ಆಂಧ್ರದಲ್ಲಿ ಭೀಕರ ಕೊಲೆ; ಹೆಂಡತಿಯನ್ನು ಕೊಂದು ಡ್ರಮ್ ನಲ್ಲಿ ಬರೋಬ್ಬರಿ 1 ವರ್ಷ ಅಡಗಿಸಿ ಇಟ್ಟ ಗಂಡ

ಇತ್ತೀಚಿನ ದಿನಗಳಲ್ಲಿ ಕೊಲೆ ಮಾಡುವ ದುರುಳರು ಕಿಂಚಿತ್ತು ಕೂಡ ಹೆದರದೆ ಹೇಯ ಕೃತ್ಯ ಎಸಗಿ ಉಳಿದವರ ಮನದಲ್ಲಿ ನಡುಕ ಹುಟ್ಟಿಸುತ್ತಾರೆ. ಇತ್ತೀಚೆಗಷ್ಟೇ ಜಗತ್ತಿನೆಲ್ಲೆಡೆ ಭಯದ ವಾತಾವರಣ ಸೃಷ್ಟಿಸಿದ ಶ್ರದ್ಧಾ ಕೊಲೆಯ ಬಳಿಕ ಮತ್ತೊಂದು ಅದೆ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ.

 

ಹಲವು ತಿಂಗಳುಗಳಿಂದ ತಮ್ಮ ಮನೆಯಲ್ಲಿ ಬಾಡಿಗೆಗಿದ್ದ ಬಾಡಿಗೆದಾರರು ಬಾಡಿಗೆಯನ್ನು ಪಾವತಿ ಮಾಡದೆ ಇದ್ದುದರಿಂದ ಮನೆಯ ಮಾಲೀಕರು ಮನೆಯ ಬಾಗಿಲು ಒಡೆದು ನೋಡಿದ ಸಂದರ್ಭ ಡ್ರಮ್ ಒಳಗೆ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿವೆ.

ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳೂ ಎಗ್ಗಿಲ್ಲದೆ ನಡೆಯುತ್ತಿದ್ದು, ನಿಷ್ಕರುಣಾ ಧೋರಣೆ ಅನುಸರಿಸಿ ಕೊಲೆಗೈಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ. ಇದೀಗ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ ಬಾಡಿಗೆ ಮನೆಯೊಳಗೆ ಇರಿಸಲಾಗಿದ್ದ ಡ್ರಮ್‌ನಲ್ಲಿ ಮಹಿಳೆಯ ಮೃತದೇಹದ ಭಾಗಗಳು ಪತ್ತೆಯಾಗಿದ್ದು, ಆ ಮೃತದೇಹ (Dead Body) 1 ವರ್ಷದಿಂದ ಅದೇ ಡ್ರಮ್​ ನಲ್ಲಿಯೇ ಇದ್ದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಶಾಖಪಟ್ಟಣಂನ ಮಧುರವಾಡದಲ್ಲಿ ಈ ಪ್ರಕರಣ ನಡೆದಿದ್ದು, ಮನೆಯಲ್ಲಿ ಬಾಡಿಗೆಗೆ ಇದ್ದವರು ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಆ ಮನೆಯಲ್ಲಿದ್ದ ಸಾಮಾನುಗಳನ್ನು ಹೊರಗೆ ಹಾಕಲು ಮನೆಯ ಮಾಲೀಕರು ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿದಾಗ ಶವವನ್ನು ಅಡಗಿಸಿ ಇಟ್ಟ ವಿಚಾರ ಬೆಳಕಿಗೆ ಬಂದಿದೆ. 2021ರ ಜೂನ್ ತಿಂಗಳಲ್ಲಿ ಬಾಡಿಗೆದಾರನು ತನ್ನ ಹೆಂಡತಿ ಗರ್ಭಿಣಿಯಾಗಿದ್ದಾಳೆ ಎಂದು ಹೇಳಿ ಊರಿಗೆ ಹೋಗಿದ್ದು, ಆ ಸಂದರ್ಭ ತನ್ನ ವಸ್ತುಗಳನ್ನು ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಈ ಬಳಿಕ ಮನೆ ಬಾಡಿಗೆಯನ್ನು ಆತ ಕಟ್ಟಿರಲಿಲ್ಲ.

ಅದಾದ ಬಳಿಕ ಒಂದೆರಡು ಬಾರಿ ಆ ಮನೆಗೆ ಆತ ಬಂದಿದ್ದರೂ ಬಾಡಿಗೆಯನ್ನು ಕಟ್ಟಿಲ್ಲ . ಈ ವೇಳೆ, ಹೆಂಡತಿ- ಮಗುವನ್ನು ಕರೆದುಕೊಂಡು ಬೇಗ ಬರುತ್ತೇನೆ ಎಂದು ಆತ ಹೇಳಿ ಊರಿಗೆ ಹಿಂದಿರುಗಿದ್ದಾನೆ. ಇದಲ್ಲದೇ ಮನೆಯಿಂದ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತಿತ್ತು.

1 ವರ್ಷ ಕಳೆದರೂ ಕೂಡ ಹೆಚ್ಚು ಆತನನ್ನು ಕಾದು ಮಾಲೀಕ ಬಲವಂತವಾಗಿ ಆ ಮನೆಗೆ ನುಗ್ಗಿ ಬಾಡಿಗೆದಾರನ ಸಾಮಾನುಗಳನ್ನು ಹೊರಗೆ ಹಾಕಿದ್ದಾರೆ. ಆಗ ಮನೆಯೊಳಗೆ ಇದ್ದ ಡ್ರಮ್​ನಲ್ಲಿ ಮಹಿಳೆಯ ಕೊಳೆತ ದೇಹದ ಭಾಗಗಳು ಪತ್ತೆಯಾಗಿವೆ.

2021ರ ಜೂನ್​ನಲ್ಲೇ ಆತ ಮಹಿಳೆಯ ದೇಹವನ್ನು ತುಂಡು ಮಾಡಿ ಆ ಡ್ರಮ್​ನೊಳಗೆ ತುಂಬಿಸಿಟ್ಟಿರಬಹುದು ಎಂದು ಊಹಿಸಲಾಗಿದೆ. ಆದರೆ, ಆ ಶವ ಯಾರದ್ದು ಎಂಬ ಬಗ್ಗೆ ಇನ್ನೂ ಕೂಡ ಮಾಹಿತಿ ತಿಳಿದು ಬಂದಿಲ್ಲ. ಈ ನಡುವೆ ಆ ಶವ ಆತನ ಹೆಂಡತಿಯದ್ದು ಆಗಿರಬಹುದು ಎಂಬ ಸಂಶಯ ಖಾಕಿ ಪಡೆಗೆ ಉಂಟಾಗಿದ್ದು, ಆಕೆ ಅಲ್ಲದೆ ಹೋದರೆ, ಬೇರೆ ಯಾರದ್ದು?? ಆತನ ಪತ್ನಿ ನಿಜಕ್ಕೂ ಗರ್ಭಿಣಿಯಾಗಿ ದ್ದಿರಬಹುದೆ?? ಆಕೆ ಎಲ್ಲಿದ್ದಾಳೆ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದ್ದು, ಸದ್ಯ ಪೋಲಿಸ್ ಪಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

Leave A Reply

Your email address will not be published.