Smart TV: ಗ್ರಾಹಕರೇ ಭರ್ಜರಿ ಆಫರ್ |ಕೇವಲ 6 ಸಾವಿರ ಕೊಟ್ಟು ಈ 32 ಇಂಚಿನ ಸ್ಮಾರ್ಟ್ ಟಿವಿ ನಿಮ್ಮದಾಗಿಸಿ!!!

ಜನರು ಎಷ್ಟೇ ಕೆಲಸದ ಒತ್ತಡ ಇದ್ದರೂ ಸಹ ಮನೋರಂಜನೆಗಾಗಿ ಸ್ವಲ್ಪ ಬಿಡುವು ಮಾಡಿಕೊಳ್ಳುತ್ತಾರೆ ಅನ್ನೋದು ಸತ್ಯ. ಹೌದು ಸಿನಿಮಾ, ಆಟೋಟ, ರಿಯಾಲಿಟಿ ಶೋ ಮುಂತಾದವುಗಳನ್ನು ವೀಕ್ಷಿಸುವುದರಲ್ಲಿ ಕೆಲವರಂತೂ ಎತ್ತಿದ ಕೈ ಅನ್ನಬಹುದು. ಅದಲ್ಲದೆ ಈಗಿನ ಕಾಲದ ಸ್ಮಾರ್ಟ್​ಟಿವಿಗಳ ಫೀಚರ್ಸ್​ಗಳು ಕೂಡ ಮೊಬೈಲ್​ನಂತೆಯೇ ಫೀಚರ್ಸ್​ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್​ಸೀರಿಸ್​, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್​ಟಿವಿಗಳಲ್ಲೇ ನೋಡಬಹುದು.

ಸದ್ಯ ಹೊಸ ಸ್ಮಾರ್ಟ್ ​ಟಿವಿ ಖರೀದಿಸುವವರಿಗೆ ಸ್ಮಾರ್ಟ್​ ಟಿವಿ ಕಂಪನಿ ಹೊಸ ಆಫರ್ ಬಿಡುಗಡೆ ಮಾಡಿದೆ. ಇದು ಸ್ಮಾರ್ಟ್​ಫೋನ್​ಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಮೊಬೈಲ್​ನಲ್ಲಿ ಇರುವಂತಹ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್​ಗಳು ಇತ್ತೀಚಿನ ಸ್ಮಾರ್ಟ್ ​ಟಿವಿಗಳಲ್ಲೂ ಬಂದಿದೆ. ಅದ್ದರಿಂದ ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ​ಟಿವಿಗಳ ಮೇಲೆ ಬಹಳಷ್ಟು ಬೇಡಿಕೆಯಿದೆ. ಅದಕ್ಕಾಗಿಯೇ ಸ್ಮಾರ್ಟ್​ಟಿವಿಯ ಕೆಲವೊಂದು ಕಂಪನಿಗಳು ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ನೀವು ಕ್ರೋಮಾ ವೆಬ್‌ಸೈಟ್‌ನಲ್ಲಿ ಫಾಕ್ಸ್‌ಸ್ಕೈ ಸ್ಮಾರ್ಟ್ ಟಿವಿ ಕೇವಲ ರೂ. 6740 ಸಾವಿರ ರೂಪಾಯಿಗೆ ಕೊಂಡುಕೊಳ್ಳಬಹುದು . ಇದು ಕೆಲವು ದಿನಗಳವರೆಗೆ ಮಾತ್ರ ಇರುವ ಕೊಡುಗೆಯಾಗಿದೆ. ಈ ಟಿವಿಯ ಎಮ್​ಆರ್​​ಪಿ 22,499 ರೂಪಾಯಿಯಾಗಿದೆ. ಅಂದರೆ ನೀವು ಈ ಟಿವಿಯನ್ನು ಶೇಕಡಾ 70% ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಫಾಕ್ಸ್​ಸ್ಕೈ 32 ಇಂಚಿನ ಹೆಚ್​​ಡಿ LED ಸ್ಮಾರ್ಟ್​​ಟಿವಿಯ ಫೀಚರ್ಸ್​ 2021 ರ ಮಾದರಿಗೆ ಹೋಲುತ್ತದೆ.

