ರಕ್ತಹೀನತೆ ಸಮಸ್ಯೆ ಕಾಡಬಾರದು ಅಂದ್ರೆ ಈ ಹಣ್ಣುಗಳನ್ನು ಸೇವಿಸಿ!

ದಿನನಿತ್ಯದ ಜೀವನದಲ್ಲಿ ನಾವು ಮಾಮೂಲಿ ಆಹಾರಗಳನ್ನು ಸೇವಿಸುತ್ತೇವೆ. ಅದೆಷ್ಟೇ ಪೌಷ್ಟಿಕ ಆಹಾರಗಳನ್ನು ಸೇವಿಸಿದರು ಕೂಡ ಹಣ್ಣು ಗಳು ನಮ್ಮ ದೇಹಕ್ಕೆ ಬೇಕೆ ಬೇಕು. ಯಾಕೆಂದರೆ ಇವುಗಳು ದೇಹದಲ್ಲಿ ಇರುವ ನರ ನಾಡಿಗಳನ್ನು ಶಕ್ತಿಯುತಗೊಳಿಸುತ್ತದೆ. ಹಾಗಾದ್ರೆ ಯಾವೆಲ್ಲ ಹಣ್ಣುಗಳನ್ನು ಸೇವಿಸಿದರೆ ನಮ್ಮ ರಕ್ತಗಳಿಗೆ ಇನ್ನಷ್ಟು ಎನರ್ಜಿ ನೀಡುತ್ತದೆ ಎಂಬುದು ತಿಳಿಯೋಣ ಬನ್ನಿ.

ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸಲು ಬಾಳೆಹಣ್ಣನ್ನು ಸೇವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.

ದಾಳಿಂಬೆಯನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಬಹುದು. ಕಬ್ಬಿಣ, ವಿಟಮಿನ್-ಎ, ವಿಟಮಿನ್-ಸಿ, ವಿಟಮಿನ್-ಇ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ನಿಮ್ಮ ದೇಹದಲ್ಲಿನ ರಕ್ತದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಹ ಹೆಚ್ಚುತ್ತದೆ. ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದರೆ ದಾಳಿಂಬೆ ರಸವನ್ನು ಹೆಚ್ಚು ಸೇವಿಸಿ.

ವಿಟಮಿನ್-ಸಿ ಅಂಶವು ಕಿತ್ತಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಸೇವಿಸುವುದು ಬಹಳ ಪ್ರಯೋಜನಕಾರಿ.ನೀವು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸಲು ಬಯಸಿದರೆ, ಪ್ರತಿದಿನ ಒಂದು ಕಿತ್ತಳೆಯನ್ನು ಸೇವಿಸಲೇಬೇಕು. ಅದರಲ್ಲೂ ಕಿತ್ತಳೆ ಯಾವ ಕಾಲದಲ್ಲಿ ಬಿಡುತ್ತದೆಯೋ ಅದೇ ಕಾಲದಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನಕಾರಿ.

ಸೇಬು:- ಪ್ರತಿನಿತ್ಯ ಸೇಬನ್ನ ಸೇವಿಸಿದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ದೇಹದಿಂದ ರಕ್ತದ ಕೊರತೆಯನ್ನು ನಿಯಂತ್ರಿಸಲು ನೀವು ನಿತ್ಯ ಒಂದು ಆಪಲ್‌ ಅನ್ನು ಸೇವಿಸಬೇಕು. ಇದರ ಸೇವನೆಯು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತದ ಕೊರತೆಯನ್ನು ಹೆಚ್ಚಿಸಲು ಬಯಸಿದರೆ, ಪ್ರತಿದಿನ 1 ಸೇಬನ್ನು ಸಿಪ್ಪೆಯ ಸಮೇತ ಸೇವಿಸಿ. ಇದು ನಿಮ್ಮ ದೇಹದಲ್ಲಿ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸುತ್ತದೆ.

ಈ ರೀತಿಯಾದಂತಹ ಹಣ್ಣುಗಳನ್ನು ಪ್ರತಿನಿತ್ಯ ಇಲ್ಲದಿದ್ದರೆ ವಾರದಲ್ಲಿ ಎರಡು ಬಾರಿಯಾದರೂ ಸೇವಿಸಬೇಕು. ಹಣ್ಣು ಇಲ್ಲದಿದ್ದರೆ ಅದರ ಜ್ಯೂಸ್ ಆದರೂ ಕುಡಿಯಬಹುದು. ಆದರೆ ಐಸ್ ಪ್ರಮಾಣ ಕಡಿಮೆ ಇರಬೇಕು.

Leave A Reply

Your email address will not be published.