಿ!!!
ಜನರು ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳುತ್ತಾರೆ ಅನ್ನೋದು ಸತ್ಯ. ಹೌದು ಸಿನಿಮಾ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. ಅದಲ್ಲದೆ ಈಗಿನ ಕಾಲದ ಸ್ಮಾರ್ಟ್ಟಿವಿಗಳ ಫೀಚರ್ಸ್ಗಳು ಕೂಡ ಮೊಬೈಲ್ನಂತೆಯೇ ಫೀಚರ್ಸ್ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್ಸೀರಿಸ್, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್ಟಿವಿಗಳಲ್ಲೇ ನೋಡಬಹುದು.
ಸದ್ಯ ಹೊಸ ಸ್ಮಾರ್ಟ್ ಟಿವಿ ಖರೀದಿಸುವವರಿಗೆ ಸ್ಮಾರ್ಟ್ ಟಿವಿ ಕಂಪನಿ ಹೊಸ ಆಫರ್ ಬಿಡುಗಡೆ ಮಾಡಿದೆ. ಇದು ಸ್ಮಾರ್ಟ್ಫೋನ್ಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಮೊಬೈಲ್ನಲ್ಲಿ ಇರುವಂತಹ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಇತ್ತೀಚಿನ ಸ್ಮಾರ್ಟ್ ಟಿವಿಗಳಲ್ಲೂ ಬಂದಿದೆ. ಅದ್ದರಿಂದ ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಬಹಳಷ್ಟು ಬೇಡಿಕೆಯಿದೆ. ಅದಕ್ಕಾಗಿಯೇ ಸ್ಮಾರ್ಟ್ಟಿವಿಯ ಕೆಲವೊಂದು ಕಂಪನಿಗಳು ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ನೀವು ಕ್ರೋಮಾ ವೆಬ್‌ಸೈಟ್‌ನಲ್ಲಿ ಫಾಕ್ಸ್‌ಸ್ಕೈ ಸ್ಮಾರ್ಟ್ ಟಿವಿ ಕೇವಲ ರೂ. 6740 ಸಾವಿರ ರೂಪಾಯಿಗೆ ಕೊಂಡುಕೊಳ್ಳಬಹುದು . ಇದು ಕೆಲವು ದಿನಗಳವರೆಗೆ ಮಾತ್ರ ಇರುವ ಕೊಡುಗೆಯಾಗಿದೆ. ಈ ಟಿವಿಯ ಎಮ್ಆರ್ಪಿ 22,499 ರೂಪಾಯಿಯಾಗಿದೆ. ಅಂದರೆ ನೀವು ಈ ಟಿವಿಯನ್ನು ಶೇಕಡಾ 70% ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಫಾಕ್ಸ್‌ಸ್ಕೈ 32 ಇಂಚಿನ ಹೆಚ್ಡಿ LED ಸ್ಮಾರ್ಟ್ಟಿವಿಯ ಫೀಚರ್ಸ್ 2021 ರ ಮಾದರಿಗೆ ಹೋಲುತ್ತದೆ.
ಈ ಸ್ಮಾರ್ಟ್ಟಿವಿ ಮೇಲೆ ವಿಶೇಷವಾಗಿ ಬ್ಯಾಂಕ್ ಕೊಡುಗೆಗಳೂ ಇವೆ. ಹೆಚ್ಎಸ್ಬಿಸಿ ಬ್ಯಾಂಕ್ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿಯನ್ನು ಖರೀದಿಸಿದರೆ ಶೇಕಡಾ 7.5% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಫೆಡರಲ್ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಆಫರ್ಸ್ ಅನ್ನು ನೀಡಿದೆ.
ನೀವು ಈ ಟಿವಿಯನ್ನು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇಕಡಾ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಐಸಿಐಸಿಐ ಬ್ಯಾಂಕ್ ಗ್ರಾಹಕರು ಕೂಡ ಬ್ಯಾಂಕ್ಗಳ ಆಧಾರದಲ್ಲಿ ಖರೀದಿಸಿದರೆ ಆಫರ್ ಅನ್ನು ಪಡೆಯಬಹುದಾಗಿದೆ. ಈ ಎಲ್ಲಾ ಆಫರ್ಸ್ ಅನ್ನು ಸೇರಿಸಿದರೆ ಸ್ಮಾರ್ಟ್ಟಿವಿ ಬಹಳಷ್ಟು ಕಡಿಮೆ ಬೆಲಯಲ್ಲಿ ಪಡೆಯಬಹುದಾಗಿದೆ.
ಅಲ್ಲದೆ ಈ ಟಿವಿಯನ್ನುಇಎಮ್ಐ ನಲ್ಲೂ ಖರೀದಿಸಬಹುದು. ತಿಂಗಳ ಇಎಮ್ಐ 317 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 24 ತಿಂಗಳ ಇಎಮ್ಐ ಅವಧಿಗೆ ಅನ್ವಯಿಸುತ್ತದೆ. ವರ್ಷದ ಇಎಮ್ಐ ಅನ್ನು ಆಯ್ಕೆ ಮಾಡಿದರೆ ತಿಂಗಳಿಗೆ ಇಎಮ್ಐ ರೂ. 605 ಪಾವತಿಸಬೇಕು. ಆರು ತಿಂಗಳ ಇಎಂಐ ನಲ್ಲಿ ರೂ. 1170 ಪಾವತಿಸಬೇಕು. ಒಂದು ವೇಳೆ ಮೂರು ತಿಂಗಳ ಇಎಮ್ಐ ಅನ್ನು ಆರಿಸಿದರೆ, ತಿಂಗಳಿಗೆ 2295 ರೂಪಾಯಿ ಕಟ್ಟಬೇಕಾಗುತ್ತದೆ
ಈ ಫಾಕ್ಸ್‌ಸ್ಕೈ ಸ್ಮಾರ್ಟ್ಟಿವಿಯು 60 Hz ರಿಫ್ರೆಶ್ ರೇಟ್, 2 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು, ವೈಫೈ, ಆಂಡ್ರಾಯ್ಡ್ ಓಎಸ್, 30 ವ್ಯಾಟ್ ಸ್ಪೀಕರ್‌ಗಳು, ಡಾಲ್ಬಿ ಆಡಿಯೋ, ಎ ಪ್ಲಸ್ ಗ್ರೇಡ್ ಪ್ಯಾನೆಲ್‌ನಂತಹ ಫೀಚರ್ಸ್ಗಳನ್ನು ಹೊಂದಿದೆ. ಹಾಗೆಯೇ ಈ ಟಿ.ವಿ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, G5, Eros Now, ಜಿಯೋ ಸಿನಿಮಾ ಮತ್ತು ಸೋನಿಯಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಕೂಡ ಇದರಲ್ಲಿ ಲಭ್ಯವಿದೆ.
ಪ್ರಸ್ತುತ ಫಾಕ್ಸ್‌ಸ್ಕೈ ಎಂಬ ಹೆಸರಿನ ಸ್ಮಾರ್ಟ್ಟಿವಿ ಇತ್ತೀಚಿಗೆ ಬಿಡುಗಡೆಯಾದ ಬ್ರಾಂಡ್ ಆಗಿದೆ. ಇದು ಬಹಳಷ್ಟು ಫೀಚರ್ಸ್ ಅನ್ನು ಹೊಂದಿದ್ದು ಮಾರಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಸ್ಮಾರ್ಟ್ಟವಿಗಳಲ್ಲಿ ಇದು ಒಂದಾಗಿದೆ.