ಈ ಸ್ಮಾರ್ಟ್​​ಟಿವಿ ಮೇಲೆ ವಿಶೇಷವಾಗಿ ಬ್ಯಾಂಕ್ ಕೊಡುಗೆಗಳೂ ಇವೆ. ಹೆಚ್​ಎಸ್​​ಬಿಸಿ ಬ್ಯಾಂಕ್ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿಯನ್ನು ಖರೀದಿಸಿದರೆ ಶೇಕಡಾ 7.5% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಫೆಡರಲ್ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಆಫರ್ಸ್​ ಅನ್ನು ನೀಡಿದೆ.

ನೀವು ಈ ಟಿವಿಯನ್ನು ಫೆಡರಲ್​​ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇಕಡಾ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಐಸಿಐಸಿಐ ಬ್ಯಾಂಕ್ ಗ್ರಾಹಕರು ಕೂಡ ಬ್ಯಾಂಕ್​ಗಳ ಆಧಾರದಲ್ಲಿ ಖರೀದಿಸಿದರೆ ಆಫರ್​ ಅನ್ನು ಪಡೆಯಬಹುದಾಗಿದೆ. ಈ ಎಲ್ಲಾ ಆಫರ್ಸ್​ ಅನ್ನು ಸೇರಿಸಿದರೆ ಸ್ಮಾರ್ಟ್​ಟಿವಿ ಬಹಳಷ್ಟು ಕಡಿಮೆ ಬೆಲಯಲ್ಲಿ ಪಡೆಯಬಹುದಾಗಿದೆ.

ಅಲ್ಲದೆ ಈ ಟಿವಿಯನ್ನುಇಎಮ್​ಐ ನಲ್ಲೂ ಖರೀದಿಸಬಹುದು. ತಿಂಗಳ ಇಎಮ್​ಐ 317 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 24 ತಿಂಗಳ ಇಎಮ್​ಐ ಅವಧಿಗೆ ಅನ್ವಯಿಸುತ್ತದೆ. ವರ್ಷದ ಇಎಮ್​ಐ ಅನ್ನು ಆಯ್ಕೆ ಮಾಡಿದರೆ ತಿಂಗಳಿಗೆ ಇಎಮ್​ಐ ರೂ. 605 ಪಾವತಿಸಬೇಕು. ಆರು ತಿಂಗಳ ಇಎಂಐ ನಲ್ಲಿ ರೂ. 1170 ಪಾವತಿಸಬೇಕು. ಒಂದು ವೇಳೆ ಮೂರು ತಿಂಗಳ ಇಎಮ್​ಐ ಅನ್ನು ಆರಿಸಿದರೆ, ತಿಂಗಳಿಗೆ 2295 ರೂಪಾಯಿ ಕಟ್ಟಬೇಕಾಗುತ್ತದೆ

ಈ ಫಾಕ್ಸ್​​ಸ್ಕೈ ಸ್ಮಾರ್ಟ್​​ಟಿವಿಯು 60 Hz ರಿಫ್ರೆಶ್ ರೇಟ್, 2 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು, ವೈಫೈ, ಆಂಡ್ರಾಯ್ಡ್ ಓಎಸ್, 30 ವ್ಯಾಟ್ ಸ್ಪೀಕರ್‌ಗಳು, ಡಾಲ್ಬಿ ಆಡಿಯೋ, ಎ ಪ್ಲಸ್ ಗ್ರೇಡ್ ಪ್ಯಾನೆಲ್‌ನಂತಹ ಫೀಚರ್ಸ್​​ಗಳನ್ನು ಹೊಂದಿದೆ. ಹಾಗೆಯೇ ಈ ಟಿ.ವಿ ನೆಟ್​​ಫ್ಲಿಕ್ಸ್​​, ಅಮೆಜಾನ್​ ಪ್ರೈಮ್ ವಿಡಿಯೋ, G5, Eros Now, ಜಿಯೋ ಸಿನಿಮಾ ಮತ್ತು ಸೋನಿಯಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಕೂಡ ಇದರಲ್ಲಿ ಲಭ್ಯವಿದೆ.

ಪ್ರಸ್ತುತ ಫಾಕ್ಸ್​​ಸ್ಕೈ ಎಂಬ ಹೆಸರಿನ ಸ್ಮಾರ್ಟ್​ಟಿವಿ ಇತ್ತೀಚಿಗೆ ಬಿಡುಗಡೆಯಾದ ಬ್ರಾಂಡ್ ಆಗಿದೆ. ಇದು ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದ್ದು ಮಾರಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಸ್ಮಾರ್ಟ್​ಟವಿಗಳಲ್ಲಿ ಇದು ಒಂದಾಗಿದೆ.

Leave A Reply

Your email address will not be published.